ಬೀದರ್: ನಂದಿ ನಗರದಲ್ಲಿ ನಡೆದ ಪಶು ವಿವಿಯ 12ನೇ ಘಟಿಕೋತ್ಸವದಲ್ಲಿ ರೈತನ ಮಗ ಹಾಗೂ ಸೈನಿಕನ ಮಗಳು ಅತಿ ಹೆಚ್ಚು ಬಂಗಾರದ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
Advertisement
ಶಿವಮೊಗ್ಗದ ಪಶು ವಿವಿಯಲ್ಲಿ ಅಧ್ಯಯನ ನಡೆಸಿದ ಕನಿಕ ಯಾದವ್ ಸೈನಿಕನ ಮಗಳಾಗಿದ್ದು 13 ಚಿನ್ನದ ಪದಕ ಪಡೆದಿದ್ದಾರೆ. ಬೆಂಗಳೂರಿನ ಪಶು ವಿವಿಯಲ್ಲಿ ಓದಿದ ಕಿರಣ್ ದದೂರ್ ರೈತನ ಮಗನಾಗಿದ್ದು 9 ಚಿನ್ನದ ಪದಕ ಪಡೆದು ಸಾಧನೆ ಗೈದಿದ್ದಾರೆ. ಪಶು ವೈದ್ಯಕೀಯ ಶಿಕ್ಷಣದಲ್ಲಿ ಅಪ್ರತಿಮ ಸಾಧನೆ ಮಾಡಿದ ಪಶು ವಿವಿ ವಿದ್ಯಾರ್ಥಿಗಳಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಚಿನ್ನದ ಪದಕಗಳನ್ನು ನೀಡಿ ಅಭಿನಂದಿಸಿದರು. ಇದನ್ನೂ ಓದಿ: ಹೆಂಡತಿ ಬಾರದಿದ್ದಕ್ಕೆ ಅಪ್ರಾಪ್ತ ನಾದಿನಿಯೊಂದಿಗೆ ಪರಾರಿಯಾಗಿದ್ದ 4 ಮಕ್ಕಳ ತಂದೆ
Advertisement
ಈ ವೇಳೆ ಮಾತನಾಡಿದ ಬಂಗಾರದ ಪದಕ ಪಡೆದ ಕಿರಣ್ ದದೂರ್, ನಮ್ಮ ತಂದೆ ರೈತನಾಗಿದ್ದು, ನಮ್ಮದು ಬಡ ಕುಟುಂಬವಾಗಿದೆ. ಒಳ್ಳೆಯ ಪಶು ವೈದ್ಯನಾಗಬೇಕು ಎಂದು ಕಷ್ಟ ಪಟ್ಟು ಓದಿ ಇಂದು ಚಿನ್ನದ ಪದಕ ಪಡೆದಿದ್ದು ಬಹಳ ಖುಷಿಯಾಗುತ್ತಿದೆ. ನಾಳೆ ವೈದ್ಯನಾಗಿ ರೈತರಿಗೆ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಸಹಾಯ ಮಾಡುತ್ತೇವೆ ಎಂದರು.
Advertisement
Advertisement
ಘಟಿಕೋತ್ಸವದಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್, ಪಶು ವಿವಿ ಕುಲಪತಿಗಳು, ಡೀನ್‍ಗಳು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಇದನ್ನೂ ಓದಿ: ಚಿನ್ನ, ಬೆಳ್ಳಿ ದರ ಭಾರೀ ಇಳಿಕೆ