ಕಿರುತೆರೆಯ ನಟಿ ವೀಣಾ ಪೊನ್ನಪ್ಪ (Veena Ponappa) ಅವರು ‘ವೇದ’ (Vedha) ಚಿತ್ರದ ಸಕ್ಸಸ್ ನಂತರ ಉಪೇಂದ್ರ ನಟನೆಯ ‘ಯುಐ’ (Ui) ಚಿತ್ರದಲ್ಲಿ ನಟಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ವತಃ ನಟಿಯೇ ಸಿಹಿ ಸುದ್ದಿ ನೀಡಿದ್ದಾರೆ. ಈ ಕುರಿತ ಪೋಸ್ಟ್ ಕೂಡ ಎಲ್ಲೆಡೆ ಸದ್ದು ಮಾಡುತ್ತಿದೆ.
ಪ್ರಸ್ತುತ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಸೀರಿಯಲ್‌ನಲ್ಲಿ ರಾಣಿಯ ಪಾತ್ರವನ್ನು ಮಾಡುತ್ತಾ ಅದ್ಭುತವಾಗಿ ಅಭಿನಯಿಸುತ್ತಿರುವ ನಟಿ ವೀಣಾ ಇದೀಗ ಕನ್ನಡದ ನಟ, ನಿರ್ದೇಶಕ ಉಪೇಂದ್ರ (Upendra)ಅವರ ‘ಯುಐ’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಈಗಾಗಲೇ ಕಿರುತೆರೆಯಲ್ಲಿ ಸಾಕಷ್ಟು ಪಾತ್ರಗಳ ಮೂಲಕ ರಂಜಿಸಿರೋ ವೀಣಾ, ಸ್ಯಾಂಡಲ್‌ವುಡ್ ಪೋಷಕ ಪಾತ್ರಗಳ ಮೂಲಕ ಮಿಂಚಲು ಸಜ್ಜಾಗಿದ್ದಾರೆ.
ಇದೀಗ ವೀಣಾ ಪೊನ್ನಪ್ಪ ಆನ್ ಬೋರ್ಡ್ ‘ಯು ಐ’ ಎಂದು ಬರೆದುಕೊಂಡು ಈ ಸಂತೋಷದ ವಿಚಾರವನ್ನು ಅಭಿಮಾನಿಗಳಿಗೆ ಹಾಗೂ ತಮ್ಮ ಫಾಲೋವರ್ಸ್‌ಗೆ ಸಂದೇಶ ರವಾನಿಸಿದ್ದಾರೆ. ಚಿತ್ರತಂಡದ ಕಡೆಯಿಂದ ಅಧಿಕೃತ ಪೋಸ್ಟರ್‌ವೊಂದು ಹೊರಬಿದ್ದಿದೆ. 2022ರಲ್ಲಿ ‘ವೇದ’ ಸಿನಿಮಾದಲ್ಲಿ ಪೊಲೀಸ್ ಇನ್‌ಸ್ಟೆಕ್ಟರ್ ಆಗಿ ಕಾಣಿಸಿಕೊಂಡ ನಟಿ ವೀಣಾ ಪೊನ್ನಪ್ಪ ಅವರು ತಮ್ಮ ನಟನೆಗೆ ಬಹಳಷ್ಟು ಮೆಚ್ಚುಗೆಯನ್ನು ಪಡೆದಿದ್ದರು. ಇದನ್ನೂ ಓದಿ:‘ಕಬಾಲಿ’ ನಿರ್ಮಾಪಕ ಅರೆಸ್ಟ್ ಬೆನ್ನಲ್ಲೇ ಡ್ರಗ್ಸ್ ಪ್ರಕರಣದಲ್ಲಿ ನಟಿ ಅಶು ರೆಡ್ಡಿ ಹೆಸರು
ಇದೀಗ ಬಹಳಷ್ಟು ಕಿರುತೆರೆ ಪ್ರಿಯರ ಪ್ರೀತಿಗೆ ನಟಿ ವೀಣಾ ಪಾತ್ರವಾಗಿದ್ದಾರೆ. ಹೀಗಿರುವಾಗಲೇ ಉಪೇಂದ್ರ ಅವರ ಸಿನಿಮಾದಲ್ಲಿ ಅವಕಾಶ ಸಿಕ್ಕಿರುವುದು ನಟಿಗೆ ಖುಷಿ ಕೊಟ್ಟಿದೆ. ಹೀಗೆ ವೀಣಾ ಸಿನಿ ಜರ್ನಿಯಲ್ಲಿ UI ಚಿತ್ರ ಒಂದು ಒಳ್ಳೆಯ ಮೈಲುಗಲ್ಲಾಗುವುದರಲ್ಲಿ ಸಂದೇಹವಿಲ್ಲ. ಎಂದೂ ಕಾಣಿಸಿಕೊಂಡಿರದ ಭಿನ್ನ ಪಾತ್ರಕ್ಕೆ ವೀಣಾ ಜೀವತುಂಬಿದ್ದಾರೆ. ಎಲ್ಲದ್ದಕ್ಕೂ ಸಿನಿಮಾ ತೆರೆಗೆ ಬರೋವರೆಗೂ ಕಾಯಬೇಕಿದೆ. ಅಂದಹಾಗೆ, ಉಪೇಂದ್ರ ನಟನೆಯ & ನಿರ್ದೇಶನದ ‘ಯುಐ’ ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಈ ಚಿತ್ರಕ್ಕೆ ಲಹರಿ ಫಿಲ್ಮ್ಸ್(Lahari Films), ನಿರ್ಮಾಪಕ ಶ್ರೀಕಾಂತ್ ಅವರು ಬಂಡವಾಳ ಹೂಡಿದ್ದಾರೆ.