ಮಡಿಕೇರಿ: ಹೊಸ ವರ್ಷಕ್ಕೆ ಕೇಕ್ ಕಟ್ ಮಾಡಿ ದೀಪಗಳನ್ನು ಬೆಳಗಿಸೋ ಮೂಲಕ ಸಂಭ್ರಮಿಸುತ್ತಿರೋರಿಗೆ ಕ್ಯಾಂಡಲ್ ದೀಪಗಳೂ ಇದೀಗ ಕೈಬೀಸಿ ಕರೆಯುತ್ತಿವೆ.
ಬಣ್ಣ ಬಣ್ಣದ ವೆರೈಟಿ ಕ್ಯಾಂಡಲ್‍ಗಳು ನ್ಯೂಯರ್ ಗೆ ಸಿದ್ಧಗೊಂಡಿದ್ದು ಗ್ರಾಹಕರ ಮನಸ್ಸಿಗೆ ಇಷ್ಟವಾಗೋ ಎಲ್ಲಾ ರೀತಿಯ ಮೊಂಬತ್ತಿಗಳ ಮಂಜಿನ ನಗರಿಯಲ್ಲಿ ಲಭ್ಯವಿದೆ. ನೋಡಿದಷ್ಟೂ ಮತ್ತೆ ಮತ್ತೆ ನೋಡಬೇಕೆನಿಸುವಷ್ಟು ಸುಂದರ ಕ್ಯಾಂಡಲ್‍ಗಳು. ಗಮನ ಸೆಳೆಯುವ ಬಣ್ಣ ಬಣ್ಣದ ಸುವಾಸನೆ ಭರಿತ ಮೊಂಬತ್ತಿಗಳು.
Advertisement
Advertisement
ಕೊಡಗಿನ ಗೋಣಿಕೊಪ್ಪಗೆ ನೀವೇನಾದ್ರು ಹೋಸ ವರ್ಷದ ಸಂಭ್ರಮ ಅಚರಣೆಗೆ ಹೋದರೆ ಇಲ್ಲಿನ ಕ್ಯಾಂಡಲ್ ಶಾಪ್ ಎಲ್ಲರ ಗಮನಸೆಳೆಯುತ್ತೆ. ಅಲ್ಲಿನ ವೆರೈಟಿ ಮೊಂಬತ್ತಿಗಳು ಗ್ರಾಹಕರ ಕಣ್ಣುಕೋರೈಸುತ್ತದೆ. ಮಾಮೂಲಿ ಕ್ಯಾಂಡಲ್ ಜೊತೆಗೆ ಗೊಂಬೆ, ಹಕ್ಕಿ, ಹೂ, ಗಿಡ ಮರ ಹೀಗೆ ಎಲ್ಲಾ ರೀತಿಯ ಕ್ಯಾಂಡಲ್‍ಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಕೊಡಗಿನ ಶ್ರೀನಿವಾಸ ಪ್ರಸಾದ್ ದಂಪತಿ ತಯಾರಿಸಿ ಮಾರಾಟ ಮಾಡುತ್ತಾರೆ.
Advertisement
ಕೇವಲ ಬೆಳಕು ನೀಡೋ ಕ್ಯಾಂಡಲ್ ತಯಾರಿಸಿದರೆ ಗ್ರಾಹಕರನ್ನು ಸೆಳೆಯೋದು ಕಷ್ಟ ಎಂದರಿತ ದಂಪತಿ, ಸುಮಾರು 70 ಬಗೆಯ ವಿವಿದ ವಿನ್ಯಾಸದ ಕ್ಯಾಂಡಲ್‍ಗಳನ್ನು ತಯಾರಿಸುತ್ತಿದ್ದಾರೆ. ಒಂದೊಂದು ಕ್ಯಾಂಡಲ್‍ಗಳು ಒಂದೊಂದು ಆಕಾರದಲ್ಲಿ ಕಂಗೊಳಿಸುತ್ತಾ ನೋಡುಗರನ್ನು ಕೈಬೀಸಿ ಕರೆಯುತ್ತಿವೆ. ವಿಶೇಷವಾಗಿ ಬೆಳಕಿನ ಹಬ್ಬ ದೀಪಾವಳಿ, ಕ್ರಿಸ್ ಮಸ್, ನ್ಯೂಯರ್ ಸಂದರ್ಭದಲ್ಲಿ ಬಣ್ಣ ಬಣ್ಣದ ಕ್ಯಾಂಡಲ್ ಗಳಿಗೆ ಬೇಡಿಕೆ ಬಂದಿದ್ದು ಜನರು ಮುಗಿಬಿದ್ದು ಖರೀದಿಸುತ್ತಿದ್ದಾರೆ.
