ಬೆಂಗಳೂರು: ವಾಲ್ಮೀಕಿ ನಿಗಮದ 21 ಕೋಟಿ ರೂ. ಮೊತ್ತವನ್ನು ಬಳ್ಳಾರಿ ಚುನಾವಣೆಗೆ ಖರ್ಚು ಮಾಡಿದ್ದಾಗಿ ಇಡಿ ತನ್ನ ದೋಷಾರೋಪ ಪಟ್ಟಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಆದ್ದರಿಂದ ಬಳ್ಳಾರಿ ಸಂಸದರ ಸ್ಥಾನದಿಂದ ತುಕಾರಾಂ ಅವರನ್ನು ಚುನಾವಣಾ ಆಯೋಗವು ಕೂಡಲೇ ವಜಾ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ವಾಲ್ಮೀಕಿ ನಿಗಮದ ಹಣ ಬಳಕೆ ಆಗಿರುವುದು ಸುಸ್ಪಷ್ಟ. ವಾಲ್ಮೀಕಿ ಅಭಿವೃದ್ಧಿ ನಿಗಮದ್ದು ಅಂತರರಾಜ್ಯ ಭ್ರಷ್ಟಾಚಾರದ ಹಗರಣ ಎಂದು ತಿಳಿಸಿದರು. ಇದನ್ನೂ ಓದಿ: ಅಭಿವೃದ್ಧಿ ವಿಷಯದಲ್ಲಿ ಸಂಘರ್ಷ ಬೇಡ – ಸಚಿವ ಎಂ.ಬಿ ಪಾಟೀಲ್‌ಗೆ ಕೇಂದ್ರ ಸಚಿವ ಹೆಚ್‌ಡಿಕೆ HD ಕುಮಾರಸ್ವಾಮಿ ಭರವಸೆ
ವಾಲ್ಮೀಕಿ ನಿಗಮದ 187 ಕೋಟಿ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಅವರು ಪ್ರಮುಖ ಪಾತ್ರ ವಹಿಸಿದ್ದಾಗಿ ಇಡಿ ಚಾರ್ಜ್ ಶೀಟಿನಲ್ಲಿ ತಿಳಿಸಿದೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇನ್‌ವೆಸ್ಟಿಗೇಶನ್ ಟೀಂ (ಎಸ್‌ಐಟಿ) ನಾಗೇಂದ್ರರ ಹೆಸರನ್ನು ಉಲ್ಲೇಖಿಸಿಲ್ಲ. ಅವರಿಗೆ ಕ್ಲೀನ್ ಚಿಟ್ ಕೊಡಲಾಗಿದೆ. ಎಸ್‌ಐಟಿ ಇಬ್ಬರು ಅಧಿಕಾರಿಗಳ ಹೆಸರನ್ನಷ್ಟೇ ಉಲ್ಲೇಖಿಸಿದೆ ಎಂದು ಆಕ್ಷೇಪಿಸಿದರು. ಇದನ್ನೂ ಓದಿ: ಇಡಿ ಚಾರ್ಜ್ ಶೀಟ್‌ನಲ್ಲಿ ನಾಗೇಂದ್ರ ಹೆಸರು ಇರುವುದಕ್ಕೆ ಸಿಎಂ ಹೊಣೆ ಹೊರಬೇಕು: ಅಶ್ವಥ್ ನಾರಾಯಣ್
