ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆ (Victoria Hospital) ವೈದ್ಯೆಯೊಬ್ಬರು (Doctor) ತನ್ನ ಅತ್ತೆ ಹಾಗೂ ಮಾವನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಡಾ.ಪ್ರಿಯದರ್ಶಿನಿಯವರು, ಅನ್ನಪೂರ್ಣೇಶ್ವರಿ ಠಾಣಾ ವ್ಯಾಪ್ತಿಯಲ್ಲಿರುವ ನರಸಿಂಹಯ್ಯ (79) ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡುತ್ತಿರುವುದು ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಿಯದರ್ಶನಿಯವರ ಜೊತೆ ನರಸಿಂಹಯ್ಯ ಅವರ ಮಗ 2007 ರಲ್ಲಿ ಮದುವೆಯಾಗಿದ್ದರು. ದಂಪತಿಗೆ ಮಕ್ಕಳಿದ್ದು, ಕೆಲವು ದಿನಗಳಿಂದ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು. ಕೋರ್ಟ್‍ನಲ್ಲಿ ಡಿವೋರ್ಸ್ ಕೇಸ್ ಕೂಡ ನಡೆಯುತ್ತಿದೆ. ಇದರ ನಡುವೆಯೇ ವೈದ್ಯೆ ಮಾ.10ರಂದು 8:30ರ ಸುಮಾರಿಗೆ ಬಂದು ಅತ್ತೆ ಹಾಗೂ ಗಂಡನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಈ ವೇಳೆ ತಡೆಯಲು ಹೋದ ಮಾವ ನರಸಿಂಹಯ್ಯ ತಲೆಗೆ, ಬೆನ್ನಿಗೆ ಹೊಡೆದು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ನರಸಿಂಹಯ್ಯ ಅವರು ನೀಡಿದ ದೂರಿನಡಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಇನ್ನೂ ಹಲ್ಲೆಗೊಳಗಾದ ನರಸಿಂಹಯ್ಯ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಪತ್ನಿ ಕ್ಯಾನ್ಸರ್ ರೋಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.