ಬೆಂಗಳೂರು: ರಾಜ್ಯ ಎದುರಿಸಿದ ಭೀಕರ ಪ್ರವಾಹದಿಂದ ಒಂದೆಡೆ ಬೆಳೆಗಳು ಹಾನಿಯಾಗಿ, ಇನ್ನೊಂದೆಡೆ ತರಕಾರಿ ಸಾಗಿಸಲು ಹಲವೆಡೆ ಸರಿಯಾದ ರಸ್ತೆ ಸಂಪರ್ಕವಿಲ್ಲದ ಕಾರಣ ತರಕಾರಿ ಬೆಲೆ ಗಗನಕ್ಕೇರಿದೆ.
ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಪ್ರವಾಹದಿಂದ ತರಕಾರಿ ಬೆಲೆ ಹೆಚ್ಚಾಗಿದೆ. ಭೀಕರ ಪ್ರವಾಹಕ್ಕೆ ತರಕಾರಿ ಬೆಳೆಗಳು ನಾಶವಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರೀ ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ತರಕಾರಿ ಸಾಗಾಟ ಮಾಡಲು ಆಗುತ್ತಿಲ್ಲ. ಹೀಗಾಗಿ ಸಂಚಾರ ವ್ಯವಸ್ತೆ ಇಲ್ಲದೆ ಮಾರುಕಟ್ಟೆಯಲ್ಲಿ ತರಕಾರಿ ಪೂರೈಕೆ ಕಡಿಮೆಯಾಗಿದೆ.
ಕಳೆದ 10 ದಿನಗಳಲ್ಲಿ ಈರುಳ್ಳಿ ಬೆಲೆ ದುಪ್ಪಟ್ಟಾಗಿದೆ. ಕೆಜಿಗೆ 25 ರೂ. ಇದ್ದ ಈರುಳ್ಳಿ ಬೆಲೆ 40 ರೂಪಾಯಿಗೆ ಏರಿಕೆಯಾಗಿದೆ. ಬೀಟ್ ರೋಟ್ 40 ರಿಂದ 60 ರೂಪಾಯಿ ತಲುಪಿದೆ. ಬೆಳ್ಳುಳ್ಳಿ 100 ರಿಂದ 140 ರೂ. ಏರಿಕೆಯಾಗಿದೆ. ಹಾಗೆಯೇ ಶುಂಠಿ 120 ರಿಂದ 160 ರೂಪಾಯಿಗೆ ಬಂದು ನಿಂತಿದೆ. ಹೀಗೆ ಇತರೆ ತರಕಾರಿಗಳ ಬೆಲೆ ಕೂಡ ಏರಿಕೆಯಾಗಿದ್ದು, ಗ್ರಾಹಕರಿಗೆ ದುಬಾರಿಯಾಗಿದೆ.
ಏರಿಕೆಯಾದ ತರಕಾರಿ ಬೆಲೆ:
* ಈರುಳ್ಳಿ – 40 ರೂ. (25 ರೂ.)
* ಬೀಟ್ ರೋಟ್ – 60 ರೂ. (40 ರೂ.)
* ಬೆಳ್ಳುಳ್ಳಿ – 140 ರೂ. (100 ರೂ.)
* ಶುಂಠಿ – 160 ರೂ. (120 ರೂ.)
* ಟೊಮೋಟೊ – 40 ರೂ. (25 ರೂ.)
* ಆಲೂಗೆಡ್ಡೆ – 40 ರೂ. (25 ರೂ.)
* ಕ್ಯಾರೆಟ್ – 100 ರೂ. (80 ರೂ.)
* ಬೀನ್ಸ್ – 80 ರೂ. (60 ರೂ.)
* ಬೆಂಡೆಕಾಯಿ – 60 ರೂ. (42 ರೂ.)
* ಬದನೆಕಾಯಿ – 60 ರೂ. (50 ರೂ.)
* ಕ್ಯಾಪ್ಸಿಕಂ – 80 ರೂ. (65 ರೂ.)
ಆವರಣದಲ್ಲಿ ನೀಡಿರುವುದು ಹಿಂದಿನ ಬೆಲೆ