Valmiki Corporation Scam | ಹೈದರಾಬಾದ್‌ನಲ್ಲೇ ಬೀಡುಬಿಟ್ಟ ಎಸ್‌ಐಟಿ – ಒಟ್ಟು 16 ಕೆಜಿ ಚಿನ್ನ ಜಪ್ತಿ

Public TV
1 Min Read
94 cr Valmiki corpn scam Union Bank files plaint with CBI suspends 3 officials

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಕೇಸ್‌ (Valmiki Corporation Corruption Case) ರಾಜಕೀಯ ಕೆಸರೆಚಾಟಕ್ಕೆ ಕಾರಣವಾಗಿದೆ. ಎಸ್‌ಐಟಿ ತನಿಖೆ ಮಧ್ಯೆಯೇ ಇಸಿಐಆರ್ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿಗಮದ ಮಾಜಿ ಸಚಿವ ಬಿ.ನಾಗೇಂದ್ರರನ್ನ (BN Nagendra) ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ (SIT Team) ಹೈದರಾಬಾದ್‌ನಲ್ಲೇ ಬೀಡುಬಿಟ್ಟಿದೆ.

VALMIKI SATYANARAYAN VARMA

ಎಸ್‌ಐಟಿ ತನಿಖೆ ಚುರುಕುಗೊಳಿಸಿದ್ದು, ಈವರೆಗೂ 37 ಕೋಟಿ ರೂ.ಗಿಂತಲೂ ಅಧಿಕ ಹಣ ಹಾಗೂ 16 ಕೆ.ಜಿಗೂ ಹೆಚ್ಚು ಚಿನ್ನವನ್ನ ವಶಪಡಿಸಿಕೊಂಡಿದೆ. ಹೈದ್ರಾಬಾದ್‌ನಲ್ಲೇ ಬೀಡುಬಿಟ್ಟಿರೋ ಎಸ್‌ಐಟಿ ಸೈಬರ್ ತಜ್ಞರ ತಂಡ, ಹೈದರಾಬಾದ್‌ನ ಫಸ್ಟ್‌ ಫೈನಾನ್ಸ್‌ ಕ್ರೆಡಿಟ್‌ ಕೋ–ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಸತ್ಯನಾರಾಯಣ ವರ್ಮಾಗೆ ಸಂಬಂಧಿಸಿದ ಕಚೇರಿ ಹಾಗೂ ಕೆಲ ಹಣಕಾಸು ವ್ಯವಹಾರದ ತನಿಖೆ ನಡೆಸುತ್ತಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇರೋದು ಹಗರಣಗಳಲ್ಲಿ ಮುಳುಗಿರುವ ಸರ್ಕಾರ: ನಿಖಿಲ್ ಕುಮಾರಸ್ವಾಮಿ

Valmiki Scam Padmanabh

ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ಬಳಿಕ ನಗದು ಸಂಗ್ರಹ ಮಾಡಿದ್ದ ಹಿನ್ನೆಲೆ, ಎಲ್ಲಾ ಬ್ಯಾಂಕ್ ಗಳ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ. ಮೂಲ ಖಾತೆದಾರರನ್ನ ವಿಚಾರಣೆ ನಡೆಸಿ ಹೇಳಿಕೆ ದಾಖಲು ಮಾಡಿಕೊಳ್ಳುತ್ತಿರುವ ತಂಡ ಸತ್ಯನಾರಾಯಣ ವರ್ಮನನ್ನ ವಿಚಾರಣೆಗೆ ಒಳಪಡಿಸಿ ತನಿಖೆ ನಡೆಸಲಾಗುತ್ತಿದೆ. ಇನ್ನು ಸತ್ಯನಾರಾಯಣ ವರ್ಮಾ ವಿಚಾರಣೆ ಮಾಡಲು ಇಡಿ (ED) ಸಹ ಮುಂದಾಗಿದ್ದು, ಎಸ್‌ಐಟಿ ಕಸ್ಟಡಿ ಮುಗಿಯುತ್ತಿದ್ದಂತೆ ವಶಕ್ಕೆ ಪಡೆಯಲು ಮುಂದಾಗಿದೆ. ಇದನ್ನೂ ಓದಿ: ದರ್ವೇಶ್ ಗ್ರೂಪ್‌ನಿಂದ ವಂಚನೆ – ಸಿಐಡಿ ದಾಳಿ ವೇಳೆ ಕೋಟ್ಯಂತರ ರೂ. ಪತ್ತೆ

Valmiki Scam Former Minister Nagendras aide questioned Ballari

ಕಳೆದ ಎರಡು ದಿನಗಳ ಹಿಂದೆಯಷ್ಟೇ ಹೈದರಾಬಾದ್‌ನ ಎರಡು ಸ್ಥಳಗಳಲ್ಲಿ ಶೋಧ ನಡೆಸಿದ್ದ ಎಸ್‌ಐಟಿ, 6 ಕೆಜಿ ಚಿನ್ನ ಹಾಗೂ 2.50 ಕೋಟಿ ರೂ. ನಗದು ಹಣವನ್ನ ವಶಪಡಿಸಿಕೊಂಡಿತ್ತು. ಆರೋಪಿ ಸತ್ಯನಾರಾಯಣ ವರ್ಮನಿಂದ 5 ಕೆಜಿ ಚಿನ್ನ ಹಾಗೂ ಕಾಕಿ ಶ್ರೀನಿವಾಸ್‌ನಿಂದ 1 ಕೆಜಿ ಚಿನ್ನವನ್ನ ಜಪ್ತಿ ಮಾಡಿಕೊಂಡಿತ್ತು. ಇದನ್ನೂ ಓದಿ: ರಾಮನಗರ ಜಿಲ್ಲೆ ಹೆಸರನ್ನು ಮರು ಸ್ಥಾಪನೆ ಮಾಡೇ ಮಾಡ್ತೀವಿ – ಡಿಕೆಶಿಗೆ ನಿಖಿಲ್ ಸವಾಲ್

Share This Article