ಬೆಂಗಳೂರು: ವಿಧಾನಸಭೆಯಿಂದ (Vidhan Sabha) ವಿಧಾನ ಪರಿಷತ್ (Vidhana Parishad) ಸ್ಥಾನಕ್ಕೆ ನಡೆಯುವ ಚುನಾವಣೆಗೆ ಜೆಡಿಎಸ್ (JDS) ಅಭ್ಯರ್ಥಿಯಾಗಿ 4 ಬಾರಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋತಿದ್ದ ಜವರಾಯಿಗೌಡ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದೆ.
ಇಂದು ನಡೆದ ಶಾಸಕಾಂಗ ಸಭೆಯಲ್ಲಿ ಜವರಾಯಿಗೌಡ (Javarayi Gowda) ಹೆಸರು ಘೋಷಣೆ ಮಾಡಲಾಯಿತು. ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ನೇತೃತ್ವದಲ್ಲಿ ಜವರಾಯಿಗೌಡ ನಾಮಪತ್ರ ಸಲ್ಲಿಕೆ ಮಾಡಿದರು. ಇದನ್ನೂ ಓದಿ: 64.2 ಕೋಟಿ ಜನರಿಂದ ಮತದಾನ – ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ವಿಶ್ವದಾಖಲೆ
Advertisement
Advertisement
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಕುಮಾರಸ್ವಾಮಿ, 4 ಬಾರಿ ಕಡಿಮೆ ಅಂತರದಿಂದ ಜವರಾಯಿಗೌಡ ಸೋತಿದ್ದರು. ಪಕ್ಷದ ಕಾರ್ಯಕರ್ತರ ಭಾವನೆಗೆ ಬೆಲೆ ಕೊಟ್ಟು ಅವರಿಗೆ ಟಿಕೆಟ್ ನೀಡಿದ್ದೇವೆ. ಫಾರೂಕ್ ಮತ್ತು ಕುಪ್ಪೇಂದ್ರ ರೆಡ್ಡಿ ಅವರ ಹೆಸರು ಚರ್ಚೆ ಆಯಿತು. ಅಂತಿಮವಾಗಿ ಜವರಾಯಿಗೌಡಗೆ ಟಿಕೆಟ್ ನೀಡಲು ಇಬ್ಬರು ನಾಯಕರು ಒಪ್ಪಿಕೊಂಡರು ಎಂದು ಕುಮಾರಸ್ವಾಮಿ ತಿಳಿಸಿದರು. ಇದನ್ನೂ ಓದಿ: ಎನ್‌ಡಿಎ ಸರ್ಕಾರ ರಚನೆಯಾದ 15 ದಿನಗಳಲ್ಲಿ ಮೋದಿ ಜೊತೆ ಉದ್ಧವ್ ಠಾಕ್ರೆ ಕಾಣಿಸಿಕೊಳ್ಳಲಿದ್ದಾರೆ: ಶಾಸಕ ರವಿ ರಾಣಾ
Advertisement
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅಭ್ಯರ್ಥಿ ಜವರಾಯಿಗೌಡ ಕಣ್ಣೀರು ಹಾಕುತ್ತಲೇ ಪ್ರತಿಕ್ರಿಯೆ ನೀಡಿದರು. 4 ಬಾರಿ ನಾನು ಚುನಾವಣೆ ಸೋತಿದ್ದೆ. ನನ್ನನ್ನ ಕೈ ಬಿಡಬಾರದು ಅಂತ ಕುಮಾರಸ್ವಾಮಿ, ದೇವೇಗೌಡರು ನನ್ನನ್ನ ವಿಧಾನ ಪರಿಷತ್ ಗೆ ಆಯ್ಕೆ ಮಾಡಿ ಕಳುಹಿಸಿದ್ದಾರೆ. ನಾನು ಯಾವತ್ತು ದೇವೇಗೌಡರ ಕುಟುಂಬಕ್ಕೆ ಚಿರೃಣಿ ಆಗಿರುತ್ತೇನೆ. ನನ್ನನ್ನ ಆಯ್ಕೆ ಮಾಡಿದ ಕುಮಾರಸ್ವಾಮಿ, ದೇವೇಗೌಡ, ಪಕ್ಷ 19 ಶಾಸಕರಿಗೂ ನಾನು ಧನ್ಯವಾದ ಹೇಳುತ್ತೇನೆ. ಪಕ್ಷಕ್ಕಾಗಿ, ಪಕ್ಷದ ಸಂಘಟನೆಗಾಗಿ ಕೆಲಸ ಮಾಡುತ್ತೇನೆ ಅಂತ ಕಣ್ಣೀರು ಹಾಕುತ್ತಾ ದೇವೇಗೌಡರ ಕುಟುಂಬಕ್ಕೆ ಧನ್ಯವಾದ ಹೇಳಿದರು.
Advertisement