ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಹಗರಣ ಸಂಬಂಧ ಪೊಲೀಸರು ಕೋರ್ಟ್‌ಗೆ (Court) ಸಲ್ಲಿಸಿದ ರಿಮ್ಯಾಂಡ್ ಕಾಪಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಪ್ರಕರಣದ ಆರೋಪಿಯಾಗಿರುವ ಸತ್ಯನಾರಾಯಣ (Sathyanarayana) ವಿಚಾರಣೆ ವೇಳೆ ಬಾಯ್ಬಿಟ್ಟ ವಿಚಾರವನ್ನು ರಿಮ್ಯಾಂಡ್ ಕಾಪಿಯಲ್ಲಿ ಉಲ್ಲೇಖಿಸಲಾಗಿದೆ. ಯರ‍್ಯಾರಿಗೆ ಎಲ್ಲೆಲ್ಲಿ ಯಾವ್ಯಾವ ರೀತಿ ಹಣ ಸಂದಾಯವಾಗಿದೆ? ಯಾವ್ಯಾವುದರಲ್ಲಿ ಎಷ್ಟೆಷ್ಟು ಸಿಕ್ತು ಎಂಬ ಮಾಹಿತಿ ಅನಾವರಣಗೊಂಡಿದೆ. ಇದನ್ನೂ ಓದಿ: ಜಪಾನ್, ಕೊರಿಯಾದ ಕಂಪನಿಗಳಿಂದ 6,450 ಕೋಟಿ ಹೂಡಿಕೆ – ಯಾವೆಲ್ಲ ಕಂಪನಿಗಳು ಕರ್ನಾಟಕದಲ್ಲಿ ಎಲ್ಲಿ ಹೂಡಿಕೆ ಮಾಡಲಿವೆ?
ರಿಮ್ಯಾಂಡ್ ಕಾಪಿಯಲ್ಲಿ ಏನಿದೆ?
ಪದ್ಮನಾಭ್ ಬಳಿಯಿಂದ 3.67 ಕೋಟಿ ರೂ. ನಗದು ಹಣವನ್ನು ಜಪ್ತಿ ಮಾಡಲಾಗಿದೆ. ಸಿಮೆಂಟ್ ಚೀಲ, ಕೈಚೀಲ, ಸೂಟ್‌ಕೇಸ್, ಕಾರ್‌ನಲ್ಲಿ ಹಣವನ್ನು ಪತ್ತೆ ಮಾಡಲಾಗಿದೆ. ಸತ್ಯನಾರಾಯಣ ಮತ್ತು ಗ್ಯಾಂಗ್ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದ ನಾಗೇಂದ್ರ (Nagendra) ಆಪ್ತ ಸಹಾಯಕ ಹರೀಶ್‌ಗೆ 1.45 ಕೋಟಿ ರೂ. ಹಣವನ್ನು ವ್ಯವಸ್ಥಿತವಾಗಿ ಸಂದಾಯ ಮಾಡಿದೆ. ಇದನ್ನೂ ಓದಿ: MUDA Scam | ಸರ್ಕಾರದ ವಿರುದ್ಧ ಸಮರ ಸಾರಿದ ವಿಜಯೇಂದ್ರ – ಶುಕ್ರವಾರ ಮೈಸೂರಲ್ಲಿ ಬೃಹತ್ ಪ್ರತಿಭಟನೆಗೆ ಕರೆ!
ವೈಷ್ಣವಿ ಮಾಲ್, ಬಿಬಿಎಂಪಿ ಕಚೇರಿ ಬಳಿ 2 ಹಂತಗಳಲ್ಲಿ ಹಣ ಸಂದಾಯ ಮಾಡಲಾಗಿದೆ. ಪಾರ್ಕ್, ಜಂಕ್ಷನ್‌ನಲ್ಲಿ ನಿಂತು ಪದ್ಮನಾಭ್‌ಗೆ 90 ಲಕ್ಷ ರೂ. ಹಸ್ತಾಂತರ ಮಾಡಲಾಗಿದೆ. ನಿಗಮದ ಅಧ್ಯಕ್ಷ ದದ್ದಲ್ ಪಿಎ ಪಂಪಣ್ಣಗೆ ಎರಡು ಕಂತುಗಳಲ್ಲಿ 55 ಲಕ್ಷ ರೂ. ಹಣ ಸಂದಾಯ ಮಾಡಲಾಗಿದೆ ಎಂದು ರಿಮ್ಯಾಂಡ್ ಕಾಪಿಯಲ್ಲಿ ಉಲ್ಲೇಖಿಸಲಾಗಿದೆ.