ಬೆಂಗಳೂರು: ನಿಮ್ಮ ಹೆಮ್ಮೆಯ ಪಬ್ಲಿಕ್ ಟಿವಿ ಪ್ರಸ್ತುತಪಡಿಸುತ್ತಿರುವ “ವಿದ್ಯಾಪೀಠ” ಎಜುಕೇಶನ್ ಫೆಸ್ಟ್ ಗೆ ಇಂದು ಚಾಲನೆ ದೊರಕಲಿದೆ. ಪ್ರತಿಷ್ಠಿತ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಭಾಗವಹಿಸುತ್ತಿರೋ ಈ ಫೇಸ್ಟ್ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಲ್ಲೂ ಮಾಹಿತಿಗಳ ಭಂಡಾರವನ್ನೇ ನಿಮ್ಮ ಮುಂದೆ ಹೊತ್ತು ತರಲಿದೆ.
ವಿದ್ಯಾರ್ಥಿಗಳು ಹಾಗೂ ಶಿಕ್ಷಣ ತಜ್ಞರು, ವಿದ್ಯಾದೇಗುಲಗಳೆಂದು ಕರೆಯಲ್ಪಡುವ ಶಿಕ್ಷಣ ಸಂಸ್ಥೆಗಳು ಇವೆಲ್ಲವೂ ಒಂದೇ ಸೂರಿನಡಿ ಲಭ್ಯವಿರುವ ಕಾರ್ಯಕ್ರಮವೇ ನಿಮ್ಮ ಪಬ್ಲಿಕ್ ಟಿವಿಯ ಹೆಮ್ಮೆಯ ಕಾರ್ಯಕ್ರಮ ವಿದ್ಯಾಪೀಠ. ಪಬ್ಲಿಕ್ ಟಿವಿ ಮೊಟ್ಟ ಮೊದಲ ಬಾರಿಗೆ ಈ ಕಾರ್ಯಕ್ರಮ ಪ್ರಸ್ತುತ ಪಡಿಸುತ್ತಿದೆ. ಮಲ್ಲೇಶ್ವರಂ ಆಟದ ಮೈದಾನದಲ್ಲಿ ಇಂದು ಮತ್ತು ನಾಳೆ ನಡೆಯಲಿರೋ ಈ ಮೆಗಾ ಎಜುಕೇಶನ್ ಈವೆಂಟ್‍ಗೆ ಸಿದ್ಧತೆಗಳು ಪೂರ್ಣಗೊಂಡಿವೆ. ಉನ್ನತ ವ್ಯಾಸಂಗದ ಆಸೆ ಹೊತ್ತ ವಿದ್ಯಾರ್ಥಿಗಳಿಗೆ ಒಂದೇ ವೇದಿಕೆಯಲ್ಲಿ ಭವಿಷ್ಯದ ಹಾದಿಯನ್ನು ತೋರಿಸುವ ಕಾರ್ಯಕ್ರಮ ಇದಾಗಿದ್ದು, ಕಾರ್ಯಕ್ರಮದ ಪಟ್ಟಿ ಇಂತಿದೆ.
Advertisement
* 40 ಕ್ಕೂ ಹೆಚ್ಚು ಪ್ರತಿಷ್ಠಿತ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಭಾಗಿ.
* 20ಕ್ಕೂ ಹೆಚ್ಚು ಕೋರ್ಸ್‍ಗಳ ಬಗ್ಗೆ ಮಾಹಿತಿ.
* 10 ಮಂದಿ ನುರಿತ ಶಿಕ್ಷಣ ತಜ್ಞರಿಂದ ವಿಚಾರ ಸಂಕಿರಣ.
* ಸಿಇಟಿ, ಕಾಮೆಡ್ ಕೆ, ನೀಟ್ ಇನ್ನಿತರ ವಿಷಯಗಳ ಬಗ್ಗೆ ಮಾರ್ಗದರ್ಶನ.
* ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನಕ್ಕೂ ಮಾರ್ಗದರ್ಶನ.
