CinemaKarnatakaLatestMain PostSandalwoodSouth cinema

ಬಳ್ಳಾರಿಗೆ ಬರಲಿದ್ದಾರೆ ವಿಜಯ್ ಮತ್ತು ರಶ್ಮಿಕಾ ಮಂದಣ್ಣ

ಮಿಳಿನ ಸೂಪರ್ ಸ್ಟಾರ್ ವಿಜಯ್ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯದಲ್ಲೇ ಬಳ್ಳಾರಿಗೆ ಆಗಮಿಸಲಿದ್ದಾರೆ. ಇದೇ ಮೊದಲ ಬಾರಿಗೆ ಈ ಜೋಡಿ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ಮತ್ತು ಒಟ್ಟಾಗಿ ಕರ್ನಾಟಕಕ್ಕೆ ಬರುತ್ತಿರುವುದರಿಂದ ರಶ್ಮಿಕಾ ಅಭಿಮಾನಿಗಳಿಗೆ ಸಹಜವಾಗಿಯೇ ಸಂಭ್ರಮ ತಂದಿದೆ. ಅಷ್ಟಕ್ಕೂ ಈ ಜೋಡಿ ಬಳ್ಳಾರಿಗೆ ಬರುತ್ತಿರುವುದು ಯಾಕೆ ಎನ್ನುವುದನ್ನು ಸ್ವತಃ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಬಹಿರಂಗ ಪಡಿಸಿದ್ದಾರೆ.

ಬಳ್ಳಾರಿಗೆ ಬರಲಿದ್ದಾರೆ ವಿಜಯ್ ಮತ್ತು ರಶ್ಮಿಕಾ ಮಂದಣ್ಣ

ವಿಜಯ್ ಮತ್ತು ರಶ್ಮಿಕಾ ದೇವರಕೊಂಡ ‘ವಾರಿಸು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ವಿಜಯ್ ಜೊತೆ ರಶ್ಮಿಕಾ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಹಾಡೊಂದರ ಚಿತ್ರೀಕರಣ ಬಳ್ಳಾರಿಯಲ್ಲಿ ನಡೆಯಲಿದೆ. ಅದಕ್ಕಾಗಿ ಅವರು ಬಳ್ಳಾರಿಗೆ ಆಗಮಿಸುತ್ತಿದ್ದಾರೆ. ಈ ಹಾಡಿನ ನೃತ್ಯ ಸಂಯೋಜನೆಯನ್ನು ಜಾನಿ ಮಾಸ್ಟರ್ ಮಾಡುತ್ತಿದ್ದು, ಈಗಾಗಲೇ ಬಳ್ಳಾರಿ ಸುತ್ತಮುತ್ತ ಲೋಕೇಶನ್ ಕೂಡ ನೋಡಿಕೊಂಡು ಹೋಗಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ದೀಪಿಕಾ ದಾಸ್ ವೈಲ್ಡ್ ಕಾರ್ಡ್ ಎಂಟ್ರಿ

ಬಳ್ಳಾರಿಗೆ ಬರಲಿದ್ದಾರೆ ವಿಜಯ್ ಮತ್ತು ರಶ್ಮಿಕಾ ಮಂದಣ್ಣ

ಕೆಲವೇ ದಿನಗಳಲ್ಲಿ ವಾರಿಸು ಸಿನಿಮಾದ ಬ್ಯುಟಿಫುಲ್ ಗೀತೆಯೊಂದು ಈ ನೆಲದಲ್ಲಿ ಚಿತ್ರೀಕರಣಗೊಳ್ಳಲಿದೆ. ಹಾಗಾಗಿ ಶೂಟಿಂಗ್ ಸ್ಥಳವನ್ನು ನೋಡಲು ಬಂದಿದೆ. ಬಂದಿರುವ ಕೆಲಸ ಪಕ್ಕಾ ಆಗಿದ್ದು, ಆ ಭಾಗದ ಜನತೆ ಸಹಕರಿಸಿದ್ದಕ್ಕೆ ಧನ್ಯವಾದಗಳು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ, ಸದ್ಯದಲ್ಲೇ ಈ ಹಾಡಿನ ಶೂಟಿಂಗ್ ನಡೆಸುವುದಾಗಿಯೂ ಅವರು ಹೇಳಿದ್ದಾರೆ.

ಬಳ್ಳಾರಿಗೆ ಬರಲಿದ್ದಾರೆ ವಿಜಯ್ ಮತ್ತು ರಶ್ಮಿಕಾ ಮಂದಣ್ಣ

ಚಿಕ್ಕಂದಿನಿಂದಲೂ ವಿಜಯ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವರು ರಶ್ಮಿಕಾ. ಅವರೊಂದಿಗೆ ನಟಿಸಬೇಕು ಎಂದು ಕನಸು ಕೂಡ ಕಂಡವರು. ವಾರಿಸು ಮೂಲಕ ಕನಸು ನನಸಾಗಿದೆ. ವಂಶಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಬಹುತೇಕ ಟಾಕಿ ಭಾಗದ ಚಿತ್ರೀಕರಣ ಮುಗಿದಿದೆ. ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಉಳಿದಿದ್ದು,  ಆ ಹಾಡುಗಳಲ್ಲಿ ಒಂದನ್ನು ಕರ್ನಾಟಕದಲ್ಲಿ ಶೂಟ್ ಮಾಡುತ್ತಿದ್ದಾರೆ ನಿರ್ದೇಶಕರು.

Live Tv

Leave a Reply

Your email address will not be published. Required fields are marked *

Back to top button