CinemaInternationalLatestLeading NewsMain Post

ಐದೈದು ಸರಣಿಯಲ್ಲಿ ಅವತಾರ್ : 13 ವರ್ಷಗಳ ಬಳಿಕ ತೆರೆಗೆ ಬಂದ ಬಾಕ್ಸ್ ಆಫೀಸ್ ಕಿಂಗ್

ಸಿನಿಲೋಕದಲ್ಲಿಯೇ ‘ಅವತಾರ್’ ಸಿನಿಮಾ ಇತಿಹಾಸವನ್ನೇ ಸೃಷ್ಟಿಮಾಡಿತ್ತು. 2009ರಲ್ಲಿ ರಿಲೀಸ್ ಆದ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ ಎಲ್ಲರ ಗಮನ ಸೆಳೆದಿತ್ತು. ಆದರೆ ಈಗ ಈ ಸಿನಿಮಾದ ಮತ್ತೊಂದು ಸೀಕ್ವೆಲ್ ರಿಲೀಸ್ ಆಗುತ್ತಿದೆ.

Ubisoft Delays Avatar Game Into 2022

2009ರಲ್ಲಿ ರಿಲೀಸ್ ಆಗಿದ್ದ ‘ಅವತಾರ್’ ಸಿನಿಮಾದ ಸೀಕ್ವೆಲ್ ಬರುತ್ತೆ ಎಂದು ಅದೇ ಚಿತ್ರತಂಡ ಘೋಷಣೆ ಮಾಡಿತ್ತು. ಅಂದಿನಿಂದ ಸೀಕ್ವೆಲ್ ಟೈಟಲ್ ಬಗ್ಗೆ, ಯಾವತ್ತು ರಿಲೀಸ್ ಆಗುತ್ತೆ ಎಂಬುದರ ಬಗ್ಗೆ ಚರ್ಚೆಯಾಗುತ್ತಲೇ ಇತ್ತು. ಈ ಎಲ್ಲ ಪ್ರಶ್ನೆಗಳಿಗೂ ಇಂದು ತೆರೆ ಬಿದ್ದಿದೆ. ಇದನ್ನೂ ಓದಿ:  ‘ಕಾತುವಕುಲಾ ರೆಂಡು ಕಾದಲ್’ ರಿಲೀಸ್: ತಿರುಪತಿ ಆಶೀರ್ವಾದ ಪಡೆದ ನಯನತಾರಾ, ವಿಘ್ನೇಶ್ ಶಿವನ್ 

2022ನೇ ಸಾಲಿನ ಸಿನೆಮಾಕೋನ್ ವಾರ್ಷಿಕ ಸಮಾರಂಭದಲ್ಲಿ ಏಪ್ರಿಲ್ 25-28ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ದೊಡ್ಡ ಸಿನಿಮಾ ಫಸ್ಟ್ ಲುಕ್ ಮತ್ತು ರಿಲೀಸ್ ಮಾಡುವ ದಿನಾಂಕವನ್ನು ಬಹಿರಂಗ ಪಡಿಸುತ್ತದೆ. ಅದೇ ಅವತಾರ್ ಸಿನಿಮಾ ಸೀಕ್ವೆಲ್ ಬಗ್ಗೆ ಫೋಷಣೆ ಮಾಡಲಾಗಿದೆ. ಈ ಫೋಷಣೆಯಲ್ಲಿ ಈ ಸಿನಿಮಾಗೆ ‘ಅವತಾರ್: ದಿ ವೇ ಆಫ್ ವಾಟರ್’ ಟೈಟಲ್ ಇಟ್ಟಿದ್ದು, 2022ರ ಡಿ.18ರಂದು ಸಿನಿಮಾ ರಿಲೀಸ್ ಆಗುತ್ತೆ ಎಂದು ಅಧಿಕೃತವಾಗಿ ತಿಳಿಸಿದೆ.

