ಮಾಲ್ಡೀವ್ಸ್ ಬೀಚ್ ನಲ್ಲಿ ಬಿಕಿನಿರಾಣಿಯಾದ ವರಲಕ್ಷ್ಮಿ

Public TV
2 Min Read
varalaxmi sarathkumar 5

ನ್ನಡದಲ್ಲಿ ಸಾಲು ಸಾಲು ಚಿತ್ರಗಳನ್ನು ಮಾಡಿರುವ ತಮಿಳು ನಟಿ ವರಲಕ್ಷ್ಮೀ ಶರತ್ ಕುಮಾರ್, ಹಾಲಿಡೇ ಕಳೆಯಲೆಂದು ಮಾಲ್ಡೀವ್ಸ್ ಬೀಚ್ ಗೆ ಹಾರಿದ್ದಾರೆ. ಅಚ್ಚರಿ ಎನ್ನುವಂತೆ ಅವರು ಬಿಕಿನಿಯಲ್ಲಿ ಫೋಸು ಕೊಟ್ಟ ಫೋಟೋಗಳನ್ನು ಸ್ವತಃ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೊದಲ ಬಾರಿಗೆ ತಮ್ಮ ನಟಿ ಹಾಟ್ ಹಾಟ್ ಕಾಣಿಸಿಕೊಂಡ ಫೋಟೋಗಳನ್ನು ಕೆಲವರು ಲೈಕ್ ಮಾಡಿದ್ದರೆ, ಇನ್ನೂ ಹಲವರು ಮುನಿಸಿಕೊಂಡಿದ್ದಾರೆ. ಆದರೂ, ಲೈಕ್ ಮಾಡಿದವರ ಸಂಖ್ಯೆಯೇ ಹೆಚ್ಚಿದೆ. ಇದನ್ನೂ ಓದಿ : ದುನಿಯಾ ವಿಜಯ್ ನಟನೆಯ ತೆಲುಗು ಸಿನಿಮಾದ ಫಸ್ಟ್ ಲುಕ್ ರಿಲೀಸ್ : ಯಾರದು ಪ್ರತಾಪ್ ರೆಡ್ಡಿ?

varalaxmi sarathkumar 4

ಮಾಣಿಕ್ಯ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಬಂದವರು ವರಲಕ್ಷ್ಮಿ ಶರತ್ ಕುಮಾರ್. ಕಿಚ್ಚ ಸುದೀಪ್ ಜತೆ ಮಾಣಿಕ್ಯ ಚಿತ್ರದಲ್ಲಿ ಅವರು ನಟಿಸಿದರು. ಚಿರಂಜೀವಿ ಸರ್ಜಾ ಅವರ ರಣಂ ಚಿತ್ರಕ್ಕೂ ಇವರೇ ನಾಯಕಿ. ಅರ್ಜುನ್ ಸರ್ಜಾ ಅವರ ಜತೆಯೂ ತೆರೆ ಹಂಚಿಕೊಂಡ ಹೆಗ್ಗಳಿಕೆ ಅವರದ್ದು. ಇಂತಹ ವರಲಕ್ಷ್ಮಿ ತಮಿಳಿನ ಖ್ಯಾತ ನಟ ಶರತ್ ಕುಮಾರ್ ಅವರ ಮಗಳು ಎನ್ನುವುದು ವಿಶೇಷ. ಇದನ್ನೂ ಓದಿ : ಐದು ಮಕ್ಕಳಿಗೆ ‘ಪುನೀತ್ ರಾಜಕುಮಾರ್’ ಅಂತ ನಾಮಕರಣ ಮಾಡಿದ ನಟಿ ತಾರಾ

varalaxmi sarathkumar 1

ತಮಿಳಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ವರಲಕ್ಷ್ಮೀ ವಿಭಿನ್ನ ರೀತಿಯ ಪಾತ್ರಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ನಾಯಕಿಯ ಪಾತ್ರವಷ್ಟೇ ಅಲ್ಲ, ಪೋಷಕ ಪಾತ್ರಗಳಲ್ಲೂ ಗುರುತಿಸಿಕೊಂಡಿದ್ದಾರೆ. ಅದೆಷ್ಟೋ ಸಿನಿಮಾಗಳಲ್ಲಿ ನೆಗೆಟಿವ್ ರೀತಿಯ ಪಾತ್ರಗಳನ್ನೂ ಮಾಡಿದ್ದಾರೆ. ಹಾಗಾಗಿ ವರಲಕ್ಷ್ಮೀ ಸದಾ ಬ್ಯುಸಿ. ಇದನ್ನೂ ಓದಿ : ಅಬ್ಬಬ್ಬಾ..! 60 ಕೋಟಿ ಬಾಚಿದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ : ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ

varalaxmi sarathkumar 6

ಸದ್ಯ ಬಾಲಕೃಷ್ಣ ಅವರ ಹೊಸ ಸಿನಿಮಾದಲ್ಲಿ ವರಲಕ್ಷ್ಮೀ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕನ್ನಡದ ನಾಯಕ ದುನಿಯಾ ವಿಜಯ್ ಕೂಡ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲೂ ವರಲಕ್ಷ್ಮೀ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರಂತೆ. ಇದನ್ನೂ ಓದಿ : ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

varalaxmi sarathkumar 3

ಈ ಸಿನಿಮಾದ ಶೂಟಿಂಗ್ ಶುರುವಾಗುವ ಮುನ್ನವೇ ಒಂದಷ್ಟು ದೇಶಗಳನ್ನು ಸುತ್ತುವ ಪ್ಲ್ಯಾನ್ ಮಾಡಿಕೊಂಡು ವರಲಕ್ಷ್ಮೀ ಹೋಗಿದ್ದಾರೆ. ಅಲ್ಲಿ ಬಿಕಿನಿ ಹಾಕಿಕೊಂಡು ಸಖತ್ ವೈರಲ್ ಆಗಿದ್ದಾರೆ. ಇದೇ ಮೊದಲ ಬಾರಿಗೆ ಇಂತಹ ಕಾಸ್ಟ್ಯೂಮ್ ನಲ್ಲಿ ಅವರು ಕಾಣಿಸಿಕೊಂಡಿದ್ದರಿಂದ ಸಹಜವಾಗಿಯೇ ಅಭಿಮಾನಿಗಳಿಗೆ ಅಚ್ಚರಿ ಆಗಿದೆ.

Share This Article