Advertisement
ವಿದ್ಯಾಪೀಠ ಕಾರ್ಯಕ್ರಮದಲ್ಲಿ ಭಾಗವಹಿಸುವ ನುರಿತ ಶಿಕ್ಷಣ ತಜ್ಞರು:
Advertisement
1. ಶ್ರೀ ಗಂಗಾಧರಯ್ಯ: ಆಡಳಿತಾಧಿಕಾರಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ವಿಷಯ : ಸಿಇಟಿ ಬಗ್ಗೆ ಮಾಹಿತಿ
ಸಮಯ : ಬೆಳಗ್ಗೆ 11.30 – 12.15 ಗಂಟೆ
Advertisement
2. ಶ್ರೀ ಡಾ.ಎಸ್.ಕುಮಾರ್: ಕಾರ್ಯನಿರ್ವಾಹಕ ಕಾರ್ಯದರ್ಶಿ, ಕಾಮೆಡ್-ಕೆ
ವಿಷಯ : ಕಾಮೆಡ್-ಕೆ ಬಗ್ಗೆ ಮಾಹಿತಿ
ಸಮಯ : ಮಧ್ಯಾಹ್ನ 12.15 – 1.00 ಗಂಟೆ
3. ಡಾ.ಎಚ್.ಎಸ್ ನಾಗರಾಜ: ಶಿಕ್ಷಣ ತಜ್ಞರು
ವಿಷಯ : ಕೆರಿಯರ್ ಆಪರ್ಚುನಿಟಿ ಆಫ್ಟರ್ +2
ಸಮಯ : ಮಧ್ಯಾಹ್ನ 3 – 4 ಗಂಟೆ
4. ಡಾ.ಗುರುರಾಜ್ ಕರ್ಜಗಿ: ಅಧ್ಯಕ್ಷರು, ಅಕಾಡೆಮಿ ಫಾರ್ ಕ್ರಿಯೇಟೀವ್ ಟೀಚಿಂಗ್
ವಿಷಯ : ಆಪೊರ್ಚುನಿಟಿಸ್ ಬಿಹೈಂಡ್ ಟ್ರೆಡಿಷನಲ್ ಕೆರಿಯರ್
ಸಮಯ : ಮಧ್ಯಾಹ್ನ 4 – 5 ಗಂಟೆ
ಕಾರ್ಯಕ್ರಮ ನಡೆಯುವ ಸ್ಥಳ: ಸರ್ಕಾರಿ ಪ್ರಾಥಮಿಕ ಮಾದರಿ ಶಾಲೆ ಕ್ರೀಡಾಂಗಣ, ಮಲ್ಲೇಶ್ವರಂ 6ನೇ ಕ್ರಾಸ್, ಕೆಸಿ ಜನರಲ್ ಆಸ್ಪತ್ರೆ ಮತ್ತು ಮಲ್ಲೇಶ್ವರಂ ಪೊಲೀಸ್ ಠಾಣೆ ಎದುರು, ಮಲ್ಲೇಶ್ವರಂ,ಬೆಂಗಳೂರು.
ಲಕ್ಕಿ ಡಿಪ್: ವಿದ್ಯಾಪೀಠ ಕಾರ್ಯಕ್ರಮಕ್ಕೆ ಪ್ರವೇಶ ಉಚಿತ. ವಿದ್ಯಾರ್ಥಿಗಳು ಮತ್ತು ಪೋಷಕರು ಈ ಕಾರ್ಯಕ್ರಮವನ್ನ ಸದುಪಯೋಗಪಡಿಸಿಕೊಳ್ಳಲ್ಲಿ ಅನ್ನೋದು ಪಬ್ಲಿಕ್ ಟಿವಿಯ ಆಶಯ. ವಿದ್ಯಾಪೀಠಕ್ಕೆ ಬರೋ ವಿದ್ಯಾರ್ಥಿಗಳಿಗೆ ಅಕ್ಷಯ ತೃತೀಯದಂದು ಬಂಪರ್ ಬಹುಮಾನದ ಅವಕಾಶವಿದೆ. ವಿದ್ಯಾಪೀಠದಲ್ಲಿ ಭಾಗವಹಿಸೋ ವಿದ್ಯಾರ್ಥಿಗಳಿಗೆ ಲಕ್ಕಿ ಡಿಪ್ ಇರಲಿದೆ. ಲಕ್ಕಿ ಡಿಪ್ ನಲ್ಲಿ ಆಯ್ಕೆಯಾಗೋ ವಿದ್ಯಾರ್ಥಿಗಳಿಗೆ ಬಂಪರ್ ಬಹುಮಾನ ಸಿಗಲಿದೆ. ಕಾರ್ಯಕ್ರಮಕ್ಕೆ ಆಗಮದ ವೇಳೆ ರಿಜಿಸ್ಟ್ರೇಷನ್ ಬಳಿ ವಿದ್ಯಾರ್ಥಿಗಳು ತಮ್ಮ ಹೆಸರು, ಫೋನ್ ನಂಬರ್ ನಮೂದಿಸಬೇಕು. ಪ್ರತಿ ಗಂಟೆಗೊಮ್ಮೆ ಲಕ್ಕಿಡಿಪ್ ತೆಗದಯಲಿದ್ದು ಆಯ್ಕೆಯಾದವರಿಗೆ ಬಂಪರ್ ಬಹುಮಾನ ಸಿಗಲಿದೆ. ಬನ್ನಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ. ಮಾಹಿತಿ ಜೊತೆ ಬಹುಮಾನ ಗೆಲ್ಲಿ.