ಮುಂಬೈ: ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ವೇಳೆ ಅಭಿಮಾನಿಯೊಬ್ಬರು ಧೋನಿ ಸ್ಟೇಡಿಯಂಗೆ ಬರುತ್ತಿದ್ದಂತೆ ಮುಂಬೈ ಜೆರ್ಸಿ ಮೇಲೆ ಸಿಎಸ್ಕೆ ಜೆರ್ಸಿ ಧರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಎಸ್ಕೆ ಫ್ಯಾನ್ ಕ್ಲಬ್ ಟ್ವಿಟ್ಟರಿನಲ್ಲಿ ಈ ವಿಡಿಯೋವನ್ನು ಹಾಕಿದ್ದು, ಧೋನಿ ಮೈದಾನಕ್ಕೆ ಬರುತ್ತಿದ್ದಂತೆ ಅಭಿಮಾನಿ ಸಿಎಸ್ಕೆ ಜೆರ್ಸಿ ತೊಟ್ಟಿದ್ದಾನೆ. ಜೆರ್ಸಿ ಬದಲಿಸಿದಲ್ಲದೇ “ಧೋನಿ, ಧೋನಿ” ಎಂದು ಜೋರಾಗಿ ಕಿರುಚಿ ತಂಡವನ್ನು ಚಿಯರ್ ಮಾಡಿದ್ದಾನೆ.
- Advertisement 2
ಅಭಿಮಾನಿಯ ಈ ವರ್ತನೆಯನ್ನು ನೋಡಿದ ಕೆಲವರು ವಿಡಿಯೋ ಮಾಡಿದ್ದಾರೆ. ಸದ್ಯ ಈ ವಿಡಿಯೋವನ್ನು ಸಿಎಸ್ಕೆ ಫ್ಯಾನ್ ಕ್ಲಬ್ ಟ್ವಿಟ್ಟರಿನಲ್ಲಿ ಹಾಕಿ, ಧೋನಿ ಬ್ಯಾಟಿಂಗ್ ಮಾಡಲು ಬಂದರೆ ಆಗ ಮುಂಬೈ ಇಂಡಿಯನ್ಸ್ ಫ್ಯಾನ್ಸ್ ಸ್ಟೇಡಿಯಂನನ್ನು ಹಳದಿ ಮಾಡುತ್ತಾರೆ. ಇದರಿಂದ ನಮಗೆ ಯಾವುದೇ ಆಕ್ಷೇಪವಿಲ್ಲ ಎಂದು ಟ್ವೀಟ್ ಮಾಡಿದೆ.
- Advertisement 3
When Thala Dhoni walked in to Bat, This is how Mumbai Indians Fans painted Wankhede Yellow????????
(& we don't complain????)
.@ChennaiIPL @msdhoni#Yellove #WhistlePodu #CSK pic.twitter.com/Foox8kIW1I
— WhistlePodu Army ® – CSK Fan Club (@CSKFansOfficial) April 8, 2018
- Advertisement 4
ವಿಡಿಯೋದಲ್ಲಿ ಕಾಣಿಸಿಕೊಂಡ ಕುನಾಲ್ ಸಾಮಂತ್ ಮುಂಬೈ ನಿವಾಸಿಯಾಗಿದ್ದು, ನಾನು ಜೆರ್ಸಿಯನ್ನು ಬದಲಾಯಿಸಿದ್ದು ಯಾಕೆ ಎನ್ನುವುದನ್ನು ಟ್ವೀಟ್ ಮಾಡಿ ಹೇಳಿದ್ದಾರೆ.
“ನಾನು ಧೋನಿಗೆ ಗೌರವ ನೀಡಲು ಈ ರೀತಿ ಮಾಡಿದೆ. ಅವರು ಭಾರತದ ಅಭಿಮಾನಿಗಳಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ನಾನು ಯಾವಾಗಲೂ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುತ್ತೇನೆ, ಏಕೆಂದರೆ ನಾನು ಮುಂಬೈ ನಿವಾಸಿ. ಆದರೆ ಧೋನಿ ನಮಗಾಗಿ ಮಾಡಿರುವುದನ್ನು ನಾನು ಎಂದಿಗೂ ಮರೆಯುವುದಿಲ್ಲ. ನನ್ನ ಈ ವರ್ತನೆಯಿಂದ ನಿಮಗೆ ಬೇಸರವಾಗಿದ್ದರೆ, ನನ್ನನ್ನು ಕ್ಷಮಿಸಿ” ಎಂದು ಟ್ವೀಟ್ ಮಾಡಿದ್ದಾರೆ.
I did it as a tribute to @msdhoni because he has given us so much as Indian cricket fans!
I will always support Mumbai Indians because I belong here. But I'll never forget everything that Dhoni has given us.
I apologise if anyone hasn't liked it. https://t.co/SUzmvALeIW
— Kunal Samant (@flyhighpeople) April 23, 2018