ಬೆಂಗಳೂರು: ವಿಧಾನಸಭಾ ಚುನಾವಣೆ (Vidhanasabha Election) ಗೆ ಮೂರು ತಿಂಗಳಿರುವಾಗ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯ ಸ್ಟ್ರಾಟೆಜಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮಂಡ್ಯ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಹೊಣೆಯನ್ನು ಸಚಿವ ಆರ್ ಅಶೋಕ್ (R Ashok) ಹೆಗಲಿಗೆ ವಹಿಸಲಾಗಿದೆ. ಹಳೇ ಮೈಸೂರು ಭಾಗದ ಕೇಂದ್ರ ಜಿಲ್ಲೆಯಾದ ಮಂಡ್ಯದ ಒಕ್ಕಲಿಗರ ಕೋಟೆಗಳನ್ನು ಗೆಲ್ಲಲು ಈ ಮೂಲಕ ಸಚಿವ ಆರ್ ಅಶೋಕ್‍ಗೆ ಬಿಗ್ ಟಾಸ್ಕ್ ಕೊಡಲಾಗಿದೆ. ಸಚಿವರಿಗೆ ಮಂಡ್ಯ ಟಾಸ್ಕ್ ನೀಡಿದ ದೆಹಲಿ ನಾಯಕರ ನಿರ್ಧಾರ ಅಚ್ಚರಿಗೂ ಕಾರಣವಾಗಿದೆ. ಆರ್ ಅಶೋಕ್ ಸಾಮರ್ಥ್ಯಕ್ಕೆ ಹೈಕಮಾಂಡ್ ನಿಂದ ಮಂಡ್ಯ (Mandya) ಅಗ್ನಿಪರೀಕ್ಷೆ ಗೆಲ್ಲಿಸಿಕೊಡುವ ಸವಾಲು ಕೊಡಲಾಗಿದೆ.
Advertisement
ನಿನ್ನೆ ಸಿಎಂ ಬೊಮ್ಮಾಯಿ (Basavaraj Bommai) ಯಿಂದ ಈ ಮಹತ್ತರ ಬದಲಾವಣೆಯ ಆದೇಶ ಪ್ರಕಟವಾಗಿದೆ. ಹೈಕಮಾಂಡ್ ಸೂಚನೆ ಮೇರೆಗೆ ಅಶೋಕ್‍ಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಹೊಣೆ ವಹಿಸಲಾಗಿದೆ. ಸಚಿವ ಗೋಪಾಲಯ್ಯ ಬಳಿ ಇದ್ದ ಜಿಲ್ಲಾ ಜವಾಬ್ದಾರಿ ಅಶೋಕ್ ಗೆ ವರ್ಗಾವಣೆ ಮಾಡಲಾಗಿದೆ. ಒಕ್ಕಲಿಗರ ಕೋಟೆಗಳನ್ನು ಗೆಲ್ಲಲು ಬಿಜೆಪಿ (BJP) ಯ ಮುಂಚೂಣಿ, ಪ್ರಭಾವಿ ಒಕ್ಕಲಿಗ ನಾಯಕನಿಗೆ ಹೊಣೆ ಕೊಡುವ ಮೂಲಕ ಹೈಕಮಾಂಡ್ ಒಕ್ಕಲಿಗ ಪಾಲಿಟಿಕ್ಸ್‍ನ ದಾಳ ಉರುಳಿಸಿದೆ.
Advertisement
Advertisement
ಕಳೆದ ವರ್ಷ ಜಿಲ್ಲಾ ಉಸ್ತುವಾರಿ ನೇಮಕ ವೇಳೆ ಮಂಡ್ಯ ಉಸ್ತುವಾರಿ ಬೇಡ ಅಂತ ಅಶೋಕ್ ಹೇಳಿದ್ರಂತೆ. ಕಾರಣ, ಬೆಂಗಳೂರು ಮೇಲೆ ಕಣ್ಣು ಹಾಕಿದ್ದರು ಅಶೋಕ್. ಆದರೆ ಯಾವ ಜಿಲ್ಲೆಯನ್ನೂ ಕೊಡದೇ ಅಶೋಕ್ ಗೆ ವರಿಷ್ಠರು ಶಾಕ್ ಕೊಟ್ಟಿದ್ದರು. ಇದರಿಂದ ಆರ್ ಅಶೋಕ್ ಗೆ ಆಗ ಮುಜುಗರವೂ ಆಗಿತ್ತು. ಆಗ ಮಂಡ್ಯ (mandya) ಬೇಡ ಅಂದಿದ್ದ ಹೈಕಮಾಂಡ್, ಈಗ ಅದೇ ಜಿಲ್ಲೆಯ ಉಸ್ತುವಾರಿಯನ್ನು ನೀಡಿದೆ. ಮಂಡ್ಯದಲ್ಲಿ ಜೆಡಿಎಸ್ ಕೋಟೆಗಳನ್ನು ಭೇದಿಸುವ ಸವಾಲನ್ನು ಈಗ ಅಶೋಕ್ ಎದುರಿಸಲೇಬೇಕಾಗಿದೆ. ಅಶೋಕ್ ಅವರ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಗೆ ಹೈಕಮಾಂಡ್ ಬ್ರೇಕ್ ಈ ಮೂಲಕ ಬ್ರೇಕ್ ಹಾಕಿದೆ ಎನ್ನಲಾಗಿದೆ.
