ಬೆಂಗಳೂರು: ಮತಾಂತರ ನಿಷೇಧ ಮಸೂದೆಯ(Anti Conversion Bill) ಬಗ್ಗೆ ವಿಧಾನ ಪರಿಷತ್‌ನಲ್ಲಿ (Vidhan Parishad) ಇಂದು ಸ್ವಾರಸ್ಯಕರ ಚರ್ಚೆ ನಡೆಯಿತು. ಈ ವೇಳೆ ಕಾನೂನು ಸಚಿವ ಮಾಧುಸ್ವಾಮಿ ಅವರು ಬಿಕೆ ಹರಿಪ್ರಸಾದ್ ಅವರ ಕಾಲೆಳೆದ ಪ್ರಸಂಗವೂ ನಡೆಯಿತು.
ಮಸೂದೆಯ ಬಗ್ಗೆ ವಿರೋಧ ಮಾಡಿ ಮಾತನಾಡಿದ ಕಾಂಗ್ರೆಸ್‌ನ ಮೇಲ್ಮನೆಯ ನಾಯಕ ಬಿ.ಕೆ. ಹರಿಪ್ರಸಾದ್(BK Hariprasad) ಹಿಂದೂ ಧರ್ಮದ ರಕ್ಷಣೆಗೆ ಮಸೂದೆಯನ್ನು ತರಲಾಗಿದೆ ಎಂದು ಹೇಳಿದರು. ಈ ವೇಳೆ ಎದ್ದು ನಿಂತ ಮಾಧುಸ್ವಾಮಿ(Madhuswamy), ಇದು ಹಿಂದೂ ಧರ್ಮ ಮಾತ್ರ ಅಲ್ಲ ಎಲ್ಲಾ ಧರ್ಮದವರ ರಕ್ಷಣೆ ತರಲಾಗಿದೆ ಎಂದು ಉತ್ತರಿಸಿದರು.
Advertisement
Advertisement
ಮಸೂದೆಯಲ್ಲಿ ಬಲವಂತದ ಮತಾಂತರವನ್ನು ಮಾತ್ರ ನಿಷೇಧಿಸಲಾಗಿದೆ. ಪ್ರೀತಿ, ಹಣ, ಶಿಕ್ಷಣ, ಉದ್ಯೋಗ ಈ ರೀತಿ ಆಮಿಷ ಒಡ್ಡಿ ಅಶಕ್ತರನ್ನು ಮತಾಂತರ ಮಾಡುವಂತಿಲ್ಲ. ಮುಸ್ಲಿಮ್ ವ್ಯಕ್ತಿಯನ್ನು ಬಲವಂತವಾಗಿ ಹಿಂದೂ ಧರ್ಮಕ್ಕೆ ಮತಾಂತರ ಮಾಡಿದರೆ ಕೇಸ್ ದಾಖಲಿಸಬಹುದು. ಈ ಎಲ್ಲ ಅಂಶಗಳು ಮಸೂದೆಯಲ್ಲಿದೆ ಎಂದರು. ಇದನ್ನೂ ಓದಿ: ನೈಋತ್ಯ ರೈಲ್ವೆ ಸಾಧನೆ- ಪ್ಯಾಸೆಂಜರ್ ರೈಲಿನಿಂದ ದಾಖಲೆ ಆದಾಯ ಗಳಿಕೆ
Advertisement
ಮಾತನ್ನು ಮುಂದುವರಿಸಿದ ಅವರು, ಸ್ವಂತ ಇಚ್ಛೆಯಿಂದ ಯಾರು ಬೇಕಾದರೂ ಮತಾಂತರ ಆಗಬಹುದು. ಬೇಕಾದರೆ ಬಿಕೆ ಹರಿಪ್ರಸಾದ್ ಅವರು ಕ್ರಿಶ್ಚಿಯನ್ ಆದರೆ ನಮ್ಮದೇನೂ ತಕರಾರಿಲ್ಲ ಏನು ಇಲ್ಲ. ಆದರೆ ಒಂದು ಅರ್ಜಿ ಕೊಟ್ಟರೆ ಆಯ್ತು ಎಂದು ಹೇಳಿ ಕಾಲೆಳೆದರು.
Advertisement
ಇದಕ್ಕೆ ಅರ್ಜಿ ಯಾಕೆ ಕೊಡಬೇಕು ಎಂದು ಹರಿಪ್ರಸಾದ್ ಕೇಳಿದಾಗ, ಆ ವಿಚಾರವೇ ಈ ಮಸೂದೆಯಲ್ಲಿದೆ. ಅದೇ ಪಾಯಿಂಟ್. ಯಾರಿಗೆ ಅರ್ಜಿ ಕೊಡಬೇಕು? ಯಾರು ತನಿಖೆ ನಡೆಸಬೇಕು ಈ ಎಲ್ಲ ಅಂಶಗಳು ಇದರಲ್ಲಿ ಇದೆ ಎಂದು ಹೇಳಿ ತಿರುಗೇಟು ನೀಡಿದರು.