ಜೋಹಾನ್ಸ್ ಬರ್ಗ್: ನೀವು ಪ್ರಾಣಿ ಪ್ರಿಯರಾಗಿದ್ದು, ಅವುಗಳನ್ನು ಪ್ರೀತಿಯಿಂದ ಮುಟ್ಟಲು ಹೋದರೆ ಹುಷಾರಾಗಿರಿ. ವ್ಯಕ್ತಿಯೊಬ್ಬರು ಪ್ರೀತಿಯಿಂದ ಸಿಂಹದ ತಲೆ ಸವರಲು ಹೋಗಿ ಈಗ ಕಚ್ಚಿಸಿಕೊಂಡು ಎರಡು ಹೊಲಿಗೆಯನ್ನು ಹಾಕಿಸಿಕೊಂಡಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.
ವೆಲ್ಷಿ ರಗ್ಬಿ ಆಟಗಾರ ಸ್ಕಾಟ್ ಬಾಲ್ಡ್ವಿನ್ ಮತ್ತು ಅವರ ತಂಡ ವೆಲ್ಟೆವ್ರೆಡೆನ್ ಗೇಮ್ ಲಾಡ್ಜ್ ಗೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಸಿಂಹಗಳನ್ನು ನೋಡುತ್ತಾ ತಲೆ ಸವರುತ್ತಾ ಖುಷಿ ಪಡುತ್ತಿದ್ದರು. ಆದರೆ ತಲೆ ಸವರಲು ಹೋದ ಸ್ಕಾಟ್ ಬಾಲ್ಡ್ವಿನ್‍ನ ಕೈಯನ್ನು ಸಿಂಹ ಬಾಯಿಯಲ್ಲಿ ಹಿಡಿದು ಕೊಂಡಿದೆ. ಸಿಂಹ ಹಿಡಿದುಕೊಂಡ ಪರಿಣಾಮ ನೋವು ತಾಳಲಾಗದೆ ಕಿರುಚಾಡಿ ಕೈ ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಕೊನೆಗೂ ಸಿಂಹದ ಬಾಯಿಂದ ಕೈಯನ್ನು ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ಸಮೀಪದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು ಎರಡು ಹೊಲಿಗೆ ಹಾಕಿದ್ದಾರೆ.
Advertisement
ಈ ಅವಘಡದಿಂದ ಅವರು ಹಾಗೂ ಅವರ ತಂಡ ಇನ್ನೊಮ್ಮೆ ಯಾವುದೇ ಕಾರಣಕ್ಕೂ ಪ್ರಾಣಿಗಳ ಹತ್ತಿರ ಹೋಗಬಾದರು ಎನ್ನುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಘಟನೆಯ ವಿಡಿಯೋವನ್ನು ಟ್ವಿಟ್ಟರ್‍ನಲ್ಲಿ ಹಾಕಿದ್ದು, ಸ್ಕಾಟ್ ಮತ್ತು ಅವರ ತಂಡಕ್ಕೆ ಎಚ್ಚರಿಕೆ ನೀಡಲಾಗಿದೆ.
Advertisement
https://twitter.com/AndyGoode10/status/913879469798166528
Advertisement
2/3 should of know he wouldn't be impressed with me stroking his lioness before introducing myself to him first @AndyGoode10 #MyBad ✋???? pic.twitter.com/cSclBsvS72
— Scott Baldwin (@scottbaldwin2) September 30, 2017