ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ನಟಿ ಪೂಜಾ ಹೆಗ್ಡೆ ಇದೀಗ ಹೊಸ ಪ್ರಾಜೆಕ್ಟ್ನಲ್ಲಿ `ಉರಿ’ ಖ್ಯಾತಿಯ ವಿಕ್ಕಿ ಕೌಶಲ್ ಜೊತೆ ಕಾಣಿಸಿಕೊಂಡಿದ್ದಾರೆ. ಸದ್ಯ ವಿಕ್ಕಿ ಮತ್ತು ಪೂಜಾ ಜತೆಯಿರೋ ಫೋಟೋ ವೈರಲ್ ಆಗುತ್ತಿದೆ.
Advertisement
ಇತ್ತೀಚಿನ ಪೂಜಾ ಹೆಗ್ಡೆ ನಟನೆಯ `ರಾಧೆ ಶ್ಯಾಮ್’ ಮತ್ತು `ಬೀಸ್ಟ್’ ಎರಡು ಚಿತ್ರಗಳು ಬಾಕ್ಸ್ಆಫೀಸ್‌ನಲ್ಲಿ ಸೋತಿತ್ತು. ಆದ್ರು ಪೂಜಾ ಕಾಲ್‌ಶೀಟ್‌ಗೆ ಡಿಮ್ಯಾಂಡ್‌ಯೇನು ಕಮ್ಮಿಯಾಗಿಲ್ಲ. ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿದೆ. ಈಗ ಬಿಟೌನ್ ಹ್ಯಾಡ್‌ಸಮ್ ವಿಕ್ಕಿ ಕೌಶಲ್ ಜತೆ ಹೊಸ ಪ್ರಾಜೆಕ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ.
Advertisement
Advertisement
ಅಭಯ್ ರಾಹಾ ನಿರ್ಮಾಣದಲ್ಲಿ ಹೊಸ ಜಾಹಿರಾತಿನಲ್ಲಿ ವಿಕ್ಕಿ ಮತ್ತು ಪೂಜಾ ಒಟ್ಟಿಗೆ ನಟಿಸಿದ್ದಾರೆ. ಈಗಾಗಲೇ ಜಾಹಿರಾತಿನ ಚಿತ್ರೀಕರಣ ನಡೆದಿದೆ. ಈ ವೇಳೆ ನಿರ್ಮಾಪಕ ಅಭಯ್ ರಾಹಾ ಜತೆ ವಿಕ್ಕಿ ಕೌಶಲ್ ಮತ್ತು ಪೂಜಾ ಹೆಗ್ಡೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಪೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಇದನ್ನೂ ಓದಿ: ಸಮಂತಾ ನಟನೆಯ `ಓ ಅಂಟಾವ ಮಾಮ’ ಹಾಡಿಗೆ ಹೆಜ್ಜೆ ಹಾಕಿದ ವಿರಾಟ್ ಕೊಹ್ಲಿ
Advertisement
ಇನ್ನು ಪೂಜಾ ಲಿಸ್ಟ್ನಲ್ಲಿ ರಾಮ್‌ಚರಣ್ ಜತೆ `ಆಚಾರ್ಯ’, ಸಲ್ಮಾನ್ ಖಾನ್ ಜತೆ `ಕಭಿ ಈದ್ ಕಭಿ ದೀಪಾವಳಿ’ ರಣ್‌ವೀರ್ ಸಿಂಗ್ ಜೊತೆ `ಸರ್ಕಸ್’, ಮಹೇಶ್ ಬಾಬು ಜತೆ ಹೊಸ ಚಿತ್ರ ಹೀಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳಿವೆ. ಇನ್ನು ವಿಕ್ಕಿ ಕೌಶಲ್ ಕೂಡ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.