ಬೆಳಗಾವಿ: ವಿಧಾನ ಪರಿಷತ್(Vidhan Parishad) ಸಭಾಪತಿ ಚುನಾವಣೆಗೆ(Speaker Election) ಬಿಜೆಪಿ ಸದಸ್ಯ ಬಸವರಾಜ್ ಹೊರಟ್ಟಿ(Basavaraj Boratti) ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಸಚಿವರ ನೇತೃತ್ವದಲ್ಲಿ ವಿಧಾನ ಪರಿಷತ್ ಕಾರ್ಯದರ್ಶಿಗಳಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದು ನಾಳೆ ಚುನಾವಣೆ ನಡೆಯಲಿದೆ.
ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿ ಹೊರಟ್ಟಿ ಈ ಬಾರಿ ಚುನಾವಣೆಯಲ್ಲಿ ಗೆದ್ದಿದ್ದರು. ಬಿಜೆಪಿ ಸೇರಲು ಸಭಾಪತಿ ನೀಡುವ ಭರವಸೆಯನ್ನ ಬಿಜೆಪಿ ನಾಯಕರು ಕೊಟ್ಟಿದ್ದರು. ಕೊಟ್ಟ ಮಾತಿನಂತೆ ಸಭಾಪತಿ ಸ್ಥಾನ ನೀಡಿ ಬಿಜೆಪಿ ಮಾತು ಉಳಿಸಿಕೊಂಡಿದೆ. ಬಹುಮತ ಇರುವ ಕಾರಣ ನಾಳೆ ನಡೆಯುವ ಚುನಾವಣೆಯಲ್ಲಿ ಹೊರಟ್ಟಿ ಅವರು ಅವಿರೋಧ ಆಯ್ಕೆ ಆಗಲಿದ್ದಾರೆ. ಇದನ್ನೂ ಓದಿ: ಇಂಗ್ಲಿಷ್ ಮೀಡಿಯಂ ಶಾಲೆಗಳ ಪರ ರಾಹುಲ್ ಗಾಂಧಿ ಬ್ಯಾಟಿಂಗ್
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಬಸವರಾಜ್ ಹೊರಟ್ಟಿ,ಇದು ನನ್ನ ಜೀವನದಲ್ಲಿ ಅವಿಸ್ಮರಣೀಯ ದಿನ. ಸಿಎಂ ಸೇರಿದಂತೆ ಎಲ್ಲಾ ಬಿಜೆಪಿ ನಾಯಕರು, ಪಕ್ಷದ ಮುಖ್ಯಸ್ಥರು ಬಂದಿದ್ದು ಖುಷಿಯಾಯ್ತು. ಪಕ್ಷ, ಪಕ್ಷದ ನಾಯಕರು ಪ್ರೀತಿ ವಿಶ್ವಾಸ ಇಟ್ಟು ಸ್ಥಾನ ಕೊಟ್ಟಿದ್ದಾರೆ. ನನಗೆ ಕೊಟ್ಟ ಜವಾಬ್ದಾರಿ, ನಂಬಿಕೆ, ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದರು.
ಪಕ್ಷ, ಸಭಾಪತಿ ಸ್ಥಾನಕ್ಕೆ ನ್ಯಾಯ ಕೊಡುವ ಕೆಲಸ ಮಾಡುತ್ತೇನೆ. ಕೊಟ್ಟ ಮಾತಿನಂತೆ ಪಕ್ಷ ನನಗೆ ಸ್ಥಾನ ನೀಡಿದೆ. ಕೆಲ ತಾಂತ್ರಿಕ ಕಾರಣದಿಂದ ತಡ ಆಗಿರಬಹುದು. ನನಗೆ ಯಾವತ್ತೂ ಅತೃಪ್ತಿ ಆಗಿಲ್ಲ. ಎಲ್ಲಾ ಸಮಸ್ಯೆ ಪರಿಹಾರ ಆಗಿ ಪಕ್ಷ ಸ್ಥಾನ ಕೊಟ್ಟಿದೆ. ನನ್ನ ಸ್ಥಾನಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡ್ತೀನಿ ಅಂತ ಭರವಸೆ ನೀಡಿದರು.