ಬೆಳಗಾವಿ: ದಿನೇ ದಿನೇ ಚುನಾವಣಾ ಪ್ರಚಾರ ಕಣ ರಂಗೇರುತ್ತಿದ್ದು, ಈ ಮಧ್ಯೆ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಸಾಮಾನ್ಯ ಗೃಹಿಣಿಯಂತೆ ರಸ್ತೆ ಬದಿ ತರಕಾರಿ ಖರೀದಿಸಿದ್ದಾರೆ.
Advertisement
ಖಾನಾಪುರ ತಾಲೂಕಿನ ನಂದಗಡದ ಗ್ರಾಮದಲ್ಲಿ ಚುನಾವಣಾ ಪ್ರಚಾರದ ಸಂದರ್ಭದ ನಡುವೆಯೂ ಶಾಸಕಿ ಸಂತೆಯಲ್ಲಿ ತರಕಾರಿ ಖರೀದಿಸಿದ್ದಾರೆ. ಡಿಸೆಂಬರ್ 10 ರಂದು ವಿಧಾನ ಪರಿಷತ್ ಚುನಾವಣೆ ನಡೆಯುವ ಹಿನ್ನೆಲೆ ನಾಗರಾಳಿಯಲ್ಲಿ ಕೈ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಪರ ಅವರು ಪ್ರಚಾರ ಮಾಡುತ್ತಿದ್ದಾರೆ. ಇದನ್ನೂ ಓದಿ: ಕಡಲೆಕಾಯಿ ಪರಿಷೆಯಲ್ಲಿ ನಕ್ಕುನಲಿದ ವೈಷ್ಣವಿಗೌಡ
Advertisement
Advertisement
ಪ್ರಚಾರ ಮುಗಿಸಿದ ಬಳಿಕ ಖಾನಾಪುರಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಗ್ರಾಮದ ವಾರದ ಸಂತೆಯ ಮಾರುಕಟ್ಟೆಗೆ ಭೇಟಿ ನೀಡಿ ಕ್ಯಾರೆಟ್, ಬೀಟ್ರೂಟ್, ಸೌತೆಕಾಯಿ, ಪಾಲಕ್, ಬೀನ್ಸ್ ಸೇರಿ ಇತರೆ ತರಕಾರಿಯನ್ನು ಖರೀದಿ ಮಾಡಿದ್ದಾರೆ. ಶಾಸಕಿಯಾಗಿದ್ದುಕೊಂಡು ಓರ್ವ ಸಾಮಾನ್ಯ ಗೃಹಿಣಿಯಂತೆ ತರಕಾರಿ ಖರೀದಿ ಮಾಡುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಐರಾಗೆ ಹುಟ್ಟುಹಬ್ಬದ ಸಂಭ್ರಮ – ನಿನ್ನ ಕೈ ಹಿಡಿಯಲು ಯಾವಾಗಲೂ ಇರುತ್ತೇನೆ ಅಂದ ರಾಧಿಕಾ