Advertisement
ಕಳೆದ 20 ವರ್ಷಗಳಿಂದ ಕ್ಯಾಂಡಲ್ ತಯಾರಿಕೆ ಮಾಡುತ್ತಿರೋ ಇವರು, ಸೀಸನ್ ಗೆ ತಕ್ಕಂತೆ, ಗ್ರಾಹಕರ ಅಭಿರುಚಿಯನ್ನರಿತು ಕ್ಯಾಂಡಲ್ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. 4 ರೂಪಾಯಿಂದ ಪ್ರಾರಂಭಗೊಂಡು 3 ಸಾವಿರದ ವರೆಗಿನ ಮೌಲ್ಯದ ಕ್ಯಾಂಡಲ್‍ಗಳು ಇಲ್ಲಿ ಲಭ್ಯ. ಕೊಡಗು ಜಿಲ್ಲೆ ವಿರಾಜಪೇಟೆಯಿಂದ ಗೋಣಿಕೊಪ್ಪಕ್ಕೆ ಹೋಗೋ ರಸ್ತೆಯಲ್ಲಿ ಸಿಗೋ ಈ ಕ್ಯಾಂಡಲ್ ಶಾಪ್, ಪ್ರವಾಸಿಗರ ನೆಚ್ಚಿನ ಶಾಪಿಂಗ್ ಸ್ಥಳವಾಗಿದೆ. ಪುಟ್ಟ ಬಣ್ಣ ಬಣ್ಣದ ಕ್ಯಾಂಡಲ್‍ಗಳಿಂದ ಹಿಡಿದು ಬಾಲ್, ಹೃದಯ, ಹಕ್ಕಿ, ಮರಗಿಡ ಹೀಗೆ ನಾನಾ ಬಗೆಯ ಸುಮಾರು 70 ವೆರೈಟಿ ಕ್ಯಾಂಡಲ್ ಇಲ್ಲಿ ತಯಾರಾಗುತ್ತಿದೆ. ಮನೆಯ ಅಂದ ಹೆಚ್ಚಿಸೋ ತರಹೇವರಿ ಕ್ಯಾಂಡಲ್‍ಗಳು ಎಲ್ಲರ ಗಮನ ಸೆಳೆಯುತ್ತಿವೆ.
ಹೊಸ ವರ್ಷದ ಸಂಭ್ರಮವನ್ನು ನೀವು ದೀಪಗಳ ಜೊತೆ ಆಚರಣೆ ಮಾಡಲು ಬಯಸಿದ್ದರೆ ಈ ಮೇಣದ ಬತ್ತಿಯ ಬೆಳಕಿನಲ್ಲಿ ಆಚರಣೆ ಮಾಡಬಹುದು. ಗ್ರಾಹಕರಿಗೆ ಇಷ್ಟಾವಾಗೋ ರೀತಿಯಲ್ಲಿ ನಾನಾ ಬಗೆಯ ಕ್ಯಾಂಡಲ್‍ಗಳು ಈ ಬಾರಿಯ ಹೊಸ ವರ್ಷ ಆಚರಣೆಗೆ ರೆಡಿಯಾಗಿದ್ದು ಕಣ್ಮನ ಸೆಳೆಯುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv