ರಾಮನಗರ: ನನಗೆ ಜಾತಿಗಳ ಬಗ್ಗೆ ನಂಬಿಕೆ ಇಲ್ಲ, ಜಾತಿ ವಿಚಾರಕ್ಕೆ ನಾನು ಮಹತ್ವವನ್ನೂ ಕೊಡಲ್ಲ. ನನ್ನ ಮನೆಗೆ ಬಂದು ಯಾರಾದ್ರೂ ನೀನು ಯಾವಜಾತಿ ಅಂದ್ರೆ ನಾನು ಕನ್ನಡ ಜಾತಿ ಅಂತೀನಿ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಹೇಳಿದರು.
ರಾಜ್ಯದಲ್ಲಿ ಜಾತಿಗಣತಿ (Caste Census) ಬಗ್ಗೆ ದೊಡ್ಡಮಟ್ಟದ ಚರ್ಚೆ ನಡೆಯುತ್ತಿರುವ ವಿಚಾರ ಕುರಿತು ರಾಮನಗರದಲ್ಲಿ (Ramanagara) ಮಾಧ್ಯಮದವರೊಂದಿಗೆ ಮಾತನಾಡಿದರು. ನಮ್ಮ ರಾಜ್ಯ ಭಾಷಾವಾರು ಮೇಲೆ ರಚನೆ ಆಗಿರುವ ರಾಜ್ಯ. ಇಲ್ಲಿ ಜಾತಿಯ ವಿಚಾರ ಪ್ರಸ್ತಾಪ ಒಳ್ಳೆಯ ಬೆಳವಣಿಗೆ ಅಲ್ಲ. ಜಾತಿಗಣತಿ ಬಗ್ಗೆ ಆಡಳಿತ ಪಕ್ಷ ಹಾಗೂ ವಿಪಕ್ಷ ನಾಯಕರ ಮಾತಿನ ದಾಟಿ ನೋಡಿದ್ದೇನೆ. ರಾಜಕೀಯ ನಾಯಕರು ನಾಲಿಗೆಗೆ ಲಗಾಮು ಇಲ್ಲದೇ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಜಾತಿಗಣತಿ ವರದಿ ವಿರುದ್ಧ ಸಂಪುಟದಲ್ಲಿ ಕೋಲಾಹಲ – ಏರುಧ್ವನಿಯಲ್ಲಿ ಲಿಂಗಾಯತ, ಒಕ್ಕಲಿಗ ಸಚಿವರಿಂದ ಆಕ್ಷೇಪ
ನಾನಂತೂ ಜಾತಿಗಣತಿ ವರದಿ ಓದಿಲ್ಲ. ಹಾಗಾಗಿ ಅದು ಸರಿಯೋ, ತಪ್ಪೋ ಅನ್ನುವ ಚರ್ಚೆ ಮಾಡಲ್ಲ. ಈ ಬಗ್ಗೆ ಶಾಸನಸಭೆಯಲ್ಲಿ ಸುದೀರ್ಘ ಚರ್ಚೆ ಮಾಡಿ, ತೀರ್ಮಾನ ಮಾಡಿಕೊಳ್ಳಿ. ಆದನ್ನ ಬಿಟ್ಟು ರಸ್ತೆಯಲ್ಲಿ ನಿಂತು ಬೇಕಾಬಿಟ್ಟಿ ಮಾತನಾಡುವ ಕೆಲಸ ಬಿಡಿ ಎಂದು ರಾಜಕೀಯ ನಾಯಕರಿಗೆ ಚಾಟಿ ಬೀಸಿದರು. ಇದನ್ನೂ ಓದಿ: Waqf Act| ಹಿಂದೂಗಳು ಸಲ್ಲಿಸಿದಾಗ ಹೈಕೋರ್ಟ್‌ಗೆ ಹೋಗಿ ಎಂದಿತ್ತು – ಸುಪ್ರೀಂ ವಿಚಾರಣೆಗೆ ಮಾನದಂಡ ಏನು?- ವಕೀಲ ವಿಷ್ಣು ಶಂಕರ್ ಜೈನ್