ಬೆಂಗಳೂರು: ನಗರದ ಚಂದ್ರಾ ಬಡಾವಣೆಯ ಜಲಗಾರಕ, ನೀರು ಪೂರೈಕೆಯ (Water Supply) ಮಾರ್ಗದ ಪೈಪ್ ವಾಲ್ಟ್ ದುರಸ್ತಿ ಕಾಮಗಾರಿ (Repair Work) ಹಿನ್ನೆಲೆ ಸಿಲಿಕಾನ್ ಸಿಟಿಯ (Silicon City) ಹಲವೆಡೆ ಇಂದು (ಬುಧವಾರ) ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಕಾವೇರಿ 4ನೇ ಹಂತದ 1ನೇ ಫೇಸ್‌ನ ಮೂರು ಪಂಪ್‌ಗಳನ್ನು ಸ್ಥಗಿತಗೊಳಿಸಿ ದುರಸ್ತಿ ಕೆಲಸ ಮಾಡುವುದರಿಂದ ಬೆಂಗಳೂರು (Bengaluru) ನಗರದ ಬಹುತೇಕ ಕಡೆ ಇಂದು ನೀರು ಇರುವುದಿಲ್ಲ. ಇದನ್ನೂ ಓದಿ: ಇನ್ಮುಂದೆ ಚುನಾವಣಾ ಸಿಬ್ಬಂದಿಗೆ ಬೂತಲ್ಲೇ ಅಂಚೆ ಮತದಾನ ಕಡ್ಡಾಯ
Advertisement
Advertisement
ಮಹಾಲಕ್ಷ್ಮಿ ಲೇಔಟ್ ಸುತ್ತಮುತ್ತ, ರಾಜಾಜಿನಗರ ಸುತ್ತ, ಜೆ.ಸಿ ನಗರ ಸುತ್ತಮುತ್ತ, ಡಾ.ರಾಜ್‌ಕುಮಾರ್ ರೋಡ್, ಯಶವಂತಪುರ, ಎಪಿಎಂಸಿ, ಆರ್‌ಎಂಸಿ ಯಾರ್ಡ್, ಗೊರಗುಂಟೆಪಾಳ್ಯ, ನಂಜಪ್ಪ ಲೇಔಟ್, ದಾಸರಹಳ್ಳಿ ಸೇರಿದಂತೆ ಅರ್ಧ ಬೆಂಗಳೂರಿಗೆ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಇದನ್ನೂ ಓದಿ: ತಮಿಳುನಾಡಿಗೆ ನೀರು – ಇಂದು ಸರ್ವಪಕ್ಷ ಸಭೆ ಕರೆದ ಸರ್ಕಾರ
Advertisement
Advertisement
ದುರಸ್ತಿ ಕಾಮಗಾರಿಯಿಂದ ನೀರು ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಜಲಮಂಡಳಿಯಿಂದ (Water Board) ಮನವಿ ಮಾಡಿದೆ. ಇದನ್ನೂ ಓದಿ: ದೊಡ್ಡಗೌಡರ ಕಾಲಿಗೆ ಮಂಡಿಯೂರಿ ನಮಸ್ಕರಿಸಿದ ಸಂಸದ ಪ್ರತಾಪ್‌ಸಿಂಹ
Web Stories