ಒಟ್ಟಾವಾ: ಭಾರತ (India) ಮತ್ತು ಕೆನಡಾದ (Canada) ನಡುವೆ ರಾಜಕೀಯ ಬಿಕ್ಕಟ್ಟು ತಲೆದೋರಿರುವ ಬೆನ್ನಲ್ಲೇ ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ವಂದಿದೆ. ಕೆನಡಾದಲ್ಲಿರುವ ಪಂಜಾಬಿ ಗಾಯಕ (Punjabi Singer) ಎ.ಪಿ ಧಿಲ್ಲೋನ್ (AP Dhillon) ಅವರ ಮನೆಯ ಎದುರು ಎರಡು ತಿಂಗಳ ಹಿಂದೆ ದುಷ್ಕರ್ಮಿಗಳು ಗುಂಡು ಹಾರಿಸಲಾಗಿತ್ತು. ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆನಡಾದ ವ್ಯಾಂಕೋವರ್‌ನ (Vancouver) ವಿಕ್ಟೋರಿಯಾ ದ್ವೀಪದಲ್ಲಿ (Victoria Island) ವಾಸವಾಗಿದ್ದ ಗಾಯಕ ಎಪಿ ಧಿಲ್ಲೋನ್ ಅವರ ಮನೆಯ ಸುತ್ತಲೂ ಕಳೆದ ಸೆ.2 ರಂದು ಗುಂಡು ಹಾರಿಸಲಾಗಿತ್ತು. ಆದರೆ ಅವರಿಗೆ ಯಾವುದೇ ಗಾಯಗಳಾಗಿರಲಿಲ್ಲ. ಇದಕ್ಕೆ ಸಂಬಂಧಿಸಿದಂತಹ ವಿಡಿಯೋವೊಂದು ತಿಂಗಳುಗಳ ಬಳಿಕ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಗಾಯಕನ ಮನೆಯ ಸುತ್ತಲೂ ದುಷ್ಕರ್ಮಿಗಳು ಗುಂಡು ಹಾರಿಸುತ್ತಿರುವುದು ಹಾಗೂ ಎರಡು ವಾಹನಗಳಿಗೆ ಬೆಂಕಿ ಹಚ್ಚಿರುವುದು ಕಂಡುಬಂದಿದೆ.ಇದನ್ನೂ ಓದಿ: ಹಾಸನಾಂಬೆ ದೇವಿ ದರ್ಶನ ಮುಗಿಸಿ ಹಿಂತಿರುಗುವ ವೇಳೆ ಕಾರು ಡಿಕ್ಕಿ- ತಂದೆ, ಮಗಳು ಸಾವು
Advertisement
Advertisement
ಈ ಘಟನೆಗೆ ಸಂಬಂಧಿಸಿದಂತೆ, ಕೆನಡಾ ಪೊಲೀಸರು ಒಂಟಾರಿಯೊದಲ್ಲಿದ್ದ ಭಾರತೀಯ ಮೂಲದ ಆರೋಪಿ ಅಭಿಜೀತ್ ಕಿಂಗ್ರಾನನ್ನು ಬಂಧಿಸಿದ್ದಾರೆ ಹಾಗೂ ಇನ್ನೋರ್ವ ಆರೋಪಿ ವಿಕ್ರಮ್ ಶರ್ಮಾಗೆ ಬಂಧನ ವಾರಂಟ್ ಕಳುಹಿಸಿದ್ದಾರೆ.
Advertisement
ಕೆನಡಾ ಪೊಲೀಸರ ಮಾಹಿತಿ ಪ್ರಕಾರ, ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಆರೋಪದ ಮೇಲೆ ಕಿಂಗಾನ್ರನ್ನು ಬಂಧಿಸಲಾಗಿದೆ ಹಾಗೂ ಒಂಟಾರಿಯೊ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಇನ್ನೂ ಆರೋಪಿ ಶರ್ಮಾ ಗುರುತು ಪತ್ತೆಯಾಗಿದ್ದು, ಫೋಟೋ ಸಿಕ್ಕಿಲ್ಲ ಆದರೆ ಭಾರತದಲ್ಲಿರುವುದಾಗಿ ಶಂಕಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement
ಸೆಪ್ಟೆಂಬರ್‌ನಲ್ಲಿ ನಡೆದ ಗುಂಡಿನ ದಾಳಿಯ ಬಳಿಕ, ಸಿಧು ಮೂಸೆವಾಲಾ (Sidhu Moose Wala) ಮತ್ತು ಬಾಬಾ ಸಿದ್ದಿಕಿ ಹತ್ಯೆ (Baba Siddique) ಪ್ರಕರಣದ ಹಿಂದೆಯಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ (Lawrence Bishnoi gang) ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು ಎನ್ನಲಾಗಿತ್ತು. ನಟ ಸಲ್ಮಾನ್ ಖಾನ್ ಅವರ ಕಾರ್ಯಕ್ರಮವೊಂದರ ವಿಡಿಯೋದಲ್ಲಿ ಎಪಿ ಧಿಲ್ಲೋನ್ ಕಾಣಿಸಿಕೊಂಡಿದ್ದು, ಅದೇ ಕಾರಣದಿಂದ ಗುಂಡಿನ ದಾಳಿ ನಡೆಸಲಾಗಿದೆ. ಇನ್ನೂ ಕೆನಡಾದ ಆಭರಣ ವ್ಯಾಪಾರಿಯ ಮನೆಯ ಮೇಲೆ ನಡೆದ ಗುಂಡಿನ ದಾಳಿಯಲ್ಲಿದ್ದ ದರೋಡೆಕೋರ ರೋಹಿತ್ ಗೋಡಾರಾ ಲಾರೆನ್ಸ್ ಬಿಷ್ಣೋಯ್‌ನೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಬರೆದುಕೊಂಡಿದ್ದರು. ಇನ್ನೂ ಕಳೆದ ವರ್ಷ ನವೆಂಬರ್‌ನಲ್ಲಿ ಕೆನಡಾದಲ್ಲಿ ಗಾಯಕ ಗಿಪ್ಪಿ ಗ್ರೆವಾಲ್ ಮನೆಯ ಮುಂದೆ ನಡೆದಿದ್ದ ಗುಂಡಿನ ದಾಳಿಯ ಹೊಣೆಯನ್ನು ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿತ್ತು.
ಗುಂಡಿನ ದಾಳಿಯ ಬಳಿಕ ಗಾಯಕ ಧಿಲ್ಲೋನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಾನು ಸುರಕ್ಷಿತವಾಗಿದ್ದೇನೆ. ಕಾಳಜಿ ವಹಿಸಿದ್ದಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದರು.ಇದನ್ನೂ ಓದಿ: ಬೆಳಗಾವಿಗೂ ಕಾಲಿಟ್ಟ ವಕ್ಫ್ ಆಸ್ತಿ ವಿವಾದ – 30 ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದು!