‘ಬಿಗ್ ಬಾಸ್ ಕನ್ನಡ 10’ರ ಸ್ಪರ್ಧಿ (Bigg Boss Kannada 10) ವರ್ತೂರು ಸಂತೋಷ್ (Varthur Santhosh) ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗ ಪತ್ನಿ ಜೊತೆಗಿನ ಮನಸ್ತಾಪಗಳ ಬಗ್ಗೆ ಬಾಯ್ಬಿಟ್ಟಿದ್ದರು. ಪತ್ನಿಯ ಕುಟುಂಬಸ್ಥರು ಕೂಡ ವರ್ತೂರು ಸಂತೋಷ್ ಬಗ್ಗೆ ಕಿಡಿಕಾರಿದ್ದರು. ಆದರೆ ದೊಡ್ಮನೆಯಿಂದ ಹೊರ ಬಂದ್ಮೇಲೆ ಅಸಲಿಗೆ ವೈಯಕ್ತಿಕ ಬದುಕಿನಲ್ಲಿ ಏನಾಗಿತ್ತು? ಎಂಬುದರ ಬಗ್ಗೆ ವರ್ತೂರು ಸಂತೋಷ್ ಪ್ರತಿಕ್ರಿಯೆ ನೀಡಲೇ ಇಲ್ಲ. ಇದೀಗ ಸುದ್ದಿಗೋಷ್ಠಿಯೊಂದರಲ್ಲಿ ಪತ್ನಿ ಬಗ್ಗೆ ಕೇಳಿದ್ದಕ್ಕೆ ವರ್ತೂರು ಗರಂ ಆಗಿದ್ದಾರೆ. ಇದನ್ನೂ ಓದಿ:ಡಾರ್ಲಿಂಗ್ ಪ್ರಭಾಸ್ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್
ಹಳ್ಳಿಕಾರ್ ರೇಸ್ ಕುರಿತು ನಡೆಸಿದ ಮಾಧ್ಯಮಗೋಷ್ಠಿಯಲ್ಲಿ, ಪತ್ನಿ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಸಂತೋಷ್ ಸಿಡಿದೆದ್ದಿದ್ದಾರೆ. ಈ ಬಗ್ಗೆ ವರ್ತೂರು ಸಂತೋಷ್ ಮಾತನಾಡಿ, ಇದು ಪರ್ಸನಲ್ ವಿಚಾರ. ಇದನ್ನು ಪಬ್ಲಿಕ್‌ನಲ್ಲಿ ಹೇಳುವ ಮುಠ್ಠಾಳ ನಾನಲ್ಲ. ಯಾರೋ ಮುಠ್ಠಾಳರು ಅಂಥ ಕೆಲಸ ಮಾಡಿದ್ದಾರೆ ಎಂದರೆ ಅವರ ಮಟ್ಟಕ್ಕೆ ಇಳಿಯಲು ನಾವು ರೆಡಿ ಇಲ್ಲ. ಎಲ್ಲರ ಮನೆಯ ದೋಸೆ ಕೂಡ ತೂತು. ಕೆಲವರ ಮನೆ ಹಂಚೇ ತೂತಾಗಿರುತ್ತದೆ. ನಿಮಗೆ ಅರ್ಥ ಆಗಿದೆ ಎಂದು ಭಾವಿಸುತ್ತೇನೆ ಎಂದು ಪತ್ನಿ ಬಗ್ಗೆ ಕೇಳಿದ್ದಕ್ಕೆ ವರ್ತೂರು ಕೆಂಡಕಾರಿದ್ದಾರೆ.
ಕೆಲವೊಂದು ಸಂಬಂಧಗಳು ಕೆಲವೊಂದು ವೇದಿಕೆಗೆ ಹೋದ್ಮೇಲೆ ಗೊತ್ತಾಗುತ್ತದೆ. ಅವರು ಸೊಳ್ಳೆಗೂ ಕಂಪೇರ್ ಮಾಡಲು ಆಗದೇ ಇರುವವರು ಎಂದು ಪತ್ನಿ ಕುಟುಂಬಕ್ಕೆ ಪರೋಕ್ಷವಾಗಿ ವರ್ತೂರು ಕುಟುಕಿದ್ದಾರೆ. ನಾವು ಯಾರ ಬಗ್ಗೆ ಆದರೂ ಮಾತನಾಡಬೇಕು ಅಂದರೆ ಸರಿಸಮಾನವಾಗಿರಬೇಕು. ಅವರು ಏನು ಅಲ್ಲ ಬಿಡಿ ಎಂದು ಮಾತನಾಡಿದ್ದಾರೆ. ಮದುವೆ ವಿಚಾರಕ್ಕೆ ವರ್ತೂರು ಖಡಕ್ ಆಗಿ ಉತ್ತರ ನೀಡಿದ್ದಾರೆ.
ಇನ್ನೂ ಹಳ್ಳಿಕಾರ್ ರೇಸ್ ಮಾರ್ಚ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಅದಕ್ಕಾಗಿ ತೆರೆಮರೆಯಲ್ಲಿ ಸಕಲ ಸಿದ್ಧತೆ ನಡೆಯಲಿದೆ. ಹಳ್ಳಿಕಾರ್ ಹಬ್ಬದಲ್ಲಿ ಸುದೀಪ್ (Sudeep), ಧ್ರುವ ಸರ್ಜಾ ಭಾಗಿಯಾಗುವ ಸಾಧ್ಯತೆ ಇದೆ. ಬಿಗ್ ಬಾಸ್ ಕನ್ನಡ 10ರ ಸ್ಪರ್ಧಿಗಳು ಕೂಡ ವರ್ತೂರುಗೆ ಸಾಥ್ ನೀಡಲಿದ್ದಾರೆ.