ಬೆಂಗಳೂರು: ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಕೆಆರ್ ಮಾರ್ಕೆಟ್ ನಲ್ಲಿ ಬೆಂಗಳುರು ಮಂದಿ ಹೂವು, ಹಣ್ಣು ಖರೀದಿಯಲ್ಲಿ ನಿರತರಾಗಿದ್ದಾರೆ.
ಇಂದು ಬೆಳ್ಳಂಬೆಳಗ್ಗೆನೆ ಜನ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಹೂವು, ಹಣ್ಣು, ತರಕಾರಿ, ಹಬ್ಬದ ಸಾಮಾಗ್ರಿಗಳ ಖರೀದಿಯಲ್ಲಿ ಬ್ಯುಸಿಯಾಗಿರುವುದು ಕಂಡುಬಂತು. ಕೆಆರ್ ಮಾರ್ಕೆಟ್ ಮುಖ್ಯರಸ್ತೆಯ ಎರಡು ಬದಿಗಳಲ್ಲೂ ಹಬ್ಬದ ವ್ಯಾಪಾರ ಜೋರಾಗಿತ್ತು. ಮುಖ್ಯ ರಸ್ತೆಯಲ್ಲೇ ವ್ಯಾಪಾರ ನಡೀತಿರುವ ಕಾರಣ ಕೆಆರ್ ಮಾರ್ಕೆಟ್ ಮುಖ್ಯ ರಸ್ತೆ ಬ್ಲಾಕ್ ಆಗಿತ್ತು.
Advertisement
Advertisement
ವರಮಹಾಲಕ್ಷ್ಮಿ ಹಬ್ಬಕ್ಕೆ ಹಿನ್ನೆಲೆಯಲ್ಲಿ 30 ರಿಂದ 40% ನಷ್ಟು ಹೂವು ಹಣ್ಣುಗಳ ಬೆಲೆ ಏರಿಕೆಯಾಗಿದೆ. ಸೇವಂತಿಗೆ ಹೂವು ಕೆ.ಜಿಗೆ 320 ರೂ. (ಒಂದು ಮೊಳ – 80), ಮಲ್ಲಿಗೆ ಒಂದು ಕೆ.ಜಿಗೆ 2350 ರಿಂದ 2450 ರೂ., ಕನಕಾಂಬರ- ಒಂದು ಕೆಜಿ 4000 ರೂ., ಗುಲಾಬಿ ಹೂವು ಕೆ.ಜಿ 320-350 ರೂ., ಮಲ್ಲಿಗೆ ಕೆ.ಜಿಗೆ 350 ರೂ. (ಒಂದು ಮೊಳ 100 ರೂ.), ಕಮಲ ಹೂ ಜೋಡಿ 80-100 ರೂ., ಬಟನ್ಸ್ ಹೂವು ಕೆ.ಜಿ 300 ರೂ. ಮಲ್ಲೆ ಹೂವು ಕೆ.ಜಿ 320 ರೂ. (ಒಂದು ಮೊಳ – 60 ರೂ.) ಆಗಿದೆ.
Advertisement
Advertisement
ಬಾಳೆ ಹಣ್ಣು ಕೆ.ಜಿ 120-150 ರೂ., ಸೀತಾಫಲ ಕೆ.ಜಿ 200 ರೂ., ಸೇಬು ಕೆ.ಜಿ 320-460 ರೂ., ಮೂಸಂಬಿ ಕೆ.ಜಿ 130-150 ರೂ., ದಾಳಿಂಬೆ ಕೆಜಿ 320 ರೂ., ದ್ರಾಕ್ಷಿ 400 ರೂ., ಅಡಿಕೆ ಎಲೆ 1 ಕಟ್ಟಿಗೆ 100 ರೂ., ಅನಾನಸ್ 1ಕ್ಕೆ 80-100 ರೂ., ಅಂಬೂರ್ ಮಲ್ಲಿಗೆ ಞg- 1200 ರೂಪಾಯಿ ಆಗಿದೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ನಾಳೆಯಿಂದ ನ್ಯೂ ರೂಲ್ಸ್ – ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗಿಲ್ಲ ಅವಕಾಶ
ಒಟ್ಟಿನಲ್ಲಿ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಕೆ ಆರ್ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆ ಬಲು ಜೋರಾಗಿದೆ. ಹೂವು, ಹಣ್ಣುಗಳ ಬೆಲೆಯೇರಿಕೆಯಾಗಿದ್ದರೂ ಖರೀದಿ ಮಾತ್ರ ಹಿಂದೆ ಬಿದ್ದಿಲ್ಲ. ಖರೀದಿ ಬಂದಿರುವ ಜನಸಾಗರದಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.