ಬೀಜಿಂಗ್: ಬದಲಾಗುತ್ತಿರುವ ಹವಾಮಾನದ ಪರಿಣಾಮ ಚೀನಾದಲ್ಲೀಗ ಸಾಕಷ್ಟು ಅವಘಡಗಳು ಸಂಭವಿಸುತ್ತಿವೆ. ಪ್ರಕೃತಿಯ ಈ ವೈಪರಿತ್ಯದಿಂದ ನಗರದಲ್ಲಿ ಚಲಿಸುತ್ತಿದ್ದ ಬಸ್ ಮೇಲೆ ಕಟ್ಟಡದ ಪಿಲ್ಲರ್ ಬಿದ್ದು, ಬಸ್ ನಜ್ಜುಗುಜ್ಜಾದ ಘಟನೆ ಸೋಮವಾರ ನಡೆದಿದೆ.
ಭಾನುವಾರದಂದು ಚೀನಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿದು ಸಿಬ್ಬಂದಿಗಳನ್ನು ಮುಜುಗರಕ್ಕೀಡು ಮಾಡಿತ್ತು. ಇದಾದ ಬಳಿಕ ಶಾಂಘೈನ ರಸ್ತೆಯೊಂದರಲ್ಲಿ ಚಲಿಸುತ್ತಿದ್ದ ಬಸ್ ಮೇಲೆ ಕಟ್ಟಡದ ಪಿಲ್ಲರ್ ಬಿದ್ದು, ಬಸ್ ನಜ್ಜುಗುಜ್ಜಾಗಿದೆ. ಸಿಸಿಟಿವಿಯಲ್ಲಿ ಇದರ ದೃಶ್ಯ ಸೆರೆಯಾಗಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
Advertisement
ವಿಡಿಯೋದಲ್ಲಿ ಚಲಿಸುತ್ತಿದ್ದ ಬಸ್ ಮೇಲೆ ಇದ್ದಕ್ಕಿದ್ದಂತೆ ಕಟ್ಟಡದ ಅಲಂಕಾರಿಕ ಪಿಲ್ಲರ್ ಬಿದ್ದ ಪರಿಣಾಮ ಬಸ್‍ನ ಅರ್ಧ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಬಸ್ ಒಳಗಡೆ ಕುಳಿತ್ತಿದ್ದ ಯಾವ ಪ್ರಯಾಣಿಕರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಸ್ ಒಳಗಡೆ ಇದ್ದ ಸಿಸಿಟಿವಿಯಲ್ಲಿ ಕೂಡ ಘಟನೆಯ ದೃಶ್ಯ ಸೆರೆಯಾಗಿದ್ದು, ಪಿಲ್ಲರ್ ಎಷ್ಟು ರಭಸವಾಗಿ ಬಿದ್ದಿದೆ ಎಂಬುದನ್ನ ಕಾಣಬಹುದು. ಈ ವಿಡಿಯೋವನ್ನ ಇಲ್ಲಿನ ಮಾಧ್ಯಮವೊಂದು ಫೇಸ್‍ಬುಕ್ ಪೇಜ್‍ನಲ್ಲಿ ಶೇರ್ ಮಾಡಿದ್ದು, ನೋಡುಗರನ್ನ ಆಶ್ಚರ್ಯಚಕಿತರನ್ನಾಗಿಸಿದೆ.