ಗಾಂಧಿನಗರ: ಚಾರ್ಟೆಡ್ ಅಕೌಂಟೆಂಟ್ ಒಬ್ಬರು ತಮ್ಮ ಕಚೇರಿಯ ಕಟ್ಟಡದ ನಾಲ್ಕನೇ ಮಹಿಡಿಯಿಂದ ಅನುಮಾನಾಸ್ಪದವಾಗಿ ಬಿದ್ದು ಸಾವನ್ನಪ್ಪಿದ್ದ ಘಟನೆ ಮಂಗಳವಾರ ಗುಜರಾತ್‍ನ ಬಾವ್‍ನಗರದಲ್ಲಿ ನಡೆದಿದೆ.
ಪ್ರಮೋದ್ ಹೇಮಾನಿ(78) 4ನೇ ಮಹಡಿಯಿಂದ ಅನುಮಾನಸ್ಪದವಾಗಿ ಬಿದ್ದ ಚಾರ್ಟೆಡ್ ಅಕೌಟೆಂಟ್. ಪ್ರಮೋದ್ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ತನ್ನ ಕಚೇರಿಯ ನಾಲ್ಕನೇ ಮಹಡಿಯಿಂದ ಬಿದ್ದ ದೃಶ್ಯ ಕಾಂಪ್ಲೆಕ್ಸ್ ನಲ್ಲಿ ಅಳವಡಿಸಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪ್ರಮೋದ್ ಅಲ್ಲಿಂದ ಬಿದಿದ್ದು ನೋಡಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲೇ ಪ್ರಮೋದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪ್ರಮೋದ್ ಅವರ ಮಗ ಪ್ರಶಾಂತ್ ಹೇಮಾನಿ ಅಹಮದಾಬಾದ್‍ನಲ್ಲಿ ಸೇಲ್ಸ್ ಟ್ಯಾಕ್ಸ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಾವನಗರ ಪೊಲೀಸರು ಪ್ರಶಾಂತ್‍ಗೆ ತನ್ನ ತಂದೆಯ ಸಾವಿನ ವಿಷಯವನ್ನು ತಿಳಿಸಿದ್ದಾರೆ.
ಈಗ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡದ ಅಧಿಕಾರಿಗಳು ಪ್ರಮೋದ್ ಆತ್ಮಹತ್ಯೆ ಮಾಡಿಕೊಂಡಿದ್ದಾರಾ, ಆಕಸ್ಮಿಕ ಸಾವೇ ಅಥವಾ ಯಾರಾದರೂ ತಳ್ಳಿ ಕೊಲೆ ಮಾಡಿದ್ದಾರಾ ಎನ್ನುವ ವಿಚಾರವನ್ನು ಮುಂದಿಟ್ಟುಕೊಂಡು ಪೊಲೀಸ್ ತನಿಖೆಗೆ ಸಹಕಾರ ನೀಡುತ್ತಿದ್ದಾರೆ.
https://www.youtube.com/watch?time_continue=17&v=H5QwK_Fsl1o