ನವದೆಹಲಿ: ವಂದೇ ಭಾರತ್ (Vande Bharat) ಎಕ್ಸ್‌ಪ್ರೆಸ್ ರೈಲು ನಿಗದಿತ ಪ್ರಮಾಣದಲ್ಲಿ ಭರ್ತಿಯಾಗದ ಹಿನ್ನೆಲೆ ಕೆಲವು ಮಾರ್ಗಗಳಲ್ಲಿ ಅದರ ಟಿಕೆಟ್ ದರ (Ticket Price) ಇಳಿಕೆ ಮಾಡಲು ರೈಲ್ವೆ ಇಲಾಖೆ (Railway Department) ಚಿಂತಿಸಿದೆ. ಈ ಮೂಲಕ ಬಹು ನಿರೀಕ್ಷಿತ ರೈಲು ಸೇವೆಯನ್ನು ಹೆಚ್ಚಿಸಲು ಇಲಾಖೆ ನಿರ್ಧರಿಸಿದೆ.
ಇಂದೋರ್-ಭೋಪಾಲ್, ಭೋಪಾಲ್-ಜಬಲ್‌ಪುರ್ ಮತ್ತು ನಾಗ್ಪುರ-ಬಿಲಾಸ್‌ಪುರ ಮಾರ್ಗದ ವಂದೇ ಭಾರತ್ ರೈಲಿನ ಟಿಕೆಟ್ ದರದಲ್ಲಿ ಇಳಿಕೆಯಾಗುವ ಸಾಧ್ಯತೆಗಳಿದೆ. ಭೋಪಾಲ್-ಜಬಲ್ಪುರ್ ವಂದೇ ಭಾರತ್ ಸೇವೆಯು 29% ರಷ್ಟು, ಇಂದೋರ್-ಭೋಪಾಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ಕೇವಲ 21% ರಷ್ಟು ಪ್ರಯಾಣಿಕರನ್ನು ಮಾತ್ರ ಹೊಂದಿದೆ. ಇದನ್ನೂ ಓದಿ: ದೆಹಲಿಗೆ ಮಾನ್ಸೂನ್ ಎಂಟ್ರಿ- ರಾಷ್ಟ್ರ ರಾಜಧಾನಿ ಕೂಲ್ ಕೂಲ್
Advertisement
Advertisement
ಈ ಮಾರ್ಗದಲ್ಲಿ ಪ್ರಯಾಣಕ್ಕೆ ಎಸಿ ಚೇರ್ ಕಾರ್ ಟಿಕೆಟ್‌ಗೆ 950 ರೂ. ಮತ್ತು ಎಕ್ಸಿಕ್ಯುಟಿವ್ ಚೇರ್ ಕಾರ್‌ಗೆ 1,525 ರೂ. ಟಿಕೆಟ್ ದರ ನಿಗದಿಪಡಿಸಿದೆ. ರೈಲ್ವೆ ಇಲಾಖೆಯ ಪರಿಶೀಲನೆ ಬಳಿಕ ಈ ಮಾರ್ಗಗಳಲ್ಲಿ ಗಣನೀಯವಾಗಿ ಟಿಕೆಟ್ ದರ ಇಳಿಸಿ ಜನರು ಹೆಚ್ಚು ಸೇವೆಯನ್ನು ಪಡೆಯುವಂತೆ ಮಾಡುವ ಚಿಂತನೆ ಹೊಂದಲಾಗಿದೆ. ಇದನ್ನೂ ಓದಿ: ಮಣಿಪುರ ಹಿಂಸಾಚಾರ – ಇಂಟರ್ನೆಟ್ ಸೇವೆ ನಿಷೇಧ ಜು.10 ರವರೆಗೆ ವಿಸ್ತರಣೆ
Advertisement
Advertisement
ನಾಗ್ಪುರ-ಬಿಲಾಸ್‌ಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ಟಿಕೆಟ್ ದರದಲ್ಲೂ ಇಳಿಕೆಯಾಗಬಹುದು ಎನ್ನಲಾಗುತ್ತಿದೆ. ಸದ್ಯ 55% ರಷ್ಟು ರೈಲು ಭರ್ತಿಯಾಗುತ್ತಿದ್ದು, ದರ ಇಳಿಕೆಯಾದಲ್ಲಿ ಜನರ ಪ್ರಮಾಣ ಹೆಚ್ಚಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಈವರೆಗೂ 46 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ದೇಶಾದ್ಯಂತ ಹಲವು ಮಾರ್ಗಗಳಲ್ಲಿ ಸೇವೆ ನೀಡುತ್ತಿವೆ. ಇದನ್ನೂ ಓದಿ: ಯುಪಿಯಲ್ಲಿ ಮುಂದುವರೆದ ಬುಲ್ಡೋಜರ್ ಅಸ್ತ್ರ – ಲವ್ ಜಿಹಾದ್ ಆರೋಪಿ ಮನೆ ಉಡೀಸ್
Web Stories