ಬಿಎಸ್‍ವೈ ಬರ್ತ್‍ಡೇಗೆ ಬರ್ತಾರಂತೆ ಮೋದಿ – ಭಾವನಾತ್ಮಕ ಯಾನ ತೆರೆದಿಡ್ತಾರಾ ರಾಜಾಹುಲಿ?
- ಶಿವಮೊಗ್ಗದಲ್ಲಿ ಬಿಎಸ್‍ವೈ ಮೆಗಾ ಬರ್ತ್‍ಡೇಗೆ ಪ್ಲ್ಯಾನ್

ಬೆಂಗಳೂರು: ಅಂದು ಬರ್ತ್‍ಡೇಗೆ (Birthday) ನಿರ್ಲಕ್ಷ್ಯ. ಈಗ ಬರ್ತ್‍ಡೇ ದಿನವೇ ರಣಕಣ ಕಹಳೆ ಸಂದೇಶ. ಈಗ ಶಿವಮೊಗ್ಗದಲ್ಲಿ (Shivamogga) ಮಾಜಿ ಸಿ.ಎಂ ಬಿ.ಎಸ್ ಯಡಿಯೂರಪ್ಪ (B.S Yediyurappa) ಮೆಗಾ ಬರ್ತ್‍ಡೇಗೆ ಪ್ಲ್ಯಾನ್ ಆಗಿದೆ.
ಯಡಿಯೂರಪ್ಪ ಬರ್ತ್‍ಡೇ ದಿನದ ಕಾರ್ಯಕ್ರಮಕ್ಕೆ ಬರ್ತೀನಿ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಒಪ್ಪಿದ್ದಾರೆ ಎನ್ನುತ್ತಿವೆ ಬಿಎಸ್‍ವೈ ಆಪ್ತ ಮೂಲಗಳು. ಮುಂಬರುವ ಫೆಬ್ರವರಿ 27ರಂದು ಶಿವಮೊಗ್ಗದಲ್ಲಿ ಬಿಎಸ್‍ವೈ (BSY) ಹವಾ ಸೃಷ್ಟಿಯಾಗಲಿದ್ದು, ಆ ವೇದಿಕೆಯಲ್ಲೇ ರಾಜಾಹುಲಿ ಭಾವನಾತ್ಮಕ ಯಾನ ತೆರೆದಿಡುವ ಸಾಧ್ಯತೆ ಇದೆ. ಇದನ್ನೂ ಓದಿ: ರಾಜಾಹುಲಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ – ಟೆಂಪಲ್‍ಗೆ ಬನ್ನಿ ಸರ್ ಎನ್ನುತ್ತಿರುವ ಬಿಜೆಪಿ ಶಾಸಕರು
ಅಂದು 2020ರಲ್ಲಿ ಯಡಿಯೂರಪ್ಪ ಬರ್ತ್‍ಡೇಗೆ ಅಷ್ಟಕಷ್ಟೇ ಎಂಬಂತೆ ಬಿಜೆಪಿ ನಾಯಕರು ವರ್ತಿಸಿದ್ರು. ಈಗ ಯಡಿಯೂರಪ್ಪ ಬರ್ತ್‍ಡೇ ಆಚರಣೆಗೆ ನಡೆದಿದೆ ದೊಡ್ಡ ಪ್ಲ್ಯಾನ್. ಇದು ಎಲೆಕ್ಷನ್ ಗೇಮ್ ಇರಬಹುದು ಎಂಬ ಚರ್ಚೆಗೂ ವೇದಿಕೆಯಾಗಿದೆ. ಫೆಬ್ರವರಿ 27ಕ್ಕೆ ಯಡಿಯೂರಪ್ಪ ಬರ್ತ್‍ಡೇಗೆ ಮೋದಿ ಬರಲು ಒಪ್ಪಿದ್ದು, ಅಂದೇ ಯಡಿಯೂರಪ್ಪ ಕನಸು ನನಸಿಗೆ ಹಸಿರು ನಿಶಾನೆ ಸಿಗಲಿದೆ. ಶಿವಮೊಗ್ಗ ಏರ್‌ಪೋರ್ಟ್ ಉದ್ಘಾಟಿಸುವ ಮೋದಿ, ರಾಜಾಹುಲಿ ಹುಟ್ಟುಹಬ್ಬದ ಸಮಾವೇಶದಲ್ಲೂ ಭಾಗಿ ಆಗ್ತಾರೆ ಎನ್ನಲಾಗಿದೆ. ಇದನ್ನೂ ಓದಿ: ಜನವರಿ 27, 28ಕ್ಕೆ ಧಾರವಾಡ, ಬೆಳಗಾವಿಗೆ ಅಮಿತ್ ಶಾ ಭೇಟಿ
