ಲಕ್ನೋ: ತೀವ್ರ ಹಣದ ಕೊರತೆ, 7 ವರ್ಷಗಳ ವಿವಾಹೇತರ ಸಂಬಂಧ ಮತ್ತು ವಿದ್ಯುತ್ ಕಂಬದ (woman Climbs Pole In Protest) ಮೇಲೆ ಕುಳಿತ ಮಹಿಳೆ. ಈ ದೃಶ್ಯ ಕಂಡುಬಂದಿದ್ದು ಉತ್ತರ ಪ್ರದೇಶದ (Uttarpradesh) ಪಟ್ಟಣವೊಂದರಲ್ಲಿ.
ಹೌದು. ಗೋರಖ್‌ಪುರದ ಪಿಪ್ರೈಚ್‌ನಲ್ಲಿ 34 ವರ್ಷದ ಮೂರು ಮಕ್ಕಳ ತಾಯಿಯೊಬ್ಬಳು ತನ್ನ ವಿವಾಹೇತರ ಸಂಬಂಧದ ಬಗ್ಗೆ ಪತಿಗೆ ತಿಳಿದ ನಂತರ ವಿದ್ಯುತ್ ಕಂಬವನ್ನು ಹತ್ತುವ ಮೂಲಕ ರಾದ್ದಾಂತ ಸೃಷ್ಟಿಸಿದ್ದಾಳೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ.
Advertisement
Advertisement
ಏನಿದು ಪ್ರಕರಣ?: ಮಹಿಳೆ ತನ್ನ ಪತಿ ಹಾಗೂ ಮೂವರು ಮಕ್ಕಳೊಂದಿಗೆ ವಾಸವಾಗಿದ್ದಳು. ಆದರೆ ಕ್ರಮೇಣ ಆಕೆಗೆ ಪಕ್ಕದ ಗ್ರಾಮದ ವ್ಯಕ್ತಿಯೊಬ್ಬರ ಪರಿಚಯವಾಗಿದೆ. ಈ ಪರಿಚಯ ಪ್ರೇಮಕ್ಕೆ ತಿರುಗಿದ್ದು, ಕಳೆದ 7 ವರ್ಷಗಳಿಂದ ಪತಿಗೆ ತಿಳಿಯದಂತೆ ಇವರಿಬ್ಬರ ಪ್ರೇಮ ಪುರಾಣ ನಡೆಯುತ್ತಿತ್ತು. ಇದನ್ನೂ ಓದಿ: ನಾಮಪತ್ರ ಸಲ್ಲಿಸಿದ ಡಾ.ಮಂಜುನಾಥ್ – ಡಿಕೆಸು ನೋಡಿ ಮೋದಿ ಘೋಷಣೆ ಕೂಗಿದ ಕಾರ್ಯಕರ್ತರು
Advertisement
ಮಹಿಳೆಯ ಪತಿ ರಾಮ್ ಗೋವಿಂದ್ ಕೂಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಇವರಿಬ್ಬರ ಪ್ರೀತಿ ವಿಚಾರ ಪತಿಯ ಗಮನಕ್ಕೆ ಬಂದಿದೆ. ಹೀಗಾಗಿ ದಂಪತಿ ನಡುವೆ ವಾಗ್ವಾದ ನಡೆಯಿತು. ಅಲ್ಲದೇ ಪ್ರಿಯತಮನಿಗೂ ಮನೆಯಲ್ಲಿ ಇರಲು ಅವಕಾಶ ಕಲ್ಪಿಸಬೇಕು ಮತ್ತು ಮನೆಯ ಆರ್ಥಿಕತೆಗೆ ಸಹಾಯ ಮಾಡಬೇಕೆಂದು ಒತ್ತಾಯಿಸಿದಳು. ಪತ್ನಿಯ ಮಾತಿನಿಂದ ರಾಮ್ ಗೋವಿಂದ್ ಪಿತ್ತ ನೆತ್ತಿಗೇರಿತು. ಕೂಡಲೇ ಮನೆಯಿಂದಲೇ ಹೊರ ನಡೆದನು.
Advertisement
ಪತಿ ಮನೆಯಿಂದ ಹೊರ ನಡೆಯುತ್ತಿದ್ದಂತೆಯೇ ಪತಿ ಹಾಗೂ ಪ್ರಿಯತಮ ಇಬ್ಬರೂ ನನಗೆ ಬೇಕು ಎಂದು ಹೇಳಿ ಮನೆಯ ಪಕ್ಕದಲ್ಲೇ ಇರುವ ವಿದ್ಯುತ್ ಕಂಬವೇರಿ ಮಹಿಳೆ ಪ್ರತಿಭಟನೆ ನಡೆಸಿದ್ದಾಳೆ. ಮಹಿಳೆಯು ವಿದ್ಯುತ್ ಕಂಬವನ್ನು ಏರುತ್ತಿರುವುದು ನೋಡುಗರನ್ನು ದಿಗ್ಭ್ರಮೆಗೊಳಿಸಿತು. ಕೂಡಲೇ ಸ್ಥಳೀಯರು ಆಕೆಯನ್ನು ಕೆಳಗೆ ಇಳಿಯುವಂತೆ ಕೇಳಿಕೊಂಡಿದ್ದಾರೆ. ಹೈ-ಟೆನ್ಷನ್ ತಂತಿಗಳಿರುವ ಕಂಬವೇರಿ ಮಹಿಳೆ ಅಪಾಯಕಾರಿಯಾಗಿ ಕುಳಿತಿದ್ದನ್ನು ಕಂಡು ಜನ ಕೂಡ ಭಯಭೀತರಾಗಿದ್ದಾರೆ.
ಎಷ್ಟು ಮನವಿ ಮಾಡಿಕೊಂಡರೂ ಮಹಿಳೆ ಕಂಬದಿಂದ ಕೆಳಗೆ ಇಳಿಯದಿದ್ದರಿಂದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಮತ್ತು ವಿದ್ಯುತ್ ಇಲಾಖೆಗಳ ತಂಡವು ಮುಂಜಾಗ್ರತಾ ಕ್ರಮವಾಗಿ ವಿದ್ಯುಚ್ಛಕ್ತಿ ಸರಬರಾಜನ್ನು ಸ್ಥಗಿತಗೊಳಿಸಿದರು. ಬಳಿಕ ಕಂಬದಿಂದ ಕೆಳಗಿಳಿಯುವಂತೆ ಮಹಿಳೆಯನ್ನು ಮನವೊಲಿಸುವಲ್ಲಿ ಯಶಸ್ವಿಯಾದರು.