ಬಾಲಿವುಡ್ ನಟಿ ಸೋನಂ ಕಪೂರ್ ಇದೀಗ ಮುದ್ದು ಮಗನ ಆಗಮನದ ಖುಷಿಯಲ್ಲಿದ್ದಾರೆ. ತಮ್ಮ ಮಗುವಿಗೆ ನಾಮಕರಣ ಮಾಡಿದ್ದಾರೆ. ತಮ್ಮ ಮಗುವಿನ ಹೆಸರನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ರಿವೀಲ್ ಮಾಡಿದ್ದಾರೆ.
View this post on Instagram
ಬಿಟೌನ್‌ನಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದ ನಟಿ ಸೋನಂ ಕಪೂರ್ 2018ರಲ್ಲಿ ಆನಂದ್ ಅಹುಜಾ ಜೊತೆ ಹಸೆಮಣೆ ಏರಿದ್ದರು. ಇದೀಗ ಅನಿಲ್ ಕಪೂರ್ ಪುತ್ರಿ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಆಗಸ್ಟ್ 20, 2022ರಂದು ಗಂಡು ಮಗುವಿಗೆ ಸೋನಂ ಜನ್ಮ ನೀಡಿದ್ದರು. ಇದೀಗ ಒಂದು ತಿಂಗಳ ನಂತರ ಮಗನ ನಾಮಕರಣವನ್ನು ಅದ್ದೂರಿಯಾಗಿ ನೆರವೇರಿಸಿದ್ದಾರೆ.
View this post on Instagram
ಸೋನಂ ಕಪೂರ್ ದಂಪತಿ ತಮ್ಮ ಮಗನಿಗೆ ʻವಾಯು ಕಪೂರ್ ಅಜುಹಾʼ ಎಂದು ಹೆಸರಿಟ್ಟಿದ್ದಾರೆ. ಹಿಂದೂ ಧರ್ಮದಲ್ಲಿರುವ ಪಂಚಭೂತಗಳಲ್ಲಿ ವಾಯುವೂ ಕೂಡ ಒಂದು ಎಂಬ ಕಾರಣಕ್ಕೆ ತಮ್ಮ ಮಗನಿಗೆ ʻವಾಯುʼ ಎಂದು ಹೆಸರಿಟ್ಟಿದ್ದೇವೆ ಎಂದು ಸೋನಂ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಮ್ಮ ಮಗ ವಾಯು ಮೇಲೆ ಕೂಡ ನಿಮ್ಮ ಹಾರೈಕೆಯಿರಲಿ ಎಂದು ಅಭಿಮಾನಿಗಳಲ್ಲಿ ಸೋನಂ ದಂಪತಿ ಕೇಳಿಕೊಂಡಿದ್ದಾರೆ. ಇದನ್ನೂ ಓದಿ:‘ಸೈಮಾ ಅವಾರ್ಡ್’ ಐಷಾರಾಮಿ ಹೋಟೆಲ್‌ನಲ್ಲಿ ಸೆಲೆಬ್ರಿಟಿಗಳ ತಡರಾತ್ರಿ ಪಾರ್ಟಿ : FIR ದಾಖಲು
ಸದ್ಯ ಸೋನಂ ಕಪೂರ್ ದಂಪತಿ ತಮ್ಮ ಮಗನ ಜೊತೆಯಿರುವ ಫೋಟೋ ಸಖತ್ ವೈರಲ್ ಆಗುತ್ತಿದೆ. ಫೋಟೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.