‘ಎಫ್ 3’ ಬ್ಲಾಕ್ ಬಸ್ಟರ್ ಹಿಟ್ ಬಳಿಕ ವಿಕ್ಟರಿ ವೆಂಕಟೇಶ್ (Victory Venkatesh) ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕರೊಂದಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಹಿಟ್ ಸೀರೀಸ್ ನಿರ್ದೇಶಕ ಶೈಲೇಶ್ ಕೋಲನು (Shailesh Kola) ನಿರ್ದೇಶನದ ಸಿನಿಮಾದಲ್ಲಿ (New Movie) ವಿಕ್ಟರಿ ವೆಂಕಟೇಶ್ ನಟಿಸುತ್ತಿದ್ದು. ಈ ಚಿತ್ರ ವಿಕ್ಟರಿ ವೆಂಕಟೇಶ್ ಗೆ ತುಂಬಾ ಸ್ಪೆಶಲ್ ಸಿನಿಮಾವಾಗಿದ್ದು ಸಿನಿ ಕೆರಿಯರ್ ನ 75ನೇ ಸಿನಿಮಾ ಇದಾಗಿದೆ.
ಜನವರಿ 25ರಂದು ವಿಕ್ಟರಿ ವೆಂಕಟೇಶ್ 75ನೇ ಸಿನಿಮಾ ಅನೌನ್ಸ್ ಆಗಲಿದೆ. ನಿಹಾರಿಕ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ವೆಂಕಟ್ ಬೋಯನಪಲ್ಲಿ ಈ ಚಿತ್ರವನ್ನು ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ನಿಹಾರಿಕ ಎಂಟರ್ಟೈನ್ಮೆಂಟ್ ಎರಡನೇ ಸಿನಿಮಾ ಇದಾಗಿದ್ದು, ಈ ಹಿಂದೆ ನಿರ್ಮಾಣ ಮಾಡಿದ್ದ ‘ಶ್ಯಾಮ್ ಸಿಂಗ ರಾಯ್’ ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಇದೀಗ ಮತ್ತೊಂದು ಬಿಗ್ ಬಜೆಟ್ ಸಿನಿಮಾವನ್ನು ವಿಕ್ಟರಿ ವೆಂಕಟೇಶ್ ಗೆ ನಿರ್ಮಾಣ ಮಾಡುತ್ತಿದೆ. ಇದನ್ನೂ ಓದಿ: ಜನವರಿ 27ಕ್ಕೆ ಮಂಸೋರೆ ನಿರ್ದೇಶನದ ‘19.20.21’ ಚಿತ್ರದ ಟ್ರೈಲರ್ ಬಿಡುಗಡೆ
ಈಗಾಗಲೇ ಬಿಡುಗಡೆಯಾಗಿರುವ ಪ್ರಿ ಲುಕ್ ಪೋಸ್ಟರ್ ಕ್ಯೂರಿಯಾಸಿಟಿ ಹುಟ್ಟು ಹಾಕಿದ್ದು, ಜನವರಿ 25ರ ಅನೌನ್ಸ್ ಮೆಂಟ್ ಗಾಗಿ ಸಿನಿ ರಸಿಕರು ಕಾತುರದಿಂದ ಕಾಯುತ್ತಿದ್ದಾರೆ. ಶೈಲೇಶ್ ಕೊಲನು ವೆಂಕಟೇಶ್ ಗಾಗಿ ಸಕ್ಸಸ್ ಫುಲ್ ಸ್ಟೋರಿ ಮಾಡಿಕೊಂಡಿದ್ದು, ಸ್ಟಾರ್ ಕಲಾವಿದರು, ತಂತ್ರಜ್ಞರು ಚಿತ್ರದ ಭಾಗವಾಗಲಿದ್ದು, ಶೀಘ್ರದಲ್ಲೇ ಚಿತ್ರತಂಡ ಆ ಬಗ್ಗೆ ಅಪ್ಡೇಟ್ ನೀಡಲಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k