ಎಸ್‌ಐಟಿ ಮೂಲಕ ಮಾಜಿ ಸಚಿವರನ್ನು ಉಳಿಸುವ ಧೋರಣೆ ಈ ಸರ್ಕಾರದ್ದು. ಸರ್ಕಾರದ ಹಸ್ತಕ್ಷೇಪ, ಬೆಂಬಲ ಇಲ್ಲದೆ, ವಾಲ್ಮೀಕಿ ನಿಗಮದ ಹಗರಣ ನಡೆಯಲು ಸಾಧ್ಯವೇ ಇಲ್ಲ. ಮಹರ್ಷಿ ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಹಗರಣವನ್ನು ಮುಚ್ಚಿಹಾಕುವ ಕೆಲಸವನ್ನು ಎಸ್‌ಐಟಿ ಮಾಡುತ್ತಿರುವುದು ಸರಿಯಲ್ಲ. ಎಸ್‌ಐಟಿ ತನಿಖೆ, ಚಾರ್ಜ್ ಶೀಟ್ ಬಗ್ಗೆ ಜನರಿಗೆ ದೊಡ್ಡ ಶಂಕೆ, ಅನುಮಾನ ಇದೆ ಎಂದರು. ಇದನ್ನೂ ಓದಿ: ಸಿಎಂ ರಾಜೀನಾಮೆ ನಿಶ್ಚಿತ, ಖಾಲಿಯಾಗುವ ಸ್ಥಾನಕ್ಕೆ ಹಗ್ಗಜಗ್ಗಾಟ: ವಿಜಯೇಂದ್ರ ಟಾಂಗ್
ಎನ್‌ಐಎ ವರದಿ ಬಂದಿದೆ. ಈ ವರದಿ ಪ್ರಕಾರ ಭಯೋತ್ಪಾದಕರು ಮೊದಲು ಕರ್ನಾಟಕ ರಾಜ್ಯದ ಬಿಜೆಪಿ ಕಚೇರಿ ಜಗನ್ನಾಥ ಭವನವನ್ನು ಟಾರ್ಗೆಟ್ ಮಾಡಿದ್ದು ಗೊತ್ತಾಗಿದೆ. ಜಗನ್ನಾಥ ಭವನವನ್ನು ಸ್ಫೋಟಿಸುವುದು ಅವರ ಗುರಿಯಾಗಿತ್ತು. ಅವರ ಯೋಜನೆ ಯಶ ಪಡೆಯದೆ ರಾಮೇಶ್ವರಂ ಕೆಫೆಯನ್ನು ಸ್ಫೋಟಿಸಿದ್ದಾರೆ ಎಂದು ವರದಿ ತಿಳಿಸಿದೆ. ರಾಜ್ಯದಲ್ಲಿ ಭಯೋತ್ಪಾದಕರು ಬಿಜೆಪಿ ಕಚೇರಿಯನ್ನು ಗುರಿಯಾಗಿ ಮಾಡಿದ್ದು ಇದು ಎರಡನೇ ಬಾರಿ. ಮೊದಲ ಬಾರಿ ಬಿಜೆಪಿ ಕಚೇರಿ ಮುಂಭಾಗದಲ್ಲಿ ಬ್ಲಾಸ್ಟ್ ಆಗಿತ್ತು. ಆದರೆ ಸಾವು ನೋವು ಸಂಭವಿಸಿರಲಿಲ್ಲ. ಕರ್ನಾಟಕದಲ್ಲಿ ಗೂಢಚಾರಿ ಸಂಸ್ಥೆ ಏನು ಕೆಲಸ ಮಾಡುತ್ತಿದೆ? ಗೃಹ ಇಲಾಖೆ ಏನು ಕೆಲಸ ಮಾಡುತ್ತಿದೆ? ಬಸ್ 24 ಗಂಟೆ ಇಲ್ಲಿ ನಿಂತಿರುತ್ತದೆ. ಏನು ಕೆಲಸ ಮಾಡುತ್ತಿದ್ದಾರೆ? ಪೊಲೀಸರು, ಇಂಟೆಲಿಜೆನ್ಸ್ ವಿಭಾಗ ಏನು ಕೆಲಸ ಮಾಡುತ್ತಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ ಅನುದಾನವನ್ನು ಕೇಂದ್ರ ತಕ್ಷಣವೇ ಬಿಡುಗಡೆಗೊಳಿಸಲಿ : ಎಚ್.ಕೆ ಪಾಟೀಲ್