ಬೆಳಗಾವಿ: ಕಾಂಗ್ರೆಸ್ ನವರು ಕೆಳಮಟ್ಟದ ಮಾತುಗಳನ್ನಾಡುತ್ತಾ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನ ಪರಿಷತ್ ಚುನಾವಣಾ ಹಿನ್ನಲೆಯಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿ ವಿಭಾಗದ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
Advertisement
ತಮ್ಮ ಅಧಿಕಾರಾವಧಿಯಲ್ಲಿ ಸಾಧಿಸಲಾಗದ ಅಭಿವೃದ್ಧಿಯನ್ನು ಮರೆಮಾಚಿ ಈ ಚುನಾವಣೆಯ ವ್ಯಾಖ್ಯಾನವನ್ನೇ ಬದಲಾಯಿಸುವ ಕೆಲಸವನ್ನು ಕಾಂಗ್ರೆಸ್‍ನವರು ಮಾಡುತ್ತಿದ್ದಾರೆ. ಅವರ ಈ ಕೃತ್ಯವನ್ನು ನಾವು ಕಡೆಗಣಿಸಿ ನಮ್ಮ ಪಕ್ಷದ ಸಂಘಟನೆಯನ್ನು ಬಲಪಡಿಸಿ ವಿಧಾನ ಪರಿಷತ್ ಚುನಾವಣೆಯ ಗೆಲುವಿಗಾಗಿ ದುಡಿಯಬೇಕಿದೆ ಎಂದರು. ಇದನ್ನೂ ಓದಿ: ಗುಡ್‌ನ್ಯೂಸ್ – ಇಳಿಯಲಿದೆ ಎಲ್‍ಪಿಜಿ ಸಿಲಿಂಡರ್ ತೂಕ
Advertisement
ಕರ್ನಾಟಕದ ವಿಧಾನ ಪರಿಷತ್ ಗೆ ನಡೆಯುತ್ತಿರುವ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಇಂದು ಗದಗ ನಲ್ಲಿ ನಡೆದ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಪಕ್ಷದ ಅಭ್ಯರ್ಥಿಯಾದ ಶ್ರೀ ಪ್ರದೀಪ ಶೆಟ್ಟರ್ ಅವರ ಪರ ಮತ ಯಾಚಿಸಲಾಯಿತು. @JagadishShettar, @CCPatilBJP, @shivkumarudasi, ಶಾಸಕರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು. pic.twitter.com/StUp1vhZF1
— Basavaraj S Bommai (@BSBommai) December 6, 2021
Advertisement
ಬಿಜೆಪಿ ಸಂಘಟಿತವಾಗಿದೆ
ಭಾರತೀಯ ಜನತಾ ಪಕ್ಷ ಸಂಘಟಿತವಾಗಿದೆ. ಕಾಂಗ್ರೆಸ್ ಪಕ್ಷದ ನಾಯಕರು ಹತಾಶರಾಗಿರುವುದು ಅವರ ಭಾಷೆಯಿಂದ ಸ್ಪಷ್ಟವಾಗುತ್ತಿದೆ. ತಮ್ಮ ಸ್ಥಾನ ಹಾಗೂ ಘನತೆಗೆ ತಕ್ಕಂತೆ ಮಾತನಾಡದೇ ಮನಸೋ ಇಚ್ಛೆ ಮಾತನಾಡುತ್ತಾರೆ. ಮನುಷ್ಯ ಹತಾಶರಾಗಿ ನಿರಾಶೆಯಾದಾಗ ಈ ರೀತಿ ಮಾತನಾಡುವುದು ಸಹಜ. ನಮಗೆ ಇಂತಹ ಭಾಷೆಯ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷದ ನಾಯಕರಿಂದ ಯಾವುದೇ ಸರ್ಟಿಫಿಕೇಟ್ ಬೇಕಾಗಿಲ್ಲ. ನಮಗೆ ಸರ್ಟಿಫಿಕೇಟ್ ಕೊಡುವವರು ಬೆಳಗಾವಿಯ ಮಹಾಜನತೆ. ನಮಗೆ ಪ್ರೀತಿ ವಿಶ್ವಾಸವನ್ನು ತೋರುವ ಜೊತೆಗೆ ನಮ್ಮಿಂದ ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದಾರೆ. ಬಿಜೆಪಿ ಪಕ್ಷ ಅವರ ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂಬ ವಿಶ್ವಾಸ ಅವರಿಗಿದೆ ಎಂದರು. ಇದನ್ನೂ ಓದಿ: ಕೆಂಪು ಟೋಪಿ ಧರಿಸಿದವರು ಉತ್ತರಪ್ರದೇಶಕ್ಕೆ ಅಪಾಯಕಾರಿ: ಮೋದಿ
