LatestLeading NewsMain PostNational

ಚಿನ್ನ, ಬೆಳ್ಳಿ ದರ ಭಾರೀ ಇಳಿಕೆ

ಮುಂಬೈ: ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಿದೆ.

10 ಗ್ರಾಂ 24 ಕ್ಯಾರೆಟ್‌ ಚಿನ್ನದ ಬೆಲೆ 485 ರೂ. ಇಳಿಕೆಯಾಗಿದೆ. ಬುಧವಾರ 51,749 ರೂ.ಗೆ ಕೊನೆಯಾಗಿದ್ದರೆ ಇಂದು 51,264 ರೂ.ಗೆ ಕೊನೆಯಾಗಿದೆ.

10 ಗ್ರಾಂ 22 ಕ್ಯಾರೆಟ್‌ ಚಿನ್ನದ ಬೆಲೆ 483 ರೂ. ಕಡಿಮೆಯಾಗಿದೆ. ಬುಧವಾರ 51,542 ರೂ. ಇದ್ದರೆ ಇಂದು 51,059 ರೂ.ಗೆ ಇಳಿಕೆಯಾಗಿದೆ. ಇದನ್ನೂ ಓದಿ: 30 ಲಕ್ಷದ ಚಿನ್ನವನ್ನು ಗುದನಾಳ, ವಿಗ್‌ನಲ್ಲಿ ಬಚ್ಚಿಟ್ಟುಕೊಂಡಿದ್ದ ಕಿಲಾಡಿ ಕಳ್ಳನ ಬಂಧನ

ಕೆಜಿ ಬೆಳ್ಳಿ ದರ 1,286 ರೂ. ಕಡಿಮೆಯಾಗಿದೆ. ಬುಧವಾರ 65,277 ರೂ. ಇದ್ದರೆ ಗುರುವಾರ ಇದು 63,991 ರೂ.ಗೆ ಕೊನೆಯಾಗಿದೆ.

ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್‌ ರಿಸರ್ವ್‌ ಬಡ್ಡಿ ದರವನ್ನು ಏರಿಕೆ ಮಾಡಬಹುದು ಎಂಬ ಸುದ್ದಿ, ಪೋಲೆಂಡ್‌ ಮತ್ತು ಬಲ್ಗೇರಿಯಾಗೆ ರಷ್ಯಾದಿಂದ ಗ್ಯಾಸ್‌ ಕಡಿತ, ರಷ್ಯಾ ಉಕ್ರೇನ್‌ ಯುದ್ಧ. ಈ ಎಲ್ಲ ಬೆಳವಣಿಗೆಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ದರ ಇಳಿಕೆಯಾಗಿದೆ.

Leave a Reply

Your email address will not be published.

Back to top button