– ಸಾತ್ವಿಕ ಆಹಾರದ ಬಗ್ಗೆ ಚರ್ಚೆ ಆಗಿಲ್ಲ
ಬೆಂಗಳೂರು: ಶಾಲೆಗಳಲ್ಲಿ (School) ಮೊಟ್ಟೆ (Egg) ಕೊಡುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (BC Nagesh) ಸ್ಪಷ್ಟಪಡಿಸಿದರು.
ವಿಧಾನ ಪರಿಷತ್‌ನ (Vidhan Parishad) ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ (JDS) ತಿಪ್ಪೇಸ್ವಾಮಿ ಪ್ರಶ್ನೆ ಕೇಳಿದರು. ಶಾಲಾ ಮಕ್ಕಳಿಗೆ ಸರಿಯಾಗಿ ಮೊಟ್ಟೆ ವಿತರಣೆ ಆಗುತ್ತಿಲ್ಲ. ಬೆಲೆ ಜಾಸ್ತಿ ಆಯ್ತು ಅಂತ ಅಕ್ಟೋಬರ್, ನವೆಂಬರ್, ಡಿಸೆಂಬರ್‌ನಲ್ಲಿ ಮೊಟ್ಟೆ ವಿತರಣೆ ಆಗಿಲ್ಲ. ಸರ್ಕಾರ ಸಮರ್ಪಕವಾಗಿ ಮೊಟ್ಟೆ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ವಿಪಕ್ಷ ನಾಯಕ ಹರಿಪ್ರಸಾದ್ ಧ್ವನಿಗೂಡಿಸಿ, ಕೆಲ ಶಾಲೆಗಳಲ್ಲಿ ಉದ್ದೇಶ ಪೂರ್ವಕವಾಗಿ ಮೊಟ್ಟೆ ಕೊಡುತ್ತಿಲ್ಲ. ಬಾಳೆಹಣ್ಣು, ಚಿಕ್ಕಿ ಮಾತ್ರ ಕೊಡಲಾಗುತ್ತಿದೆ. ಕೆಲ ಶಾಲೆಗಳಲ್ಲಿ ಮೊಟ್ಟೆ ಕೊಡಬೇಡಿ ಅಂತ ಸೂಚನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಮೊಟ್ಟೆ ಕೊಡುವುದನ್ನು ನಿಲ್ಲಿಸಬಾರದು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರ ನೀಡಿದ ಸಚಿವ ಬಿ.ಸಿ ನಾಗೇಶ್, ಬಿಸಿಯೂಟದಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ ಕೊಡಬೇಕು ಎಂದು 2007ರಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಆದರೆ ಈವರೆಗೂ ಮೊಟ್ಟೆ ಕೊಡದಂತೆ ನೋಡಿಕೊಳ್ಳಲಾಯಿತು. ಯಾರ ಒತ್ತಡಕ್ಕೆ ಹೀಗೆ ಆಯ್ತೋ ಗೊತ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ನಮ್ಮ ಸರ್ಕಾರವು ಧೈರ್ಯ ಮಾಡಿ ಮೊಟ್ಟೆ ಕೊಡುವ ನಿರ್ಧಾರ ಜಾರಿಗೆ ತಂದೆವು. ಎಲ್ಲ ಕಡೆ ಒಟ್ಟಿಗೆ ಜಾರಿಗೆ ತರುವ ಬದಲು ಅಪೌಷ್ಟಿಕತೆ ಇರುವ ಕಡೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊದಲು ಜಾರಿಗೆ ತರಲಾಗಿದೆ. ನಂತರ ಇತರ ಜಿಲ್ಲೆಗೆ ವಿಸ್ತರಿಸಲಾಗಿದೆ. ಮೊಟ್ಟೆ ಕೊಟ್ಟ ನಂತರ ಪೌಷ್ಟಿಕತೆಯಲ್ಲಿನ ಬದಲಾವಣೆ ಕುರಿತು ಅಧ್ಯಯನ ವರದಿ ಪಡೆಯಲಾಗಿದೆ. ಅದರಂತೆ ಪೌಷ್ಟಿಕತೆ ಹೆಚ್ಚಾಗಿದ್ದನ್ನು ಮನಗಂಡು ಮೊಟ್ಟೆ ಕೊಡುವುದನ್ನು ಮುಂದುವರಿಸಲಾಗುತ್ತದೆ. ಯಾರಿಗೂ ಮೊಟ್ಟೆ, ಬಾಳೆಹಣ್ಣು ತಿನ್ನಿ ಎಂದು ಒತ್ತಾಯ ಇಲ್ಲ. ಯಾರಿಗೆ ಯಾವುದು ಬೇಕೋ ಅದನ್ನು ಕೊಡಲಾಗುತ್ತದೆ. ಮೊಟ್ಟೆ ಬೇಡ ಅಂದವರಿಗೆ ಮಾತ್ರ ಬಾಳೆಹಣ್ಣು, ಚಿಕ್ಕಿ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕೆಟ್ಟು ನಿಂತ ಅಂಬುಲೆನ್ಸ್ – ನಡುರಸ್ತೆಯಲ್ಲೇ 2 ಗಂಟೆ ನರಳಾಡಿದ ತುಂಬು ಗರ್ಭಿಣಿ
ನೈತಿಕ ಶಿಕ್ಷಣ ಕೊಡಬೇಕು ಎನ್ನುವ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಆದರೆ ಸಾತ್ವಿಕ ಆಹಾರದ ಬಗ್ಗೆ ಇಲಾಖೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಶಾಲೆಗಳಲ್ಲಿ ಮಕ್ಕಳಿಗೆ ಮಾರಲ್ ಎಜುಕೇಶನ್ ಇರಬೇಕು. ವಾರಕ್ಕೆ ಒಂದು ಪೀರಿಯಡ್ ಆದರೂ ಇದನ್ನು ಮಾಡಬೇಕು. ನನ್ನ ಸಲಹೆ ಪರಿಗಣಿಸಿ ಎಂದರು. ಇದನ್ನೂ ಓದಿ: Air Show ಬಡತನ ಓಡಿಸುತ್ತಾ – ಪ್ರಧಾನಿ ಮೋದಿಗೆ ಹೆಚ್‌ಡಿಕೆ ಪ್ರಶ್ನೆ
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k