Avatar 2 trailer revealed at Cinema Con as James Cameron's sequel gets official title | GamesRadar+

ಅವತಾರ್ ಜೇಮ್ಸ್ ಕ್ಯಾಮರೂನ್ ನಿರ್ದೇಶನ ಚಿತ್ರವಾಗಿದ್ದು, ದೊಡ್ಡಮಟ್ಟದಲ್ಲಿ ನಿರೀಕ್ಷೆಯಿದೆ. ಅಲ್ಲದೇ ಸಿನೆಮಾಕೋನ್ ಇವೆಂಟ್‌ನಲ್ಲಿ ‘ಅವತಾರ್:ದಿ ವೇ ಆಫ್ ವಾಟರ್’ ಸಿನಿಮಾದ 2 ದೃಶ್ಯಗಳನ್ನು ತೋರಿಸಲಾಗಿದೆ.

James Cameron's 'Avatar 2' titled 'Avatar: The Way of Water'

13 ವರ್ಷಗಳ ಬಳಿಕ
ಅವತಾರ್ ಇನ್ನೂ 5 ಸರಣಿ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ. 2009ರಲ್ಲಿ ಮೊದಲ ಸರಣಿ ರಿಲೀಸ್ ಆಗಿದ್ದು, 2022ರಲ್ಲಿ ಮತ್ತೊಂದು ಸರಣಿ ರಿಲೀಸ್ ಆಗುತ್ತಿದೆ. ಬರೋಬ್ಬರಿ 13 ವರ್ಷಗಳ ನಂತರ ಅವತಾರ್ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಈ ಇವೆಂಟ್ನಲ್ಲಿ ‘ಅವತಾರ್ 2’ ಜೊತೆಗೆ ಇತರ 3 ಸರಣಿಗಳ ರಿಲೀಸ್ ದಿನಾಂಕ ಸಹ ಘೋಷಣೆಯಾಗಿದೆ. ‘ಅವತಾರ್ 3’ 2024ರ ಡಿ.20 ರಂದು, ‘ಅವತಾರ್ 4’ 2026ರ ಡಿ.18 ಮತ್ತು ‘ಅವತಾರ್ 5’ 20228ರ ಡಿ.22ರಂದು ರಿಲೀಸ್ ಆಗುತ್ತೆ ಎಂದು ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆಯಲ್ಲಿರುವಾಗಲೇ ಇಂಟರ್ವ್ಯೂ ಅಟೆಂಡ್ ಮಾಡಿದ ಹಠವಾದಿ 

Avatar 2, the first image of the film shared by Fox - Opentapes

ಹಾಲಿವುಡ್ ಜನರಿಗೆ ಡಿಸೆಂಬರ್ ತುಂಬಾನೇ ವಿಶೇಷ. ಈ ಸಮಯದಲ್ಲಿ ಕ್ರಿಸ್ಮಸ್ ಇರುವ ಹಿನ್ನೆಲೆ ನಿರ್ಮಾಪಕರು ತಮ್ಮ ಸಿನಿಮಾ ಡಿಸೆಂಬರ್ನಲ್ಲಿಯೇ ರಿಲೀಸ್ ಮಾಡುವುದಕ್ಕೆ ಹೆಚ್ಚು ಒತ್ತನ್ನು ಕೊಡುತ್ತಾರೆ. ಕಳೆದ ವರ್ಷ ಡಿ.16ರಂದು ರಿಲೀಸ್ ಆದ ‘ಸ್ಪೈಡರ್ ಮ್ಯಾನ್:ನೋ ವೇ ಹೋಂ’ ಸಿನಿಮಾ ರಿಲೀಸ್ ಆಗಿ ಸಾವಿರಾರು ಕೋಟಿ ಚಾಚಿಕೊಂಡಿದೆ. ಈ ವರ್ಷ ರಿಲೀಸ್ ಆಗುತ್ತಿರುವ ‘ಅವತಾರ್:ದಿ ವೇ ಆಫ್ ವಾಟರ್’ ರಿಲೀಸ್ ಆಗಿ ಯಾವ ರೀತಿ ಕಮಾಲ್ ಮಾಡುತ್ತೆ ಎಂಬುದು ಕಾದು ನೋಡಬೇಕು.

Leave a Reply

Your email address will not be published.

Back to top button