Advertisement
ಈಗ ಸಚಿವ ಆರ್ ಅಶೋಕ್ ಗೆ ಜೆಡಿಎಸ್ ಭದ್ರಕೋಟೆಯಲ್ಲಿ ಹೆಚ್ಚು ಸೀಟು ಗೆಲ್ಲಿಸುವ ಸವಾಲೆದುರಾಗಿದೆ. ಜೊತೆಗೆ ಮಂಡ್ಯದಲ್ಲಿ ಆಪರೇಷನ್ ಕಮಲ ಸಕ್ಸಸ್ ಮಾಡುವ ಜವಾಬ್ದಾರಿಯೂ ಹೆಗಲಿಗೆ ಏರಿದೆ. ಕೈ-ತೆನೆ ಪಕ್ಷಗಳ ಪ್ರಭಾವಿಗಳನ್ನು ಪಕ್ಷಕ್ಕೆ ಕರೆತರುವ ಬಿಗ್ ಟಾಸ್ಕ್ ಅನ್ನು ಎಷ್ಟರ ಮಟ್ಟಿಗೆ ಅಶೋಕ್ ನಿಗಾವಹಿಸುತ್ತಾರೆ ಅನ್ನೋದು ಕಾದು ನೋಡಬೇಕಿದೆ.
ಪದ್ಮನಾಭನಗರ ಕ್ಷೇತ್ರದಲ್ಲೂ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಮಾಡ್ಕೊಂಡ್ ಬರ್ತಿರೋ ಆರೋಪ ಆರ್ ಅಶೋಕ್ ಮೇಲಿದೆ. ಅತ್ತ ಮಂಡ್ಯದಲ್ಲೂ ಹೆಚ್ಚು ಸೀಟ್ ಗೆಲ್ಲಿಸಿ, ಸ್ವಕ್ಷೇತ್ರದಲ್ಲೂ ಭರ್ಜರಿ ಗೆಲುವು ಸಾಧಿಸುವ ಸವಾಲನ್ನು ಯಾವ ರೀತಿ ನಿಭಾಯಿಸುತ್ತಾರೋ ಅನ್ನುವ ಕುತೂಹಲವೂ ಮನೆ ಮಾಡಿದೆ. ಇದನ್ನೂ ಓದಿ: ಬಿಎಸ್‍ವೈ ಬರ್ತ್‍ಡೇಗೆ ಬರ್ತಾರಂತೆ ಮೋದಿ – ಭಾವನಾತ್ಮಕ ಯಾನ ತೆರೆದಿಡ್ತಾರಾ ರಾಜಾಹುಲಿ?
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಬಿಜೆಪಿಗೆ ಬಂದರೆ ಪಕ್ಷದ ಬಲವೂ ಹೆಚ್ಚಾಗಲಿದೆ. ಹೀಗಾಗಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಮನವೊಲಿಸಿ ಪಕ್ಷಕ್ಕೆ ಕರೆತರುವ ಮಹತ್ತರ ಹೊಣೆಯನ್ನೂ ಆರ್.ಅಶೋಕ್ ಗೆ ವಹಿಸಲಾಗಿದೆಯಂತೆ. ಇದುವರೆಗೂ ಯಾವುದೇ ನಿರ್ಧಾರ ಕೈಗೊಳ್ಳದ ಸಂಸದೆ ಸುಮಲತಾ ಸಾಮ್ರಾಟನ ಎಂಟ್ರಿ ಬಳಿಕ ಬಿಜೆಪಿ ಸೇರುವ ನಿರ್ಧಾರ ಕೈಗೊಳ್ಳುತ್ತಾರಾ ಅನ್ನೋದಕ್ಕೆ ಕಾಲವೇ ಉತ್ತರ ಕೊಡಬೇಕು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k