Advertisement
ತಳಹಂತದಲ್ಲಿ ಗ್ರಾಮ ಪಂಚಾಯತಿಯ ಮಟ್ಟದಲ್ಲಿ ಜನರು ಪಕ್ಷದ ಪರವಾಗಿದ್ದಾರೆ ಎನ್ನುವುದಕ್ಕೆ ಮಹಂತೇಶ್ ಕವಟಗಿಮಠ ಅವರು ಅಧಿಕ ಮತಗಳ ಅಂತರದಿಂದ ಗೆಲ್ಲಬೇಕು. ಇದು ಮುಂದೆ ನಡೆಯುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್‍ಗಳ ಪದಾಧಿಕಾರಿಗಳ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಎಲ್ಲ ವರ್ಗದವರ ಬೆಂಬಲವಿದೆ:
ಶಾಸಕರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿಯೂ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಡೆದು ಸರ್ವಸ್ವತಂತ್ರವಾಗಿ ಆಡಳಿತ ಮಾಡುತ್ತಿದ್ದೇವೆ. ಸಮಾಜದ ಎಲ್ಲಾ ವರ್ಗದ ಜನ, ಎಲ್ಲ ಭಾಷಿಕರು ಭಾಜಪ ಕ್ಕೆ ಬೆಂಬಲ ನೀಡುತ್ತಿರುವುದು ಗಮನಾರ್ಹ. ಈಗ ನಡೆಯುತ್ತಿರುವ ಚುನಾವಣೆ ಚುನಾಯಿತರಾಗಿರುವವರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಚುನಾವಣೆ. ಪದಾಧಿಕಾರಿಗಳ ಶ್ರಮದಿಂದ ಗ್ರಾಮ ಪಂಚಾಯತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಯಲ್ಲಿ ಆಯ್ಕೆಯಾಗಿದ್ದಾರೆ. ನಿಮ್ಮ ಸಂಪರ್ಕದಲ್ಲಿರುತ್ತಾರೆ. ನೀವು ಅವರ ಮನಸ್ಸನ್ನು ಗೆದ್ದು ಭಾರತೀಯ ಜನತಾ ಪಕ್ಷ ಅಭ್ಯರ್ಥಿಯಾದ ಮಹಂತೇಶ ಕವಟಗಿಮಠ ಅವರಿಗೆ ಪ್ರಥಮ ಪ್ರಾಶಸ್ತ್ಯ ಮತವನ್ನು ಕೊಡಿಸಿ ಆರಿಸಬೇಕು ಎಂದು ಮನವಿ ಮಾಡಿದರು.
ಶಾಸಕರು ಪಂಚಾಯಿತಿಯ ನಿಟಕ ಸಂಪರ್ಕದಲ್ಲಿರುವವರು, ಅದರ ಅಭಿವೃದ್ಧಿಗೆ ಸತತ ಪ್ರಯತ್ನ ಮಾಡುವವರು ನಿಮ್ಮ ಸಂಪರ್ಕದಲ್ಲಿ ಎಲ್ಲಾ ಸದಸ್ಯರಿರುತ್ತಾರೆ. ಯಾವುದೇ ಪಕ್ಷದಿಂದ ಆಯ್ಕೆಯಾಗಿದ್ದರೂ, ನಿಮ್ಮ ಪ್ರಭಾವ ಎಲ್ಲ ಸದಸ್ಯರ ಮೇಲೂ ಇರುತ್ತದೆ. ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.
ಬೆಳಗಾವಿ ದೊಡ್ಡ ಬಲ ನೀಡಿದೆ
ಬೆಳಗಾವಿ ಬಹಳ ವಿಶೇಷ ಹಾಗೂ ಮುಖ್ಯವಾದ ಜಿಲ್ಲೆ. ಬೆಳಗಾವಿ ಎಲ್ಲಾ ಸಂದರ್ಭಗಳಲ್ಲಿಯೂ ಬಿಜೆಪಿಗೆ ದೊಡ್ಡ ಬಲವನ್ನು ಕೊಟ್ಟಿದೆ. ಅತಿ ಹೆಚ್ಚು ಶಾಸಕರನ್ನು ಕರ್ನಾಟಕದಲ್ಲಿ ಬೆಳಗಾವಿಯಿಂದ ಆಯ್ಕೆಯಾಗಿದ್ದಾರೆ. ನಮ್ಮ ವಿರೋಧ ಪಕ್ಷದಲ್ಲಿ ಇರುವವರ ಅತಿ ಹೆಚ್ಚಿನ ಕೊಡುಗೆಯೂ ಬೆಳಗಾವಿ ಜಿಲ್ಲೆಯಿಂದ ಬಂದಿದೆ. ರಾಜ್ಯ ಸಭಾ ಸದಸ್ಯರು, ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯನ್ನೇ ಜನ ಆಯ್ಕೆ ಮಾಡಿದ್ದಾರೆ. ವಿಜಯದ ಪರಂಪರೆ ಬೆಳಗಾವಿಯಲ್ಲಿ ಭಾಜಪಕ್ಕೆ ಸದಾ ಕಾಲವಿದ್ದು, ಅದಕ್ಕೆ ಕಾರಣೀಭೂತರು ಬೆಳಗಾವಿಯ ಮಹಾಜನತೆ ಹಾಗೂ ನಮ್ಮೆಲ್ಲಾ ಕಾರ್ಯಕರ್ತರು ಮತ್ತು ಪದಾಧಿಕಾರಿ ಬಂಧುಗಳು ಎಂದರು.