ಇಟಾನಗರ: ಅರುಣಾಚಲ ಪ್ರದೇಶದ ತವಾಂಗ್‍ನ (Tawang) ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ರಾಜ್ಯ ಸಚಿವ ಥುಪ್ಟೆನ್ ಟೆಂಪಾ(63) (Thupten Tempa) ಅವರು ಇಟಾನಗರದ (Itanagar) ರಾಮಕೃಷ್ಣ ಮಿಷನ್ ಆಸ್ಪತ್ರೆಯಲ್ಲಿ (Ramakrishna Mission Hospital) ನಿಧನರಾಗಿದ್ದಾರೆ.
ಥುಪ್ಟೆನ್ ಟೆಂಪಾ ಅವರ ನಿಧನಕ್ಕೆ ಅರುಣಾಚಲ ಪ್ರದೇಶದ (Arunachal Pradesh) ಮುಖ್ಯಮಂತ್ರಿ ಪ್ರೇಮಾ ಖಂಡು (Prema Khandu) ಅವರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಅರುಣಾಚಲ ಪ್ರದೇಶದ ಹಿರಿಯ ನಾಯಕ ಥುಪ್ಟೆನ್ ಟೆಂಪಾ ಅವರ ನಿಧನದಿಂದ ದುಃಖವಾಗಿದೆ. ಭಗವಾನ್ ಬುದ್ಧ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ. ಓಂ ಮಣಿ ಪದ್ಮೇ ಹಮ್ ಎಂದು ಥುಪ್ಟೆನ್ ಟೆಂಪಾ ಅವರ ಫೋಟೋ ಜೊತೆಗೆ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.
Saddened by passing away of senior leader of Arunachal Pradesh, Shri Thupten Tempa ji.
May Lord Buddha provide peace to his soul and strength to the bereaved family to bear the loss.
Om Mani Padme Hum! pic.twitter.com/zxmPNX0Mgg
— Pema Khandu པདྨ་མཁའ་འགྲོ་། (@PemaKhanduBJP) October 7, 2022
ಥುಪ್ಟೆನ್ ಟೆಂಪಾ ಅವರಿಗೆ ಗುರುವಾರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಶುಕ್ರವಾರ ಸಂಜೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಡಿಮೆ ರಕ್ತದೊತ್ತಡ ಹಿನ್ನೆಲೆ ಥುಪ್ಟೆನ್ ಟೆಂಪಾ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ದಿನಗಳ ಅಂತರದಲ್ಲಿ ಎಮ್ಮೆ ಬಳಿಕ ಹಸುವಿಗೆ ಗುದ್ದಿದ ವಂದೇ ಭಾರತ್ ಎಕ್ಸ್‌ಪ್ರೆಸ್
ರಾಜಕಾರಣಕ್ಕೆ ಸೇರುವ ಮುನ್ನ ಥುಪ್ಟೆನ್ ಟೆಂಪಾ ಆಡಳಿತಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಹೊಸ ದೆಹಲಿಯ ಜೆಎನ್‍ಯುವಿನಲ್ಲಿ ಇಂಟರ್ ನ್ಯಾಷನಲ್ ರಿಲೇಶನ್ಸ್‌ನಲ್ಲಿ ಎಂಎ ಪದವಿ ಮತ್ತು ರಾಜತಾಂತ್ರಿಕತೆಯಲ್ಲಿ ಎಂಫಿಲ್ ಪಡೆದರು. 2019ರಲ್ಲಿ ಟೆಂಪಾ 2-ತವಾಂಗ್ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಟಿಕೆಟ್ ಪಡೆದು ಬಿಜೆಪಿಯ ತ್ಸೆರಿಂಗ್ ತಾಶಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಇದನ್ನೂ ಓದಿ: ಟ್ರಕ್‍ಗೆ ಬಸ್ ಡಿಕ್ಕಿ – ಬೆಂಕಿ ಹೊತ್ತಿ 11 ಸಾವು, 38 ಮಂದಿಗೆ ಗಾಯ