ಬಿಗ್ ಬಾಸ್ ಮನೆಯ ಸಂತು ಪಂತು (Santu Panthu) ಎಂದೇ ಫೇಮಸ್ ಆಗಿದ್ದ ವರ್ತೂರು ಸಂತೋಷ್ (Varthur Santhosh) ಮತ್ತು ತುಕಾಲಿ ಸಂತು (Tukali Santu) ದೊಡ್ಮನೆಯಿಂದ ಆಚೆ ಬಂದ ನಂತರವೂ ತಮ್ಮ ಸ್ನೇಹವನ್ನು ಮುಂದುವರೆಸಿದ್ದಾರೆ. ನಿನ್ನೆಯಷ್ಟೇ ತಮ್ಮೊಂದಿಗೆ ಬಿಗ್ ಬಾಸ್ ಮನೆಯೊಳಗಿದ್ದ ಎಲ್ಲ ಕಂಟೆಸ್ಟೆಂಟ್ ಗಳನ್ನೂ ವರ್ತೂರು ತಮ್ಮೂರಿಗೆ ಕರೆಯಿಸಿಕೊಂಡು ಸತ್ಕರಿಸಿದ್ದಾರೆ.
ಅದರಲ್ಲೂ ತನ್ನ ನೆಚ್ಚಿನ ಸ್ನೇಹಿತ ತುಕಾಲಿ ಸಂತುಗೆ ಚಿನ್ನದಲ್ಲಿ ಮಾಡಿಸಿರುವ ಸಂತು-ಪಂತು ಹೆಸರಿನ ಲಾಕೆಟ್ ನೀಡಿದ್ದಾರೆ. ತಮ್ಮಿಬ್ಬರ ಸ್ನೇಹ ಶಾಶ್ವತವಾಗಿರಲಿ ಎನ್ನುವ ಕಾರಣಕ್ಕಾಗಿ ಈ ಪದಕವನ್ನು ನೀಡಿರುವುದಾಗಿ ವರ್ತೂರು ಹೇಳಿಕೊಂಡಿದ್ದಾರೆ. ಅದನ್ನು ಭಾವುಕವಾಗಿಯೇ ಸಂತು ಧರಿಸಿದ್ದಾರೆ.
ನನ್ನ ನೆಚ್ಚಿನ ಅಣ್ಣ ಕೊಟ್ಟಿರುವ ಈ ಗಿಫ್ಟ್ ಅನ್ನು ಯಾವಾಗಲೂ ಧರಿಸಿಕೊಂಡು ಇರುತ್ತೇನೆ. ಇದು ಅವರು ನನಗೆ ನೀಡಿರುವ ಮರೆಯಲಾರದಂತಹ ವಸ್ತು ಎಂದು ತುಕಾಲಿ ಈ ಸಂದರ್ಭದಲ್ಲಿ ಮಾತನಾಡಿದ್ದಾರೆ. ಜೊತೆಗೆ ಸಂತೋಷ್ ನೆಡೆಸಿಕೊಡುವ ಹಳ್ಳಿಕಾರ್ ರೇಸ್ ಗೆ ತಾವೇ ನಿರೂಪಣೆ ಮಾಡುವುದಾಗಿಯೂ ತುಕಾಲಿ ಹೇಳಿದ್ದಾರೆ.
ವರ್ತೂರು ಸಂತೋಷ್ ಹಳ್ಳಿಕಾರ್ ರೇಸ್ ಆಯೋಜನೆಯಲ್ಲಿ ಬ್ಯುಸಿಯಾಗಿದ್ದರೆ, ತುಕಾಲಿ ಸಂತು ಕಿಚ್ಚಿಗಿಲಿಗಿಲಿ ಶೋನಲ್ಲಿ ಪಾಲ್ಗೊಂಡಿದ್ದಾರೆ. ಪತ್ನಿ ಸಮೇತ ಅವರು ಜನರನ್ನು ನಗಿಸೋಕೆ ಹೊರಟಿದ್ದಾರೆ. ಈಗಾಗಲೇ ಮೊದಲ ವಾರದ ಕಂತುಗಳು ಪ್ರಸಾರ ಕೂಡ ಆಗಿವೆ.