ಬೆಂಗಳೂರು: ಜಾರಿ ನಿರ್ದೇಶನಾಲಯ (ED) ವಿರುದ್ಧ ದೂರು ನೀಡಿದ್ದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಹಿಂದಿನ ಹೆಚ್ಚುವರಿ ನಿರ್ದೇಶಕ ಕಲ್ಲೇಶ್ (Kallesh) ಭಾರೀ ಅಕ್ರಮ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಹೌದು. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಅಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹಾಗೂ ಸಚಿವರ ಹೆಸರು ಹೇಳುವಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಒತ್ತಡ ಹೇರಿದ್ದಾರೆ ಎಂದು ಆರೋಪಿಸಿ ಅಧಿಕಾರಿ ಕಲ್ಲೇಶ್ ದೂರು ನೀಡಿದ್ದರು. ಇದನ್ನೂ ಓದಿ: ಕೆಆರ್‌ಎಸ್ ಜಲಾಶಯ ಸಂಪೂರ್ಣ ಭರ್ತಿ – ಕಾವೇರಿ ಕೊಳ್ಳದ ಜನರಿಗೆ ಪ್ರವಾಹದ ಆತಂಕ
Advertisement
ಈ ದೂರನ್ನೇ ಆಧಾರವಾಗಿಟ್ಟುಕೊಂಡು ಮಂಗಳವಾರ ಸಿಎಂ-ಡಿಸಿಎಂ ಪ್ರತಿಭಟನೆ ಮಾಡಿದ್ದರು. ಆದರೆ ಈ ದೂರು ಕೊಟ್ಟ ಅಧಿಕಾರಿ ಕಲ್ಲೇಶ್‌ರನ್ನು ಭ್ರಷ್ಟಾಚಾರ ಆರೋಪದ ಮೇಲೆ ಈ ಹಿಂದೆ ಸಿದ್ದರಾಮಯ್ಯ ಅಮಾನತುಗೊಳಿಸಿದ್ದರು.
Advertisement
ಪಬ್ಲಿಕ್ ಟಿವಿಗೆ ಸಿಕ್ಕಿರುವ ದಾಖಲೆಗಳ ಪ್ರಕಾರ ಜೂನ್ 22ರಂದು ನಿಗಮದ ಮಾಜಿ ಎಂಡಿ ಕಲ್ಲೇಶ್‌ರನ್ನು ಸಿದ್ದರಾಮಯ್ಯ ಅಮಾನತುಗೊಳಿಸಿದ್ದರು. ಅಮಾನತುಗೊಂಡ ಅಧಿಕಾರಿ ಕಲ್ಲೇಶ್ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಈಗ ಇಡಿ ಅಧಿಕಾರಿಗಳ ವಿರುದ್ಧ ದೂರು ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
Advertisement
Advertisement
ಕಲ್ಲೇಶ್ ವಿರುದ್ಧ ಇರುವ ಆರೋಪಗಳೇನು?
ಎಸ್‌ಸಿ/ಎಸ್‌ಟಿ ನಿಗಮಕ್ಕೆ ಬರಬೇಕಿದ್ದ ಬಡ್ಡಿ ಹಣದ ವಿಷಯ ಮರೆಮಾಚಿ 60 ಲಕ್ಷದ 83 ಸಾವಿರ ಬಡ್ಡಿ ಹಣಕ್ಕೆ ಸೂಕ್ತ ದಾಖಲೆ ನೀಡಿಲ್ಲ. ವಿದ್ಯಾರ್ಥಿ ನಿಲಯದ ಅಗತ್ಯ ಸಾಮಾಗ್ರಿಗಳ ಬೇಡಿಕೆ ಇಲ್ಲದೇ ಇದ್ದರೂ ಖರೀದಿ. ಸಾಮಾಗ್ರಿಗಳ ಖರೀದಿ ಟೆಂಡರ್‌ನಲ್ಲಿ ಲೋಪ.
ಎಸ್‌ಸಿ/ಎಸ್‌ಟಿ ಹಣ ಸಮರ್ಪಕವಾಗಿ ಬಳಕೆ ಮಾಡದೇ ಇರುವುದು. ಎಸ್‌ಎಸ್‌ಎಲ್‌ಸಿ (SSLC) ಮಕ್ಕಳಿಗೆ ಗುಣಾತ್ಮಕ ತರಬೇತಿ ನೀಡಿಲ್ಲ. 75% ಗಿಂತ ಕಡಿಮೆ ಫಲಿತಾಂಶ ಬಂದ ವಸತಿ ಶಾಲೆ ಬಗ್ಗೆ ನಿಗಾವಹಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಶಕ್ತಿ ಯೋಜನೆ ಅಡಿ ಸರ್ಕಾರದಿಂದ ಸಾರಿಗೆ ಇಲಾಖೆಗೆ 1,413 ಕೋಟಿ ರೂ. ಬಾಕಿ – ರಾಮಲಿಂಗಾರೆಡ್ಡಿ