ಆದ್ರೆ ಇನ್ನೂ ಕಾರ್ಯಕ್ರಮಗಳ ಪಟ್ಟಿ ಅಂತಿಮಗೊಂಡಿಲ್ಲ. ಇದೇ ಸಮಾವೇಶದಲ್ಲಿ ತಮ್ಮ ರಾಜಕೀಯ ಯಾನದ ಬಗ್ಗೆ ಬಿಎಸ್‍ವೈ ಭಾವಾನಾತ್ಮಕ ಭಾಷಣ ಸಾಧ್ಯತೆ ಇದೆ. ಬಿಜೆಪಿ ಕಟ್ಟಿ ಬೆಳೆಸಿದ್ದು, ಬಿಜೆಪಿ ನಡೆಸಿಕೊಂಡಿದ್ದು, ಶಿವಮೊಗ್ಗ ಜಿಲ್ಲೆ ಜನ ನಡೆಸಿಕೊಂಡ ಬಗ್ಗೆ ಭಾವನಾತ್ಮಕ ಭಾಷಣ ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಅಂದಹಾಗೆ ಮೂರು ವರ್ಷಗಳ ಹಿಂದೆ ನಡೆದಿದ್ದ ಬರ್ತ್‍ಡೇ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಅದರಲ್ಲೂ ಬಿಜೆಪಿ ನಾಯಕರ ನಡೆ ಬಗ್ಗೆ ಬೇರೆ ಬೇರೆ ರೀತಿ ವಿಶ್ಲೇಷಣೆಗಳು ನಡೆದಿದ್ವು. 2020, ಫೆಬ್ರವರಿ 27ರಂದು ಬೆಂಗಳೂರಿನ ಆರಮನೆ ಮೈದಾನದಲ್ಲಿ ಯಡಿಯೂರಪ್ಪ 78ನೇ ಬರ್ತ್‍ಡೇ ಆಚರಣೆ ಮಾಡಿಕೊಂಡಿದ್ದರು. ಆಗ ಸಿಎಂ ಆಗಿದ್ದ ಯಡಿಯೂರಪ್ಪ ಬರ್ತ್‍ಡೇ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೋಗಿ ಬಂದಿದ್ರು.
ಮಾಜಿ ಸಿಎಂ ಬಿಎಸ್‍ವೈ ನಂಬಿಕಸ್ಥ ಹೈಕಮಾಂಡ್ ನಾಯಕ ರಾಜನಾಥ್ ಸಿಂಗ್ (Rajnath Singh) ಮಾತ್ರ ಬರ್ತ್‍ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು ಬಿಟ್ಟರೆ ಬಿಎಸ್‍ವೈ ಬರ್ತ್‍ಡೇಗೆ ಕೇಂದ್ರದ ಪ್ರಮುಖ ಬಿಜೆಪಿ ನಾಯಕರು ಕೇರ್ ಮಾಡಿರಲಿಲ್ಲ. ಆ ಬಗ್ಗೆ ದೊಡ್ಡ ಚರ್ಚೆ ಕೂಡ ಆಗಿತ್ತು. ಆದರೆ ಈಗ ನರೇಂದ್ರ ಮೋದಿಯೇ ಬರ್ತ್‍ಡೇ ಕಾರ್ಯಕ್ರಮಕ್ಕೆ ಆಗಮನಕ್ಕೆ ವೇದಿಕೆ ಸಜ್ಜಾಗಿದ್ದು, ಏನು ಸಂದೇಶ..!? ಎಂಬ ಕುತೂಹಲ ಹೆಚ್ಚಾಗಿದೆ.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k