ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ `ಟಗರು’ ಚಿತ್ರ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದರೆ, ಇತ್ತ ಚಿತ್ರದ ನಿರ್ದೇಶಕರ ವಿರುದ್ಧ ಹುಚ್ಚ ವೆಂಕಟ್ ಕಿಡಿಕಾರಿದ್ದಾರೆ. ಸದ್ಯ ವೆಂಕಟ್ ಸೂರಿಗೆ ಎಚ್ಚರಿಕೆ ನೀಡಿರೋ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿನಿಮಾದಲ್ಲಿ ವಿಲನ್ ಗಳು ನಾಯಕ ನಟ ಶಿವರಾಜ್ ಕುಮಾರ್ ಅವರಿಗೆ ಅವಾಚ್ಯ ಪದಗಳಿಂದ ಬೈಯ್ಯುವ ಸನ್ನಿವೇಶಗಳಿವೆ. ಇದರಿಂದ ಶಿವಣ್ಣ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದೀಗ ಹುಚ್ಚ ವೆಂಕಟ್ ಕೂಡಾ ರೊಚ್ಚಿಗೆದ್ದಿದ್ದಾರೆ. ಇದನ್ನೂ ಓದಿ: ಪೊಗದಸ್ತಾದ ಟಗರು!
Advertisement
Advertisement
ವಿಲನ್‍ಗಳು ಶಿವಣ್ಣನಿಗೆ ಹೇಳಿದ ಡೈಲಾಗ್ ಕೇಳಿ ಹುಚ್ಚ ವೆಂಕಟ್ ನಿರ್ದೇಶಕ ಸೂರಿ ಅವರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಚಿತ್ರದಲ್ಲಿ ಶಿವಣ್ಣನಿಗೆ ಉಪಯೋಗಿಸಿದ ಅವಾಚ್ಯ ಪದಗಳನ್ನು ಮ್ಯೂಟ್ ಮಾಡಬೇಕು. ಇಲ್ಲದಿದ್ದರೆ ನನ್ನ ಹುಡುಗರು ನಿನ್ನನ್ನು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪೊಗದಸ್ತಾದ ಟಗರು ನೋಡಿ ಜಬರ್ದಸ್ತಾದ ಹೇರ್ ಕಟ್ ಮಾಡಿಸ್ಕೊಂಡ ಅಭಿಮಾನಿ
Advertisement
Advertisement
ಈ ಡೈಲಾಗ್‍ಗಳನ್ನು ನೀನು ಕೂಡಲೇ ಮ್ಯೂಟ್ ಮಾಡದಿದ್ದರೆ ಮುಂದಾಗುವ ಪರಿಣಾಮಗಳಿಗೆ ನಾನು ಜವಾಬ್ದಾರನಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಶಿವರಾಜ್‍ಕುಮಾರ್ ಎಂದರೆ ನನಗೆ ಇಷ್ಟ. ಇಷ್ಟಪಡುವವರಿಗೆ ಪ್ರಾಣ ಬೇಕಾದ್ರೂ ಕೊಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟಗರು ನಿರ್ದೇಶಕ ಸೂರಿ ವಿರುದ್ಧ ಶಿವರಾಜ್ ಕುಮಾರ್ ಅಭಿಮಾನಿಗಳು ಗರಂ
https://www.youtube.com/watch?v=p6H6cBKSaPQ