– ಕೆಂಪು ಬಣ್ಣ ಅಪಾಯದ ಸಂಕೇತ
-ತಿಜೋರಿಯನ್ನು ಭರ್ತಿ ಮಾಡಿಲು ಸಮಾಜವಾದಿ ಪಕ್ಷಕ್ಕೆ ಅಧಿಕಾರಬೇಕು
– ಸಮಾಜವಾದಿ ಪಕ್ಷ ಬೆಂಬಲಿಸುವ ಮುನ್ನ ಎಚ್ಚರಿಕೆ ಅಗತ್ಯ
ನವದೆಹಲಿ: ಸಮಾಜವಾದಿ ಪಕ್ಷ ಬೆಂಬಲಿಸುವ ಮುನ್ನ ಉತ್ತರಪ್ರದೇಶ ಜನರು ಎಚ್ಚರಿಕೆಯಿಂದಿರಿ. ಕೆಂಪು ಟೋಪಿ ಧರಿಸುವವರು ರಾಜ್ಯಕ್ಕೆ ಅಪಾಯಕಾರಿ ಎಂಬುದನ್ನು ಜನರು ಮರೆಯಬಾರದು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಎಸ್‍ಪಿ ವಿರುದ್ಧ ಕಿಡಿಕಾರಿದ್ದಾರೆ.
ಗೋರಖ್‍ಪುರದಲ್ಲಿ ರಾಸಾಯನಿಕ ಗೊಬ್ಬರ ಕಾರ್ಖಾನೆ ಹಾಗೂ ಎಐಐಎಂಎಸ್ ಶಾಖೆ ಉದ್ಘಾಟಿಸಿದ ನಂತರ ಸಭೆಯಲ್ಲಿ ಅವರು ಮಾತನಾಡಿದರು. ಕೆಂಪು ಟೋಪಿ ಧರಿಸುವ ಈ ಜನರಿಗೆ ಸಾಮಾನ್ಯ ಜನರ ಬಗ್ಗೆ ಕಳಕಳಿ ಇಲ್ಲ. ಕೆಂಪು ಬಣ್ಣ ಅಪಾಯದ ಸಂಕೇತ. ರೆಡ್ ಕ್ಯಾಪ್ (ಕೆಂಪು ಟೋಪಿ) ಎಂದರೆ, ಉತ್ತರ ಪ್ರದೇಶ ಪಾಲಿಗೆ ರೆಡ್ ಅಲರ್ಟ್ ಇದ್ದ ಹಾಗೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ ಕೊರೊನಾ ಆತಂಕ- ಯಾದಗಿರಿಯಲ್ಲಿ ಸಿದ್ಧವಾಯ್ತಿ ಹೈಟೆಕ್ ಐಸಿಯು ವಾರ್ಡ್
ತಮ್ಮ ತಿಜೋರಿಯನ್ನು ಭರ್ತಿ ಮಾಡಿಕೊಳ್ಳುವ ಸಲುವಾಗಿ ಸಮಾಜವಾದಿ ಪಕ್ಷದ ನಾಯಕರಿಗೆ ಅಧಿಕಾರ ಬೇಕಾಗಿತ್ತು. ಜೈಲಿನಲ್ಲಿರುವ ಉಗ್ರರ ಬಿಡುಗಡೆ ಹಾಗೂ ಪಾತಕಿಗಳಿಗೆ ಮುಕ್ತ ಅವಕಾಶ ನೀಡುವುದಕ್ಕಾಗಿಯೂ ಅಧಿಕಾರ ಬೇಕಿತ್ತು. ಸಮಾಜವಾದಿ ಚಿಂತಕರಾದ ರಾಮಮನೋಹರ್ ಲೋಹಿಯಾ ಹಾಗೂ ಜಯಪ್ರಕಾಶ್ ನಾರಾಯಣ್ ಅವರು ಪ್ರತಿಪಾದಿಸಿದ ತತ್ವಗಳನ್ನು ಸಮಾಜವಾದಿ ಪಕ್ಷ ಪಾಲನೆ ಮಾಡುತ್ತಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಬೆಂಜ್ ಗುದ್ದಿದ ರಭಸಕ್ಕೆ 3 ವಾಹನಗಳು ಜಖಂ – 1 ಸಾವು, ಇಬ್ಬರು ಗಂಭೀರ