ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಎಸ್‍ಐಟಿ ಜೊತೆ ಇಂದು ಕರ್ನಾಟಕ ಎಸ್‍ಐಟಿ ಮಾತುಕತೆ ನಡೆಸಲಿದೆ. ಈ ವೇಳೆ ಆರೋಪಿಗಳನ್ನು ಕರ್ನಾಟಕ ಎಸ್‍ಐಟಿ ವಶಕ್ಕೆ ನೀಡುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ.
ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿ ಬಾಡಿವಾರೆಂಟ್ ಮೇಲೆ ವಶಕ್ಕೆ ನೀಡುವಂತೆ ಎಸ್‍ಐಟಿ ಮನವಿ ಸಲ್ಲಿಸಲಿದೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.
Advertisement
Advertisement
ಕರ್ನಾಟಕ ಎಸ್‍ಐಟಿ ಆರೋಪಿಗಳ ಬಂಧನಕ್ಕೆ ಸುಳಿವು ನೀಡಿತ್ತು. ಕರ್ನಾಟಕ ಎಸ್‍ಐಟಿ ನೀಡಿದ ಮಾಹಿತಿ ಆಧರಿಸಿ ಮುಂಬೈನಲ್ಲಿ ವೈಭವ್ ರಾವತ್ ಬಂಧನವಾಗಿತ್ತು. ಬಳಿಕ ಶರದ್ ಕಲಾಸ್ಕರ್ ಮತ್ತು ಸುಧನ್ವ ಗೊಂಧಾಲೇಕರ್ ಬಂಧನವಾಗಿತ್ತು. ಬಂಧಿತ ಆರೋಪಿಗಳಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, 11 ಕಂಟ್ರಿಮೇಡ್ ಪಿಸ್ತೂಲ್‍ಗಳು, ಜೀವಂತ ಗುಂಡುಗಳು ಜಪ್ತಿಯಾಗಿತ್ತು.
Advertisement
Advertisement
ಈ ಐವರು ಆರೋಪಿಗಳ ಪೈಕಿ ಒಬ್ಬರು ಗೌರಿ ಹತ್ಯೆಗೆ ಪಿಸ್ತೂಲ್ ರವಾನೆ ಮಾಡಿರೋ ಬಗ್ಗೆ ಮಾಹಿತಿ ಕಲೆಹಾಕಲಾಗಿತ್ತು. ಪಿಸ್ತೂಲ್ ವಶಕ್ಕೆ ಪಡೆಯಲು ಆರೋಪಿಗಳ ವಿಚಾರಣೆ ಅಗತ್ಯ ಎಂದು ಕೋರ್ಟ್ ಮೊರೆ ಹೋಗಲಾಗಿತ್ತು. ಸದ್ಯ ಎಸ್‍ಐಟಿ ಮುಂಬೈ ಕೋರ್ಟ್‍ನಲ್ಲಿ ಇಂದು ಅರ್ಜಿ ಸಲ್ಲಿಸಿ ಗೌರಿ ಹತ್ಯೆಗೆ ಇವರೇ ಪ್ರಮುಖ ಕಾರಣ ಎಂಬ ಮಾಹಿತಿ ಮೇಲೆ ವಶಕ್ಕೆ ಕೇಳಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv