ಹೊರಗಡೆ ಫುಡ್ ತಿಂದು ಬೋರ್ ಆಗಿದ್ಯಾ ನಿಮಗೆ. ಮನೆಯಲ್ಲೇ ಏನಾದರೂ ಮಾಡಿ ತಿನ್ನಬೇಕು ಅಂತಾ ಅನ್ಕೊಂಡಿದಿರಾ? ಹಾಗಿದ್ರೆ ನಾವು ಇವತ್ತು ಗರಿಗರಿಯಾದ ವೆಜ್ ಕಟ್ಲೆಟ್ ಅನ್ನು ಸುಲಭವಾಗಿ ಮನೆಯಲ್ಲಿ ಮಾಡೋದು ಹೇಗೆ ಅಂತಾ ಹೇಳಿ ಕೊಡುತ್ತೇವೆ. ಗರಿಗರಿಯಾದ ವೆಜ್ ಕಟ್ಲೆಟ್(Veg Cutlet) ತಿಂದು ಬಾಯಿ ಚಪ್ಪರಿಸಿ.
ಬೇಕಾಗಿರುವ ಸಾಮಗ್ರಿಗಳು:
ಆಲೂಗಡ್ಡೆ – 2
ಕ್ಯಾರೆಟ್ – ¼ ಕಪ್
ಬೀನ್ಸ್ – ¼ ಕಪ್
ಸ್ವೀಟ್ ಕಾರ್ನ್ – ¼ ಕಪ್
ಬಟಾಣಿ – ½ ಕಪ್
ಬೀಟ್ರೂಟ್ – ½ ಕಪ್
ಬ್ರೆಡ್ ಕ್ರಂಬ್ಸ್ – ¼ ಕಪ್
ಮೆಣಸಿನ ಪುಡಿ – ½ ಟೀಸ್ಪೂನ್
ಜೀರಿಗೆ ಪುಡಿ – ¼ ಟೀಸ್ಪೂನ್
ಗರಂ ಮಸಾಲಾ – ¼ ಟೀಸ್ಪೂನ್
ಆಮ್ಚೂರ್ ಪುಡಿ – ½ ಟೀಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ಕಾರ್ನ್ ಫ್ಲೇಕ್ಸ್ – 1 ಕಪ್
ಕಾರ್ನ್ ಹಿಟ್ಟು – 3 ಟೇಬಲ್ ಸ್ಪೂನ್
ಮೈದಾ- 2 ಟೇಬಲ್ ಸ್ಪೂನ್
ಪೆಪ್ಪರ್ ಪುಡಿ – ¼ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
* ಮೊದಲಿಗೆ, ಪ್ರೆಷರ್ ಕುಕ್ಕರ್‌ನಲ್ಲಿ 2 ಕಪ್ ನೀರು ಹಾಕಿ 2 ಆಲೂಗಡ್ಡೆ, ಕ್ಯಾರೆಟ್, ಬೀನ್ಸ್, ಸ್ವೀಟ್ ಕಾರ್ನ್, ಬಟಾಣಿ, ಬೀಟ್ರೂಟ್ ಮತ್ತು ಸ್ವಲ್ಪ ಉಪ್ಪು ಸೇರಿಸಿ. 5 ಸೀಟಿಗಳಿಗೆ ಬೇಯಿಸಿ
* ಇದು ತಣ್ಣಗಾದ ನಂತರ ತರಕಾರಿಗಳನ್ನು ಮ್ಯಾಶ್ ಮಾಡಿ.
* ಬಳಿಕ ಬ್ರೆಡ್ ಕ್ರಂಬ್ಸ್‌ಗಳನ್ನು ಸೇರಿಸಿ. ಮೆಣಸಿನ ಪುಡಿ, ಜೀರಾ ಪುಡಿ, ಗರಂ ಮಸಾಲಾ, ಆಮ್ಚೂರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
* ನಂತರ ಕಾರ್ನ್ ಹಿಟ್ಟು, ಮೈದಾ, ಪೆಪ್ಪರ್ ಮತ್ತು ಉಪ್ಪು ಸೇರಿಸಿ ಕಾರ್ನ್ ಫ್ಲೋರ್ ಬ್ಯಾಟರ್ ತಯಾರಿಸಿ.
* ತರಕಾರಿ ಮಿಶ್ರಣವನ್ನು ತೆಗೆದುಕೊಂಡು ಸಿಲಿಂಡರಾಕಾರದ ಆಕಾರವನ್ನು ನೀಡಿ, ಕಾರ್ನ್ ಹಿಟ್ಟು ಬ್ಯಾಟರ್‌ನಲ್ಲಿ ಅದನ್ನು ಡಿಪ್ ಮಾಡಿ.
* ನಂತರ ಬ್ರೆಡ್ ಕ್ರಂಬ್ಸ್‌ಗಳಿಂದ ಕೋಟ್ ಮಾಡಿ.
* 15-20 ನಿಮಿಷಗಳ ಕಾಲ ಮೀಡಿಯಂ ಫ್ಲೇಮ್ ನಲ್ಲಿ ಎಣ್ಣೆಯಲ್ಲಿ ಫ್ರೈ ಮಾಡಿ. ಗೋಲ್ಡ್ ಬಣ್ಣ ಬಂದ ಮೇಲೆ ತೆಗೆಯಿರಿ.
* ಗರಿಗರಿಯಾದ ವೆಚ್ ಕಟ್ಲೆಟ್ ಅನ್ನು ಟೊಮೆಟೊ ಸಾಸ್ ನೊಂದಿಗೆ ಸವಿಯಿರಿ.