Connect with us

Bengaluru City

ಕೋತಿ ನುಂಗಲು ಹೋಗಿ ಸಾವನ್ನಪ್ಪಿದ ಹೆಬ್ಬಾವು!

Published

on

ಬಳ್ಳಾರಿ: ಹೆಬ್ಬಾವೊಂದು ತನ್ನ ಹಸಿವು ನೀಗಿಸಿಕೊಳ್ಳಲು ಕೋತಿ ನುಂಗಲು ಹೋಗಿ ಮರದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಹೊಸಪೇಟೆ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಕಂಪ್ಲಿ ಪಟ್ಟಣದ ಕೋಟೆ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಹನ್ನೆರಡು ಅಡಿ ಉದ್ದದ ಹೆಬ್ಬಾವು ಮರದಲ್ಲಿದ್ದ ಕೋತಿಮರಿಯೊಂದನ್ನು ನುಂಗಲು ಮುಂದಾದ ವೇಳೆ ಮರದಿಂದ ಕೆಳಗೆ ಬಿದ್ದಿದೆ.

ಮರದಿಂದ ಕೆಳಗೆ ಬಿದ್ದ ಪರಿಣಾಮ ಹೆಬ್ಬಾವು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದೆ. ಬೃಹತ್ ಗಾತ್ರದ ಈ ಹೆಬ್ಬಾವನ್ನು ನೋಡಲು ಸ್ಥಳೀಯರು ಮುಗಿಬಿದ್ದ ದೃಶ್ಯ ಪಬ್ಲಿಕ್ ಟಿವಿಗೆ ಸಿಕ್ಕಿದೆ.

https://www.youtube.com/watch?v=W4V7wTmXZJg

Click to comment

Leave a Reply

Your email address will not be published. Required fields are marked *