ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೊಸ ಜೀವನ ಆರಂಭವಾದ ಬಳಿಕ ಇಬ್ಬರು ಒಟ್ಟಾಗಿ ಮೊದಲ ಬಾರಿ ಕ್ರಿಸ್ಮಸ್ ಸಂಭ್ರಮದಿಂದ ಆಚರಿಸಿದ್ದಾರೆ. ಈ ಸುಂದರ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕತ್ರಿನಾ ವಿಕ್ಕಿಯ ತೋಳ ತೆಕ್ಕೆಯಲ್ಲಿ ಬಂಧಿಯಾಗಿದ್ದರು. ಅಭಿಮಾನಿಗಳ ಮನಗೆದ್ದ ಈ ಚಿತ್ರಕ್ಕೆ ವಿಶೇಷ ಕಾರಣವೊಂದಿದೆ. ನಿನ್ನೆ ಕ್ರಿಸ್ಮಸ್. ಕತ್ರಿನಾ ಹಾಗೂ ವಿಕ್ಕಿ ಜೊತೆಯಾಗಿ ಆಚರಿಸುತ್ತಿರುವ ಮೊದಲ ಕ್ರಿಸ್ಮಸ್ ಹಬ್ಬವಿದು. ಆದ್ದರಿಂದಲೇ ಕ್ರಿಸ್ಮಸ್ ಟ್ರೀ ಮುಂದೆ ನಿಂತು ಇಬ್ಬರು ನಗುತ್ತಾ ಕ್ಯಾಮೆರಾಗೆ ಪೋಸ್ ನೀಡಿದ್ದರು. ಇದೀಗ ಚಿತ್ರಗಳು ವೈರಲ್ ಆಗಿದ್ದು, ಕತ್ರಿನಾ ಕೈಫ್ ಕೂಡ ಅದೇ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಈ ಫೋಟೋಗಾಗಿ ನಾವು ಕಾಯುತ್ತಿದ್ದೆವು ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಪುತ್ರಿಯ ನಿಶ್ಚಿತಾರ್ಥ ಫೋಟೋ ಶೇರ್ ಮಾಡಿದ ಸ್ಮೃತಿ ಇರಾನಿ
View this post on Instagram
ಕತ್ರಿನಾ ಹಾಗೂ ವಿಕ್ಕಿ ಡಿಸೆಂಬರ್ 9ರಂದು ರಾಜಸ್ಥಾನದಲ್ಲಿ ಅದ್ದೂರಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ಶಾಸ್ತ್ರದಲ್ಲಿ ತೆಗೆದ ಕೆಲವು ಫೋಟೋಗಳನ್ನ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಇಬ್ಬರು ಜೊತೆಯಾಗಿ ಕ್ರಿಸ್ಮಸ್ ಆಚರಣೆ ಮಾಡಿದ್ದಾರೆ. ಇದನ್ನೂ ಓದಿ: ಹಿಂದಿನ ಸರ್ಕಾರ ಹಣವನ್ನು ಕಬ್ರಿಸ್ತಾನ್ಗಳಿಗಾಗಿ ವ್ಯರ್ಥ ಮಾಡಿದೆ: ಯೋಗಿ ಆದಿತ್ಯನಾಥ್