– ಸಾಲಕ್ಕಿಂತ ಮೂರು ಪಟ್ಟು ಆಸ್ತಿ ಮೌಲ್ಯ
ಬೆಂಗಳೂರು: ನಾಪತ್ತೆಯಾಗಿರುವ ಎಸ್.ಎಂ.ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಅವರು ವಿವಿಧ ಬ್ಯಾಂಕ್‍ಗಳಲ್ಲಿ ಬರೋಬ್ಬರಿ ಸುಮಾರು 8 ಸಾವಿರ ಸಾಲ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿದ್ಧಾರ್ಥ್ ಅವರು ಮಾಡಿರುವ 8 ಸಾವಿರ ಸಾಲಕ್ಕಿಂತ ಮೂರು ಪಟ್ಟು ಅವರ ಆಸ್ತಿ ಮೌಲ್ಯವಿದೆ. ಯಾವ ಯಾವ ಬ್ಯಾಂಕಿನಲ್ಲಿ ಎಷ್ಟೆಷ್ಟು ಸಾಲ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
1. ಐಡಿಬಿಐ ಬ್ಯಾಂಕ್ – 4,475 ಕೋಟಿ ರೂ.
2. ಆಕ್ಸಿಸ್ ಟ್ರಸ್ಟಿ ಸರ್ವೀಸ್ ಲಿಮಿಟೆಡ್ – 915 ಕೋಟಿ ರೂ.
3. ಆಕ್ಸಿಸ್ ಬ್ಯಾಂಕ್ – 315 ಕೋಟಿ ರೂ.
4. ಆದಿತ್ಯ ಬಿರ್ಲಾ ಫೈನಾನ್ಸ್ ಲಿಮಿಟೆಡ್ – 278 ಕೋಟಿ ರೂ.
5. ಎಸ್ ಬ್ಯಾಂಕ್- 273 ಕೋಟಿ ರೂ.
6. ಪಿರಮಾಲ್ ಟ್ರಸ್ಟ್ ಶಿಪ್ ಸರ್ವೀಸ್ ಲಿಮಿಟೆಡ್ – 175 ಕೋಟಿ ರೂ.
7. ಆರ್‍ಬಿಎಲ್ ಬ್ಯಾಂಕ್ – 174 ಕೋಟಿ ರೂ.
8. ಈಸಿಎಲ್ ಫೈನಾನ್ಸ್ – 150 ಕೋಟಿ ರೂ.
9. ಸ್ಯಾಂಡರ್ಡ್ ಚಾರ್ಟೆಡ್ ಲೋನ್ಸ್ ಮತ್ತು ಇನ್ವೆಸ್ಟ್ ಮೆಂಟ್ – 150 ಕೋಟಿ ರೂ.
10. ಕ್ಲಿಕ್ಸ್ ಕ್ಯಾಪಿಟಲ್ -150 ಕೋಟಿ ರೂ.
11. ಆಕ್ಸಿಸ್ ಫೈನಾನ್ಸ್ ಲಿಮಿಟೆಡ್- 125 ಕೋಟಿ
12. ಕೋಟಕ್ ಮಹಿಂದ್ರ ಇನ್ವೆಸ್ಟ್ ಮೆಂಟ್ ಲಿಮಿಟೆಡ್ – 125 ಕೋಟಿ ರೂ.
13. ಎಕೆ ಕ್ಯಾಪಿಟಲ್ ಫೈನಾನ್ಸ್ 121 ಕೋಟಿ ರೂ.
14. ಎಸ್‍ಟಿಸಿಐ ಫೈನಾನ್ಸ್ – 100 ಕೋಟಿ ರೂ.
15. ರೋಬೋ ಇಂಡಿಯಾ ಫೈನಾನ್ಸ್ ಲಿಮಿಟೆಡ್ – 80 ಕೋಟಿ
16. ಸಪ್ರೋಜಿ ಪಲ್ಲೋಂಜಿ ಫೈನಾನ್ಸ್ ಲಿಮಿಟೆಡ್ – 80 ಕೋಟಿ ರೂ.
17. ವಿಸ್ತ್ರ ಐಟಿಸಿಎಲ್ ಲಿಮಿಟೆಡ್ – 75 ಕೋಟಿ
18. ಶ್ರೀರಾಮ್ ಫೈನಾನ್ಸ್ – 50 ಕೋಟಿ ರೂ.
19. ಬಜಾಜ್ ಫೈನಾನ್ಸ್ – 45 ಕೋಟಿ
Advertisement
ಹೀಗೆ ಒಟ್ಟು 24 ಬ್ಯಾಂಕ್‍ಗಳಿಂದ 8 ಸಾವಿರ ಕೋಟಿ ಸಾಲ ಮಾಡಿದ್ದರು. ಈ ಬಗ್ಗೆ ತಮ್ಮ ಆಪ್ತ ಸ್ನೇಹಿತರ ಬಳಿ ಸಿದ್ಧಾರ್ಥ್ ತಮ್ಮ ನೋವು, ಸಾಲ, ಮತ್ತು ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರು.
Advertisement
ಒಟ್ಟು 12 ಸಾವಿರ ಎಕ್ರೆ ಜಾಗದಲ್ಲಿ ಕಾಫಿ ಎಸ್ಟೇಟ್ ಹೊಂದಿದ್ದ ಸಿದ್ಧಾರ್ಥ್ ಅವರು ಒಟ್ಟು 8,200 ಕೋಟಿ ರೂ. ಆದಾಯ ಹೊಂದುವ ಮೂಲಕ 2015ರ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.