ಮೈಸೂರು: ಹಿರಿಯ ಪತ್ರಕರ್ತರಾದ ರಾಜಶೇಖರ ಕೋಟಿ ಅವರು ಇವತ್ತು ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೋಟಿ ಅವರಿಗೆ 71 ವರ್ಷ ವಯ್ಸಸ್ಸಾಗಿತ್ತು.
ರಾಜಶೇಖರ ಕೋಟಿ ಅವರು ಕಳೆದ 42 ವರ್ಷಗಳಿಂದ ಸುದೀರ್ಘ ಕಾಲ ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡಿದ್ದರು. ಗದಗ ಜಿಲ್ಲೆ ಹುಯಿಲಗೋಳ ಗ್ರಾಮದಲ್ಲಿ ಜನಿಸಿದ ರಾಜಶೇಖರ ಕೋಟಿ ಹಿರಿಯ ಪತ್ರಕರ್ತರಾದ ಡಾ. ಪಾಟೀಲ್ ಪುಟ್ಟಪ್ಪ ಗರಡಿಯಲ್ಲಿ ಪತ್ರಿಕೋದ್ಯಮ ಆರಂಭಿಸಿದ್ದರು. ನಂತರ ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಆಂದೋಲನ ದಿನಪತ್ರಿಕೆ ಆರಂಭಿಸಿ ದೊಡ್ಡ ಯಶಸ್ಸು ಕಂಡಿದ್ದರು.
Advertisement
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಟಿಎಸ್‍ಆರ್ ಪ್ರಶಸ್ತಿ, ಮುರುಘಾ ಶ್ರೀ ಪ್ರಶಸ್ತಿ, ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗಳು ಕೋಟಿ ಅವರ ಮುಡಿಗೇರಿದ್ದವು. ಪತ್ನಿ ನಿರ್ಮಾಲ ಕೋಟಿ, ಮಕ್ಕಳಾದ ರಶ್ಮಿ ಕೋಟಿ, ರಮ್ಯಾ ಕೋಟಿ ಹಾಗೂ ರವಿಕೋಟಿಯನ್ನ ಅಗಲಿ ಬಾರದಲೋಕಕ್ಕೆ ರಾಜಶೇಖರ ಕೋಟಿ ತೆರಳಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕೀಯ ಗಣ್ಯರು ಕೋಟಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ .
Advertisement
ಆಂದೋಲನ ಪತ್ರಿಕೆಯ ಸಂಪಾದಕರು ಮತ್ತು ಆತ್ಮೀಯ ಸ್ನೇಹಿತರಾಗಿದ್ದ ರಾಜಶೇಖರ ಕೋಟಿ ಅವರ ನಿಧನ ಆಘಾತವನ್ನುಂಟು ಮಾಡಿದೆ. ಅವರ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು. pic.twitter.com/56TT0y2jov
— CM of Karnataka (@CMofKarnataka) November 23, 2017