ರಾಜಾಹುಲಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ – ಟೆಂಪಲ್‍ಗೆ ಬನ್ನಿ ಸರ್ ಎನ್ನುತ್ತಿರುವ ಬಿಜೆಪಿ ಶಾಸಕರು

ಬೆಂಗಳೂರು: ಅದೇಕೋ ಏನೋ ಕಳೆದ ಒಂದು ವಾರದಿಂದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B.S Yediyurappa) ಮನೆಯತ್ತ ಬಿಜೆಪಿ (BJP) ಶಾಸಕರು ದೌಡಾಯಿಸ್ತಿದ್ದಾರೆ. ಪ್ಲೀಸ್ ನಮ್ ಕ್ಷೇತ್ರಕ್ಕೆ ಬನ್ನಿ ಸರ್ ಅಂತಾ ಬೇಡಿಕೆ ಇಟ್ಟಿದ್ದಾರೆ. ಇದು ಬಿಜೆಪಿ ಪಕ್ಷದ ಡಿಮ್ಯಾಂಡ್ ಅಲ್ಲ, ಎಂಎಲ್‍ಎಗಳ ಡಿಮ್ಯಾಂಡ್. ಟೆಂಪಲ್ ಓಪನ್‍ಗೆ ಬನ್ನಿ ಸಾಹೇಬ್ರೆ ಅಂತಾ ಬಿಜೆಪಿ ಶಾಸಕರ ಹೊಸ ಟ್ರಿಕ್ಸ್ ಶುರು ಮಾಡಿದ್ದಾರೆ.
ಬಿಎಸ್‍ವೈಗೆ ದುಂಬಾಲು ಬಿದ್ದ ಶಾಸಕರಿಗೆ ಒಂದೇ ಆತಂಕ. ಅದುವೇ ಯಡಿಯೂರಪ್ಪ ನಮ್ ಕಡೆ ಬಾರದಿದ್ದರೆ ಕಷ್ಟ ಎಂಬುದು. ಪಕ್ಷದ ಕಾರ್ಯಕ್ರಮ ಓಕೆ, ಆದ್ರೆ ನಮ್ಗೆ ಯಡಿಯೂರಪ್ಪ ಬೇಕು ಅಂತಿದ್ದಾರಂತೆ ಕೆಲ ಬಿಜೆಪಿ ಶಾಸಕರು. ಬಿಜೆಪಿಯಲ್ಲಿ ಈಗ ಮಾಸ್‍ಗೆ ಬಲು ಡಿಮ್ಯಾಂಡ್ ಜಾಸ್ತಿ ಆಗಿದೆ. ದೇವಸ್ಥಾನ (Temple) ಉದ್ಘಾಟನೆ ನೆಪದಲ್ಲಿ ಎಲೆಕ್ಷನ್ ಪ್ರಚಾರಕ್ಕೆ ಯಡಿಯೂರಪ್ಪ ಕರೆಯುತ್ತಿದ್ದಾರೆ ಬಿಜೆಪಿ ಶಾಸಕರು. ಪಕ್ಷದ ಸಮಾವೇಶ, ಸಂಘಟನಾ ಸಭೆಗಳು ಇರಲಿ, ಆದ್ರೆ ಯಡಿಯೂರಪ್ಪ ಇಲ್ಲ ಅಂದ್ರೆ ಕಷ್ಟ..! ಯಡಿಯೂರಪ್ಪ ಎರಡು ಸಲ ಬಂದು ಹೋದ್ರೆ ನಾವು ಬಚಾವ್ ಎಂದು ಕೆಲ ಬಿಜೆಪಿ ಶಾಸಕರ ಲೆಕ್ಕಾಚಾರ. ಇದನ್ನೂ ಓದಿ: ಜನವರಿ 27, 28ಕ್ಕೆ ಧಾರವಾಡ, ಬೆಳಗಾವಿಗೆ ಅಮಿತ್ ಶಾ ಭೇಟಿ
ಈಗಾಗಲೇ 15ಕ್ಕೂ ಹೆಚ್ಚು ಬಿಜೆಪಿ ಶಾಸಕರು ಯಡಿಯೂರಪ್ಪ ಭೇಟಿ ಮಾಡಿ ಆಹ್ವಾನ ಕೊಟ್ಟಿದ್ದಾರೆ. ಆದ್ರೆ ಒಬ್ಬರ ಕಾರ್ಯಕ್ರಮಕ್ಕೆ ಹೋದ್ರೆ ಎಲ್ಲ ಕಡೆ ಇದೇ ಶುರುವಾಗುತ್ತೆ ಎಂಬ ಆತಂಕದಲ್ಲಿ ಬಿಎಸ್‍ವೈ ಇದ್ದಾರೆ ಎನ್ನಲಾಗಿದೆ. ಪಕ್ಷದ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಬರ್ತಿನಿ, ಬೇರೆಯದ್ದಕ್ಕೆ ಕರೆಯಬೇಡಿ ಅಂತಾ ಬಿಎಸ್‍ವೈ ಕೂಡ ಎಚ್ಚರಿಕೆ ಹೆಜ್ಜೆ ಇಡ್ತಿದ್ದಾರಂತೆ. ಇದನ್ನೂ ಓದಿ: ನಾನೇ ಹಾಸನ ಅಭ್ಯರ್ಥಿ ಎಂದು ವರಿಷ್ಠರ ಮೇಲೆ ಒತ್ತಡ ತಂತ್ರ ಹಾಕ್ತಿದ್ದಾರಾ ಭವಾನಿ ರೇವಣ್ಣ?
ಹಾಗಾದ್ರೆ ಯಡಿಯೂರಪ್ಪ ಕ್ಯಾಂಪೇನ್‍ಗೆ ಬಿಜೆಪಿ ಹೈಕಮಾಂಡ್ ಪ್ಲ್ಯಾನ್ ಕುತೂಹಲ ಮೂಡಿಸಿದೆ. ಶಾಸಕರ ಲೆಕ್ಕಚಾರಕ್ಕೆ ಮಣೆ ಹಾಕ್ತಾರೋ..? ಅಗತ್ಯ ಇರುವ ಕಡೆ ಮಾತ್ರ ಮಾಸ್ ಪ್ರಚಾರದಲ್ಲಿ ಬಿಎಸ್‍ವೈ ಕಾಣಿಸಿಕೊಳ್ತಾರಾ..? ಎಂಬ ಕುತೂಹಲವಿದ್ದು, ಬಜೆಟ್ ಬಳಿಕ ಗೇಮ್ ಚೇಂಜ್ ಸಾಧ್ಯತೆ ಬಗ್ಗೆ ನಾನಾ ರೀತಿ ಚರ್ಚೆಗಳು ನಡೆಯುತ್ತಿರೋದಂತೂ ಸತ್ಯ.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k