ಬೆಂಗಳೂರು: ನಗರದಲ್ಲಿ ವೆಹಿಕಲ್ ಟೋಯಿಂಗ್ ಮಾಡುತ್ತಿದ್ದ ಹುಡುಗರನ್ನು ಸಾರ್ವಜನಿಕರು ಅಟ್ಟಾಡಿಸಿಕೊಂಡು ಹೊಡೆದಿರುವ ಘಟನೆ ಇಂದಿರಾ ನಗರದಲ್ಲಿ ನಡೆದಿದೆ.
Advertisement
ಬೆಂಗಳೂರು ನಗರದಲ್ಲಿ ನಡೆದಿರುವ ಎರಡನೇ ಘಟನೆ ಇದಾಗಿದ್ದು, ಕಳೆದ ತಿಂಗಳು ಯಲಹಂಕದಲ್ಲಿ ಬೈಕ್ ಟೋಯಿಂಗ್ ಮಾಡೋ ವಿಚಾರವಾಗಿ ಇಬ್ಬರಿಗೆ ಹೆಲ್ಮೆಟ್‍ನಿಂದ ಹಿಗ್ಗಾಮುಗ್ಗ ಸಾರ್ವಜನಿಕರು ಥಳಿಸಿದ್ದರು. ಘಟನೆ ಸಂಬಂಧ ಹಲ್ಲೆಮಾಡಿದವರ ಮೇಲೆ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಇಬ್ಬರನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಕೆಟ್ಟು ನಿಂತ ಟೆಂಪೋವನ್ನು 7 ಕಿ.ಮೀ ಎಳೆದ ಬೈಕ್! – ವಿಡಿಯೋ ನೋಡಿ
Advertisement
ಈ ಘಟನೆ ಮಾಸುವ ಮುನ್ನವೇ ನಗರದಲ್ಲಿ ಮತ್ತೊಂದು ಘಟನೆ ಹಲಸೂರು ಸಂಚಾರಿ ಪೊಲೀಸ್ ಠಾಣಾ ಟೋಯಿಂಗ್ ಹುಡುಗರ ಮೇಲೆ ಹಲ್ಲೆ ನಡೆದಿದೆ. ಇಂದಿರಾ ನಗರದಲ್ಲಿ ಸಂಜೆ ನಾಲ್ಕು ಗಂಟೆಗೆ ಬೈಕ್ ಟೋಯಿಂಗ್ ಮಾಡುವ ವಿಚಾರವಾಗಿ ಸಾರ್ವಜನಿಕರು ಹಾಗೂ ಟೋಯಿಂಗ್ ಸಿಬ್ಬಂದಿ ನಡುವೆ ಗಲಾಟೆ ಆಗಿದೆ. ಗಲಾಟೆ ವಿಕೋಪಕ್ಕೆ ಹೋದಾಗ ಸಾರ್ವಜನಿಕರು ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.
Advertisement
Advertisement
ಈ ಘಟನೆ ಸಂಬಂಧ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಹಲಸೂರು ಸಂಚಾರಿ ಪೊಲೀಸ್ ಠಾಣಾ ಎಸ್.ಐ ರಾಜೇಂದ್ರ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಹಲ್ಲೆಕೋರರಿಗೆ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪಾರ್ಕಿಂಗ್‌ನಲ್ಲೇ ಬೈಕ್ ಪಾರ್ಕ್ ಮಾಡಿದ್ರೂ ಟೋಯಿಂಗ್ ಕಾಟ- ಫೈನ್ ಕಟ್ಟದೆ ಮಹಿಳೆ ಅವಾಜ್