Connect with us

Cinema

ಲಂಡನ್‍ನಲ್ಲಿ ಅರೆಸ್ಟ್ ಆಗಿದ್ದು ಹೇಗೆ: ವಸಿಷ್ಟ ಸಿಂಹ ಹೇಳ್ತಾರೆ ಓದಿ

Published

on

ಬೆಂಗಳೂರು: ಲಂಡನ್ ಪೊಲೀಸರು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಸಿಷ್ಠ ಸಿಂಹ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.

ಲಂಡನ್ ನಲ್ಲಿ ಬಕ್ಹಿಂಗ್ ಹ್ಯಾಮ್ ಪ್ಯಾಲೇಸ್ ಮುಂದೆ ನಾನು ಮತ್ತೆ ಮಾನ್ವಿತಾ ಹರೀಶ್ ಹಾಡಿ ಕುಣಿದಿದ್ದೇವು. ಆಗ ಅಲ್ಲಿನ ಪಾದಚಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ದಾಖಲೆಗಳನ್ನು ಪರೀಶಿಲಿಸಿ ಚಿತ್ರಿಕರಣಕ್ಕೆ ಅವಕಾಶ ಮಾಡಿಕೊಟ್ಟರು ಎಂದು ವಸಿಷ್ಟ ಸಿಂಹ ಸ್ಪಷ್ಟನೆ ನೀಡಿದ್ದಾರೆ.

ಏನಿದು ಪ್ರಕರಣ?
ಲಂಡನ್ ನಲ್ಲಿ ಬಕ್ಹಿಂಗ್ ಹ್ಯಾಮ್ ಪ್ಯಾಲೇಸ್ ಮುಂದೆ ಹಾಡಿ ಕುಣಿದಿದ್ದಕ್ಕೆ ಪೊಲೀಸರು ಮಾನ್ವಿತಾ ಹಾಗೂ ವಸಿಷ್ಟರನ್ನು ಬಂಧಿಸಿದ್ದರು. ಬಳಿಕ ಸಿನಿಮಾ ಶೂಟಿಂಗ್ ಎಂದು ಹೇಳಿದ್ದಕ್ಕೆ ಇಬ್ಬರನ್ನು ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿಕೊಂಡಿದ್ದಾರೆ. ಜೊತೆಗೆ ಮಾನ್ವಿತಾ ಹರೀಶ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಲಂಡನ್ ಪೊಲೀಸರು ಮಾನ್ವಿತಾ ಮತ್ತು ವಸಿಷ್ಠ ಸಿಂಹ ಅವರನ್ನು ಬಂಧಿಸಿದ್ದಾರೆ. ಅವರು ಬಕ್ಹಿಂಗ್ ಹ್ಯಾಮ್ ಪ್ಯಾಲೇಸ್ ಮುಂದೆ ಹಾಡು, ನೃತ್ಯ ಜೊತೆಗೆ ಪ್ರೀತಿ ಮಾಡುತ್ತಿದ್ದರು. ಅದಕ್ಕಾಗಿ ಪೊಲೀಸರು ಬಂಧಿಸಿದ್ದರು. ಬಳಿಕ ಮಾನ್ವಿತಾ ಅವರ ಸುಂದರ ಸ್ಮೈಲ್ ಜೊತೆಗೆ ಇದು ಸಿನಿಮಾ ಶೂಟಿಂಗ್ ಎಂದು ಹೇಳಿದ್ದಾಗ ಅವರನ್ನು ಬಿಡುಗಡೆ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ನಾಗತಿಹಳ್ಳಿ ನಿರ್ದೇಶನದ ಹೊಸ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾ ಚಿತ್ರೀಕರಣಕ್ಕಾಗಿ ಚಿತ್ರತಂಡ ವಿದೇಶಕ್ಕೆ ತೆರಳಿದೆ. ಚಿತ್ರದ ಬಹುತೇಕ ಶೂಟಿಂಗ್ ಲಂಡನ್ ನಲ್ಲಿ ಮಾಡಲಾಗಿದ್ದು, 40 ದಿನಗಳ ಕಾಲ ಲಂಡನ್ ನಲ್ಲಿ ಚಿತ್ರತಂಡ ಉಳಿದುಕೊಂಡಿದೆ. ಲಂಡನ್ ನ ಪ್ರಮುಖ ಸ್ಥಳಗಳಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಇತ್ತೀಚೆಗೆ ಲಂಡನ್ ಬ್ರಿಡ್ಜ್ ಮೇಲೆ ಮಾನ್ವಿತಾ ಮಾಡಿದ ಡ್ಯಾನ್ಸ್ ವಿಡಿಯೋವನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು “ಮುಂಜಾನೆ ಮಾನ್ವಿತಾ ಮಂಗಾಟ” ಎಂದು ಬರೆದು ಟ್ವೀಟ್ ಮಾಡಿದ್ದರು.

ಚಂದ್ರಶೇಖರ್ ಅವರು ಬರೆದಿರುವ ಮಗಳು ಕನಸು ಕತೆಯನ್ನೇ ಸಿನಿಮಾ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಚಿತ್ರದ ಟೈಟಲ್ ಇನ್ನು ಖಚಿತವಾಗಿಲ್ಲ. ಈ ಸಿನಿಮಾದಲ್ಲಿ ಮಾನ್ವಿತಾ ಬೋಲ್ಡ್ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ವಸಿಷ್ಠ ಸಿಂಹ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Click to comment

Leave a Reply

Your email address will not be published. Required fields are marked *

www.publictv.in