ಲಕ್ನೋ: ಬಿಜೆಪಿ ಸಂಸದ ವರುಣ್ ಗಾಂಧಿ ಕೋವಿಡ್ 19 ಸೋಂಕಿಗೆ ಒಳಗಾಗಿದ್ದಾರೆ. ಅಷ್ಟೇ ಅಲ್ಲ, ಸೋಂಕು ಗಂಭೀರ ಸ್ವರೂಪ ಕಾಣಿಸಿಕೊಂಡಿದೆ ಎಂದು ಅವರೆ ಟ್ವೀಟ್ ಮಾಡಿದ್ದಾರೆ.
Advertisement
ಟ್ವೀಟ್‍ನಲ್ಲಿ ಏನಿದೆ: ನನ್ನ ಕ್ಷೇತ್ರವಾದ ಪಿಲಿಭಿತ್‍ನಲ್ಲಿ ಮೂರು ದಿನಗಳ ಕಾಲ ಇದ್ದು, ಚುನಾವಣಾ ಕಾರ್ಯ ನಡೆಸಿದೆ. ಇದೀಗ ನನಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಲಕ್ಷಣಗಳು ತುಸು ಗಂಭೀರಸ್ವರೂಪದಲ್ಲಿಯೇ ಇವೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು, ಸಕ್ರಿಯವಾಗಿ ಪಾಲ್ಗೊಳ್ಳುವ ರಾಜಕೀಯ ನಾಯಕರ ಆರೋಗ್ಯ ಸುರಕ್ಷತೆಗಾಗಿ ಕೂಡ ಕೆಲವು ಕ್ರಮಗಳನ್ನು ಚುನಾವಣಾ ಆಯೋಗ ಘೋಷಿಸಬೇಕು ಎಂದು ವರುಣ್ ಗಾಂಧಿ ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ರೈತ ಗೀತೆ ಮೂಲಕ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್ ಚಾಲನೆ
Advertisement
After being in Pilibhit for 3 days, I have tested positive for COVID with fairly strong symptoms.
We are now in the middle of a third wave and an election campaign.
The Election Commission should extend precautionary doses to candidates and political workers as well.
— Varun Gandhi (@varungandhi80) January 9, 2022
Advertisement
ದೇಶದ 5 ರಾಜ್ಯಗಳಾದ ಗೋವಾ, ಉತ್ತರಪ್ರದೇಶ, ಉತ್ತರಾಖಂಡ್, ಮಣಿಪುರ, ಪಂಜಾಬ್‍ಗಳಲ್ಲಿ ಮುಂದಿನ ತಿಂಗಳಿಂದ ವಿಧಾನಸಭೆ ಚುನಾವಣೆ ನಡೆಯಲಿದೆ. ಫೆ.10ರಿಂದ ವಿವಿಧ ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಹೊರಬೀಳಲಿದೆ. ಈ ಸಂಬಂಧ ನಿನ್ನೆ ಸುದ್ದಿಗೋಷ್ಠಿ ನಡೆಸಿದರುವ ಚುನಾವಣಾ ಆಯೋಗದ ಮುಖ್ಯ ಆಯುಕ್ತರು, ಹಲವು ನಿಯಮಗಳನ್ನು ಘೋಷಿಸಿದ್ದಾರೆ.